ಕುಣಿಗಲ್‍ಗೆ ತರುಣ ಸಾಗರ್ ಮುನಿಗಳ ಗುರುಗಾಳದ ಪುಷ್ಪದಂತಸಾಗರ್ ಆಗಮನ

ಕುಣಿಗಲ್ :

          ಜೈನ ಮುನಿಗಳಲ್ಲೇ ಪ್ರಖ್ಯಾತಿ ಪಡೆದು ಇತ್ತೀಚೆಗಷ್ಟೆ ಜಿನೈಕ್ಯರಾದ ಮುನಿಶ್ರೀ ತರುಣಸಾಗರ್ ಅವರಿಗೆ ಗುರುಗಳಾಗಿದ್ದಂತಹ ಆಚಾರ್ಯಶ್ರೀ ಪುಷ್ಪದಂತ ಸಾಗರ್ ಮಹರಾಜರನ್ನು ಕುಣಿಗಲ್ ಜೈನ ಶ್ರಾವಕ ಶ್ರಾವಕಿಯರು ಬುಧವಾರ ಬೆಂಗಳೂರು ಮಾರ್ಗವಾಗಿ ಬಂದಂತಹ ಶ್ರೀಗಳನ್ನು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡರು.

          ಆಚಾರ್ಯಶ್ರೀ ಪುಷ್ಪದಂತ ಸಾಗರ್ ಮಹರಾಜರು ವಿಶ್ವವಿಖ್ಯಾತಿ ಪಡೆದ ಶ್ರೀಮುನಿಶ್ರೀ ತರುಣಸಾಗರ್ ಅವರ ಗುರುಗಳಾಗಿದ್ದರು. ಇವರು ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿ ಮಸ್ತಕಾಭಿಷೇಕವನ್ನು ಸಂಪನ್ನಗೊಳಿಸಿದ ಇವರು ಇದೇ ಮಾರ್ಗವಾಗಿ ಚನ್ನೈಗೆ ತೆರಳಿ ಅಲ್ಲಿ ಚಾತುರ್ಮಾಸ ಕೈಗೊಂಡು ಇದೀಗ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕ್ಕೆ ಹೋಗುವ ದಾರಿ ಮಧ್ಯೆ ಕುಣಿಗಲ್ ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಸುಪ್ರಸಿದ್ದ ಶ್ರೀ ಪಾಶ್ರ್ವನಾಥ ಜಿನ ಮಂದಿರದಲ್ಲಿ ಭಗವಂತನ ದರ್ಶನ ಪಡೆದರು.

        ನಂತರ ಶ್ರಾವಕ ಜೈನ ಸಮಾಜದ ಮುಖಂಡರಾದ ಡಿ.ಮೋಹನ್ ಕುಮಾರ್ ನಿವಾಸದಲ್ಲಿ ಆಹಾರ ಸೇವಿಸಿ ಸುರೇಂದ್ರಕುಮಾರ್ ನಿವಾಸದಲ್ಲಿ ಸಂಜೆ ಪಾದ ಪೂಜೆಯೊಂದಿಗೆ ಎಡೆಯೂರು ಮಾರ್ಗವಾಗಿ ಶ್ರವಣಬೆಳಗೊಳದ ಕಡೆಗೆ ವಿಹಾರ ಬೆಳಸಿದರು. ಆಚಾರ್ಯಶ್ರೀ ಪುಷ್ಪದಂತ ಸಾಗರ್ ಮಹರಾಜರ ಶಿಷ್ಯರು ಆದ ಮುನಿಗಳು ಮತ್ತು ಅವರ ಅಪಾರ ಭಕ್ತಗಣ ಮತ್ತು ಕುಣಿಗಲ್ ಜೈನ ಸಮಾಜದ ಪ್ರಮುಖರು ಸೇರಿದಂತೆ ಹಲವು ಶ್ರಾವಕ ಶ್ರಾವಕಿಯರು ಈ ಸಂದರ್ಭದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದು ಧನ್ಯರಾದರು. ಕುಣಿಗಲ್‍ಗೆ ತರುಣ ಸಾಗರ್ ಮುನಿಗಳ ಗುರುಗಾಳದ ಪುಷ್ಪದಂತಸಾಗರ್ ಆಗಮನ
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link