ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಶಿವಗಣಾರಾಧನಾ ಮಹೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ:

         ಸಿದ್ದಗಂಗಾ ಮಠದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಶಿವಗಣಾರಾಧನಾ ಮಹೋತ್ಸವವನ್ನು ತಾಲ್ಲೋಕಿನಲ್ಲಿ ವಿಶೇಷವಾಗಿ ಆಚರಿಸಲು ಉದ್ದೇಶಿಸಿದ್ದು ಅದರ ಪೂರ್ವಭಾವಿ ಸಭೆಯನ್ನು 28 ರ ಸೋಮವಾರ ಮಧ್ಯಾನಃ 3 ಗಂಟೆಗೆ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರೆಯಲಾಗಿದೆ ಎಂದು ಶಾಸಕ ಮಸಾಲಾ ಜಯರಾಂ ತಿಳಿಸಿದರು.

         ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಶ್ರೀಗಳ ಶಿವಗಣಾರಾಧನಾ ಮಹೋತ್ಸವವನ್ನು ತುರುವೇಕೆರೆಯಲ್ಲಿ ಆಚರಿಸುವ ಬಗ್ಗೆ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು ಶ್ರೀ ಶಿವಕುಮಾರಮಹಾಸ್ವಾಮಿಗಳು ತ್ರಿವಿದ ದಾಸೋಹಿಗಳಾಗಿ ಲಕ್ಷಾಂತರ ಜನರ ಆರಾಧ್ಯದೇವತೆಯಾಗಿದ್ದರು. ಅಂತಹ ಮಹಾನ್ ಪುರುಷನ ಆರಾಧನಾ ಮಹೋತ್ಸವವನ್ನು ತಾಲ್ಲೂಕಿನಾದ್ಯಂತ ಭಕ್ತರೊಡಗೂಡಿ ಅತ್ಯಂತ ವಿಶೇಷವಾಗಿ ಆಚರಿಸಬೇಕಾಗಿದೆ.

           ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಸ್ವಾಮೀಜಿಗಳಾದ ಶ್ರೀ ಶ್ರೀ ಸಿದ್ದಲಿಂಗಸ್ವಾಮೀಜಿಗಳನ್ನು ಆಹ್ವಾನಿಸುವ ಜೊತೆಗೆ ಹರಗುರು ಚರಮೂರ್ತಿಗಳ ದಿವ್ಯಸಾನಿದ್ಯದಲ್ಲಿ ಕಾರ್ಯಕ್ರಮ ಆಯೋಜನೆ, ದಾಸೋಹ, ದಿನಾಂಕ ನಿಗದಿ ಸೇರಿದಂತೆ ಆಚರಣಾ ಕಾರ್ಯಕ್ರಮಗಳ ರೂಪುರೇಷೆ ಕೈಗೊಳ್ಳುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಂದು ನಡೆಯುವ ಪೂರ್ವಬಾವಿ ಸಭೆಗೆ ಜನಪ್ರತಿನಿಧಿಗಳು, ಗಣ್ಯರು, ಮುಖಂಡರು, ಅಧಿಕಾರಿ ವರ್ಗ, ಸಂಘ ಸಂಸ್ಥೆಗಳು ಸೇರಿದಂತೆ ತಾಲ್ಲೂಕಿನ ಎಲ್ಲಾ ಸದ್ಭಕ್ತರು ಪಕ್ಷಭೇದ ಮರೆತು ಪೂರ್ವಬಾವಿ ಸಭೆಯಲ್ಲಿ ಪಾಲ್ಗೋಳ್ಳುವಂತೆ ವಿನಂತಿಸಿದ್ದಾರೆ.

           ಶ್ರೀ ಸಿದ್ದಗಂಗಾ ಮಠದಲ್ಲಿ ಜನವರಿ 31 ರಂದು ಹಮ್ಮಿಕೊಂಡಿರುವ ಶ್ರೀಗಳ ಶಿವಗಣಾರಾದನಾ ಮಹೋತ್ಸವಕ್ಕೆ ಶಾಸಕರಾದಿಯಾಗಿ ತುರುವೇಕೆರೆ ತಾಲ್ಲೂಕಿನಾದ್ಯಂತ ಸಮಸ್ತ ಸಧ್ಬಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವಂತೆ ಮಠದ ಆಡಳಿತ ವತಿಯಿಂದ ಆಹ್ವಾನ ಬಂದಿರುವ ಹಿನ್ನಲೆಯಲ್ಲಿ ಅಂದು ಎಲ್ಲರೂ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಶ್ರೀಗಳ ಆತ್ಮಕ್ಕೆ ಶಾಂತಿ ಕೋರೋಣ ಎಂದರು.

         ಈ ಸಂಧರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಪ.ಪಂ.ಅಧ್ಯಕ್ಷ ಲಚ್ಚಿಬಾಬು, ಬಿಜೆಪಿ ಅಧ್ಯಕ್ಷ ದುಂಡ ರೇಣುಕಯ್ಯ, ವಕೀಲ ಧನಪಾಲ್, ಅರಳೀಕೆರೆ ಶಿವಯ್ಯ, ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ, ಯಜಮಾನ್ ಮಹೇಶ್, ವಿ.ಟಿ. ವೆಂಕಟರಾಮು, ಮಾಚೇನಹಳ್ಳಿ ಲೋಕೇಶ್ ಸೇರಿದಂತೆ ಅನೇಕ ಮುಖಂಡರುಗಳು ಪಾಲ್ಗೋಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link