ಭಾವೈಕ್ಯ ಧರ್ಮ ಸಮ್ಮೇಳನ

ಚಿಕ್ಕನಾಯಕನಹಳ್ಳಿ

        ವೀರಶೈವ ಮಠಗಳು ಅಕ್ಷರ ದಾಸೋಹ, ಅನ್ನದಾಸೋಹದ ಮೂಲಕ ಸಮಾಜದಲ್ಲಿ ಪ್ರಸಿದ್ದಿ ಪಡೆದಿವೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

           ತಾಲ್ಲೂಕಿನ ಕುಪ್ಪೂರು ಗದ್ದುಗೆ ಮಠದಲ್ಲಿ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿ ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಮಠಗಳು ಕಾರಣವಾಗಿದ್ದು, ಕರ್ಮ ಸಿದ್ದಾಂತವನ್ನು ಸಾರಿದೆ. ಮಾನವೀಯ ಧರ್ಮವನ್ನು ಇಟ್ಟುಕೊಂಡಿರುವುದು ವೀರಶೈವ ಧರ್ಮ ಎಂದ ಅವರು ಸಮಾಜದಲ್ಲಿ ಎಲ್ಲರೂ ಭಾವೈಕ್ಯತೆಯಿಂದ ಬದುಕುವುದು ಮುಖ್ಯ. ಸಮಾಜದಲ್ಲಿನ ಅಶಕ್ತರಿಗೆ ನೆರವಾಗಿ ಬಾಳಿದರೆ ಅದೇ ಸೇವೆ ಎಂದರು.

          ಧರ್ಮ ನಂದಿನಿ ಪ್ರಶ್ತಸಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವೆ ಲೀಲಾವತಿ ಆರ್.ಪ್ರಸಾದ್ ಮಾತನಾಡಿ ಕರ್ನಾಟಕ ವೀರಶೈವ ಮಠಗಳು ಮಾಡುತ್ತಿರುವ ಸೇವೆ ಯಾರೂ ಮಾಡುತ್ತಿಲ್ಲ ದಾಸೋಹ ಹಾಗೂ ಸಮಾಜದ ಸೇವೆ ಮಾಡುತ್ತಿರುವುದು ವೀರಶೈವ ಮಠಗಳು.
ಕುಪ್ಪೂರು ಗದ್ದುಗೆ ಮಠದ ಡಾ||ಯತೀಶ್ವರಶಿವಾಚಾರ್ಯಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬರ ದಾನ ಮಾಡುವ ಮನಸ್ಸನ್ನು ಹೊಂದಬೇಕು. ಧರ್ಮ ಸಂಸ್ಕಾರವನ್ನು ನೀಡುವ ಮಠಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಿ ಎಂದ ಸಲಹೆ ನೀಡಿದ ಅವರು ವ್ಯವಸ್ಥೆಗೆ ಬದ್ದವಾಗಿ ನಮ್ಮದಲ್ಲದೆ ಇರುವುದನ್ನು ಸ್ವೀಕರಿಸಬೇಡಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ಸಮಾಜದ ಒಳಿತಿಗಾಗಿ ಉಪಯೋಗಿಸುವಂತೆ ಸಲಹೆ ನೀಡಿದರು.

           ಗದುಗಿನ ಬಾಳೆಹೊಸೂರಿನ ದಿಂಗಾಲೇಶ್ವರ ಮಠದ ಶ್ರೀದಿಂಗಾಲೇಶ್ವರಶಿವಾಚಾರ್ಯಸ್ವಾಮೀಜಿ ಮಾತನಾಡಿ ಧರ್ಮದ ಸೇವೆಯೆ ಸಮಾಜದ ಸೇವೆ ಎಂದರು.ಕಾರ್ಯಕ್ರಮದಲ್ಲಿ ಗುರುಮೂರ್ತಿ ಗುರೂಜಿ ದಿನಚರಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು.ಸಮ್ಮೇಳನದಲ್ಲಿ ಹೊನ್ನವಳ್ಳಿ ಮಠದ ಶಿವಪ್ರಕಾಶಶಿವಾಚಾರ್ಯಸ್ವಾಮೀಜಿ, ಮಾದೀಹಳ್ಳಿ ಮಠದ ಚನ್ನಮಲ್ಲಿಕಾರ್ಜುನಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

            ಈ ಸಂದರ್ಭದಲ್ಲಿ ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ರವರಿಗೆ ಧರ್ಮನಂದಿನಿ ಪ್ರಶಸ್ತಿ, ಎಸ್.ಭಗಿರಥ ಇವರಿಗೆ ಧರ್ಮ ರತ್ನಾಕರ ಪ್ರಶಸ್ತಿ, ಡಾ.ಸಂಗಮೇಶ್ ಇವರಿಗೆ ಕುಪ್ಪೂರು ಮರುಳಸಿದ್ದಶ್ರೀ ಪ್ರಶಸ್ತಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 20 ಜನ ಹಿರಿಯ ನಾಗರೀಕರಿಗೆ ಗುರು ದೀಕ್ಷೆ ನೀಡಿ ಸನ್ಮಾನಿಸಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap