ಗುಬ್ಬಿ
ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃಧ್ದಿ ಹೊಂದುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃಧ್ದಿ ಹೊಂದಲು ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಇಂದು ದೇಶದಾಧ್ಯಂತ ಶ್ರಧ್ದಾ ಭಕ್ತಿಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ನಿವೃತ್ತ ನೌಕರರ ಸಮಘದ ತಾಲ್ಲೂಕು ಅಧ್ಯಕ್ಷ ಎಂ.ರಾಮಯ್ಯ ತಿಳಿಸಿದರು.
ತಾಲ್ಲೂಕು ನಿವೃತ್ತ ನೌಕರರ ಸಂಘದವತಿಯಿಂದ ಪಟ್ಟಣದ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ 70 ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸಂವಿದಾನದ ಆಶೋತ್ತರಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಸಮೃಧ್ದ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಈ ನಿಟ್ಟಿನಲ್ಲಿ ನಮ್ಮ ಯುವಕರು ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಕಲಿಯುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆನೀಡಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ರಾಷ್ಟ್ರ ಪ್ರಗತಿ ಪಥದತ್ತ ಸಾಗುತ್ತಿದ್ದು ಯುವಕರು ಉತ್ತಮ ಶಿಕ್ಷಣ ಶಿಕ್ಷಣ ಪಡೆಯುವ ಮೂಲಕ ದೇಶವನ್ನು ಮತ್ತಷ್ಟು ಅಅಭಿವೃಧ್ದಿಯತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ತಿಳಿಸಿದ ಅವರು ನಮ್ಮ ಭಾರತ ದೇಶ ಇಡೀ ಜಗತ್ತಿಗೆ ಮಾದರಿಯಾಗಿದ್ದು ದೇಶ ಸೇವೆಗೆ ಪ್ರತಿಯೊಬ್ಬರು ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ನಮ್ಮ ದೇಶದ ಪ್ರಜಾ ತಂತ್ರ ವ್ಯವಸ್ಥೆ ಮಹತ್ವ ಪೂರ್ಣವಾದುದಾಗಿದ್ದು ಪ್ರತಿಯೊಬ್ಬ ಭಾರತೀಯರು ನಮ್ಮ ರಾಷ್ಟ್ರದ ಏಕತೆ ಮತ್ತು ಐಕ್ಯತೆಗೆ ಮುಂದಾಗಬೇಕಿದೆ ಎಂದು ತಿಳಿಸಿದರು
ಸಂಘದ ಉಪಾಧ್ಯಕ್ಷ ಆರ್.ವೆಂಕಟೆಶಯ್ಯ ಮಾತನಾಡಿ ಪ್ರತಿವರ್ಷವೂ ಸಹ ಜನವರಿ 26 ರಂದು ಆಚರಣೆ ಮಾಡುತ್ತ ಬಂದಿದ್ದು ಸಂವಿಧಾನದ ಆಶೋತ್ತರಗಳನ್ನು ಪ್ರತಿಯೂಬ್ಬರೂ ತಿಳಿಯಬೇಕಾಗಿದೆ. ಸಂವಿಧಾನ ರಚನೆ ಮಾಡುವ ಮೂಲಕ ಸಮಾಜದಲ್ಲಿನ ಎಲ್ಲಾ ಕ್ಷೇತ್ರಗಳಿಗೂ ಸಮಾನಂತರವಾಗಿ ಈ ದೇಶದಲ್ಲಿ ಹಕ್ಕುಗಳನ್ನು ನೀಡಬೇಕು ಎಂದು ಸಂವಿದಾನ ವಿಶೇಷವಾಗಿ ತಿಳಿಸಿದೆ. ಸಂವಿದಾನದ ರಚನೆಯಲ್ಲಿಯೆ ಬಹಳ ದೂರ ದೃಷ್ಟಿ ಇಟ್ಟುಕೊಂಡು ರಚನೆ ಮಾಡಲಾಗಿದ್ದು ಪ್ರಪಂಚದಲ್ಲಿ ಯಾವುದೆ ಸಂವಿದಾನಗಳು ಇಷ್ಟು ಅರ್ಥಪೂರ್ಣವಾಗಿಲ್ಲ ಭಾರತದಂತಹ ದೇಶದಲ್ಲಿ ನಮ್ಮ ಸಂವಿಧಾನವು ಪ್ರತಿಯೂಬ್ಬ ವ್ಯಕ್ತಿಯ ಬದುಕನ್ನು ಕಟ್ಟಿಕೊಳ್ಳಲು ಬೇಕಾಗಿರುವಂತಹ ಎಲ್ಲಾ ವಿಚಾರವನ್ನು ನಮ್ಮ ಸಂವಿದಾನ ನಮಗೆ ನೀಡಿದೆ ಎಂದರು.
ಸಂಘದ ನಿರ್ಧೇಶಕ ಜಿ.ಗೋವಿಂದಯ್ಯ ಮಾತನಾಡಿ ಸಂವಿದಾನದ ಚೌಕಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ದೇಶದಲ್ಲಿ ಯಾವುದೆ ಸಮಸ್ಯೆಗಳು ಇರುವುದಿಲ್ಲ. ವಿವಿಧತೆಯಲ್ಲಿ ಏಕತೆ ನೀಡಿರುವಂತಹ ಮಹಾನ್ ದೇಶವಾಗಿದೆ. ಇಂದಿನ ಯುವಶಕ್ತಿ ದೇಶದಲ್ಲಿ ನಡೆಯುವಂತಹ ಪ್ರತಿಯೊಂದು ಆಚರಣೆಗಳನ್ನು ಸಮರ್ಪಕವಾಗಿ ತಿಳಿದುಕೊಂಡು ಸುಸಂಸ್ಕತ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀಸಿದ್ದಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಣೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ರೇಣುಕಾಪ್ರಸಾದ್, ಎನ್.ಮಹದೇವಯ್ಯ, ಜಿ.ಆರ್.ಅಪ್ಪಾಜಿ, ಶ್ರೀನಿವಾಸಮೂರ್ತಿ, ಆರ್.ವೆಂಕಟೇಶಯ್ಯ, ಗುರಪ್ಪ, ಚನ್ನಬಸವೇಗೌಡ, ಧರ್ಮಪ್ಪ, ಜಿ.ಟಿ.ಪಾಲನೇತ್ರ, ವಿಶ್ವನಾಥದತ್ತ, ಕೆಂಪಗಂಗಯ್ಯ ಮುಂತಾದವರು ಭಾಗವಹಿಸಿದ್ದರು.