ದಾವಣಗೆರೆ
ನಗರದ ಹೊರವಲಯದ ಶಿವಗಂಗೋತ್ರಿ ಆವರಣದಲ್ಲಿ ಬುಧವಾರ ನಡೆದ ದಾವಣಗೆರೆ ವಿವಿಯ 6ನೇ ಘಟಿಕೋತ್ಸವದಲ್ಲಿ ಪುರುಷ ವಿದ್ಯಾರ್ಥಿಗಳಿಗಿಂತ, ಮಹಿಳಾ ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ಪದವಿ ಸ್ವೀಕರಿಸಿದಲ್ಲದೇ, ಹೆಚ್ಚು ಸ್ವರ್ಣ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ಸ್ನಾತಕ ಪದವಿ ಪಡೆದ 10,648 ವಿದ್ಯಾರ್ಥಿಗಳ ಪೈಕಿ, 4,205 ಪುರುಷ ವಿದ್ಯಾರ್ಥಿಗಳು ಮಾತ್ರ ಪದವಿ ಪಡೆದರೆ, 6443 ಮಹಿಳಾ ವಿದ್ಯಾರ್ಥಿನಿಯರು ಪದವಿ ಪಡೆಯುವ ಮೂಲಕ ಅಂದರೆ, ಪುರುಷ ವಿದ್ಯಾರ್ಥಿಗಳಿಗಿಂತ ಹೆಚ್ಚು ಸುಮಾರು 2,238 ಮಹಿಳಾ ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆದರೆ, ಇನ್ನೂ ಸ್ನಾತಕೋತ್ತರ ಪದವಿ ಪಡೆದ ಒಟ್ಟು 1,895 ವಿದ್ಯಾರ್ಥಿಗಳ ಪೈಕಿ ಕೇವಲ 711 ಪುರುಷ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದು, 1,184 ಸ್ನಾತಕೋತ್ತರ ಪದವಿ ಪಡೆಯುವ ಮೇಲುಗೈ ಸಾಧಿಸಿದಾರೆ. ಬುಧವಾರ ನಡೆದ ಘಟಿಕೋತ್ಸವದಲ್ಲಿ ಒಟ್ಟು 12,543 ವಿದ್ಯಾರ್ಥಿಗಳು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದರು. 13 ವಿದ್ಯಾರ್ಥಿಗಳು ಪಿಹೆಚ್‍ಡಿ ಪಡೆದರು.
ಇನ್ನೂ ಸ್ವರ್ಣ ಪದಕ ಪಡೆಯುವಲ್ಲೂ ಮಹಿಳಾ ವಿದ್ಯಾರ್ಥಿಗಳೇ ಮುಂದಿದ್ದು, 2017-18ನೇ ಸಾಲಿನಲ್ಲಿ ವಿವಿಯು ಹೊಂದಿದ್ದ ಒಟ್ಟು 62 ಸ್ವರ್ಣ ಪದಕಗಳಲ್ಲಿ 24 ಮಹಿಳಾ ವಿದ್ಯಾರ್ಥಿಗಳು ಹಾಗೂ 8 ಪುರುಷ ವಿದ್ಯಾರ್ಥಿಗಳು ಸೇರಿ 32 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಇದರಲ್ಲಿ ದಾವಣಗೆರೆ ವಿವಿಯ ಸ್ನಾತಕೋತರ ವಾಣಿಜ್ಯ ವಿಭಾಗದ ತೇಜಸ್ವಿನಿ ಕೆ.ಸಿ.6 ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
