ಬಂಡೆಪಾಳ್ಯದಿಂದ ನಾಪತ್ತೆಯಾಗಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪ್ರತ್ಯಕ್ಷ್ಯವಾದ ಇಂಜಿನಿಯರಿಂಗ್ ವಿದ್ಯಾರ್ಥಿ

ಬೆಂಗಳೂರು

        ಕೆಲದಿನಗಳ ಹಿಂದೆ ಗುರು ಎಲ್ಲಿಗೆ ದಾರಿ ತೋರುತ್ತಾನೋ, ಅಲ್ಲಿಗೆ ಹೊರಡುವೆ ಎಂದು ಪತ್ರ ಬರೆದಿಟ್ಟು ನಗರದ ಬಂಡೆಪಾಳ್ಯದಿಂದ ನಾಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವ ಪ್ರಕರಣ ರೋಚಕವಾಗಿದೆ

        ಯಲಹಂಕದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಬಂಡೇಪಾಳ್ಯದ ಸೋಮಸಂದ್ರಪಾಳ್ಯದ ದೇವಾಂಶ್ ಕಳೆದ ಜ.18ರಂದು ಕಾಣೆಯಾಗಿ ಎರಡು ದಿನಗಳ ನಂತರ ದೆಹಲಿಯಲ್ಲಿ ಪತ್ತೆಯಾಗಿರುವುದು ಕೂತೂಹಲಕಾರಿಯಾಗಿದೆ.

        ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ದೇವಾಂಶ್‍ನನ್ನು ವಶಕ್ಕೆ ತೆಗೆದುಕೊಂಡ ಬಂಡೇಪಾಳ್ಯ ಪೊಲೀಸರು ವಿಚಾರಣೆ ಕೈಗೊಂಡಾಗ ಹಿಂದಿ ಸಿನಿಮಾ ಮಸಾನ್ ನೋಡಿ ಅದರಲ್ಲಿ ಬರುವ ವಾರಣಾಸಿಯ ಸನ್ಯಾಸಿಗಳಿಗೆ ಮನಸೋತು ಉತ್ಪ್ರೇಕ್ಷೆಗೊಂಡು, ತಾನು ಕೂಡ ಸನ್ಯಾಸಿಯಾಗಬೇಕೆಂದು ನಿರ್ಧರಿಸಿ ವಾರಣಾಸಿಯ ಕೆಲ ಸಂಪ್ರದಾಯದ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಹೊರಟಿದ್ದಾಗಿ ತಿಳಿಸಿದ್ದಾನೆ.

        ದೇವಾಂಶ್‍ನನ್ನು ನಗರಕ್ಕೆ ಕರೆದುಕೊಂಡು ಬಂದಿರುವ ಪೊಲೀಸರು ಆತನನ್ನು ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸುವಂತೆ ಕುಟುಂಬದವರಿಗೆ ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.

         ತನಗೆ ಖರ್ಚಿಗೆ ಬೇಕಾದ 3 ಸಾವಿರ ಹಣವನ್ನ ಡ್ರಾ ಮಾಡಿಕೊಂಡು ಡೆಬಿಟ್ ಕಾರ್ಡ್,ಎಟಿಎಂ ಕಾರ್ಡ್‍ನ್ನು ಮನೆಯಲ್ಲಿಟ್ಟು ಮನೆ ಬಿಟ್ಟು ಹೋಗುವಾಗ ದೇವಾಂಶ್ ಹಿಂದಿಯಲ್ಲಿ ಗುರು ಎಲ್ಲಿಗೆ ದಾರಿ ತೋರುತ್ತಾನೋ, ಅಲ್ಲಿಗೆ ಹೊರಡುವೆ ಎಂದು ಪತ್ರ ಬರೆದಿಟ್ಟಿದ್ದನು ಗೆಳೆಯರೊಂದಿಗೆ ಮಾತನಾಡಿದ್ದ ದೇವಾಂಶ್ ತನಗೆ ಗಾಂಜಾ ಬೇಕು ಎಂದು ತಿಳಿಸಿದ್ದ ಗಾಂಜಾ ಚಟವಿದ್ದರೂ ಮನೆಯಲ್ಲಿ ಅದನ್ನು ಗೌಪ್ಯವಾಗಿರಿಸಿದ್ದನು ದೇವಾಂಶ್ ನಾಪತ್ತೆಯಾಗಿದ್ದರಿಂದ ಆತಂಕಗೊಂಡು ಆತನ ಚಿಕ್ಕಪ್ಪ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

          ಪ್ರಕರಣ ದಾಖಲಿಸಿ ತನಿಖೆಗಾಗಿ ಬಂಡೇಪಾಳ್ಯ ಪೊಲೀಸರು. ಪ್ರತ್ಯೇಕ ತಂಡವನ್ನ ರಚಿಸಿ, ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಹುಡುಕಾಟ ನಡೆಸಿದ್ದರು ಮತ್ತೊಂದೆಡೆ ಮನೆಯಲ್ಲಿ ಸಿಕ್ಕ ಪತ್ರ ಹಾಗೂ ಆತನ ಮೊಬೈಲ್ ಲ್ಯಾಪ್ ಟಾಪ್‍ನ್ನೂ ಪರಿಶೀಲನೆ ನಡೆಸಿದಾಗ ಲ್ಯಾಪ್ ಟಾಪ್‍ನಲ್ಲಿ ಅತಿ ಹೆಚ್ಚು ಬಾರಿ ಮಸಾನ್ ಸಿನಿಮಾ ವೀಕ್ಷಿಸಿ ಸನ್ಯಾಸತ್ವ ಕುರಿತು ಕೆಲ ಸಂಶೋಧನೆ ಮಾಡಿರುವುದು ಬಯಲಾಗಿದೆ.

         ಪೊಲೀಸರು ಮೊದಲು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಶೋಧ ನಡೆಸಿ ನಾಪತ್ತೆಯಾದ ಸಮಯದ ಅಂದಾಜಿನ ಮೇರೆಗೆ ಪರಿಶೀಲನೆ ನಡೆಸಿದಾಗ ಬೆಂಗಳೂರಿನಿಂದ ವಾರಣಾಸಿಗೆ ಹೊರಟ ರೈಲಿನ ಬಗ್ಗೆ ವಿಚಾರಿಸಿ ಆರ್‍ಪಿಎಫ್  ಅವರ ಸಹಕಾರದಿಂದ ಸಿಸಿಟಿವಿ ತೆಗೆದಿದಾಗ ಸಂಜೆ 4:20 ರ ಸುಮಾರಿಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಬಳಿ ಬಂದಿದ್ದ ದೆಹಲಿಗೆ ಹೊರಟಿರುವುದು ಪತ್ತೆಯಾಗಿದೆ ಅದರ ಮಾಹಿತಿ ಆಧರಿಸಿ ಪೊಲೀಸರು ಪರಿಶೀಲನೆ ನಡೆಸಿ ಹುಡುಕಾಟ ನಡೆಸಿದಾಗ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link