ಬೆಂಗಳೂರು
ಮೆಜೆಸ್ಟಿಕ್‍ನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಟರ್ಮಿನಲ್ 2 ಬಳಿ ಬಸ್‍ಗಾಗಿ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ 500 ರೂ ನೀಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಬೆದರಿಸಿ ಹಣ ದೋಚಿ ಪರಾರಿಯಾಗಿರುವ ಇಬ್ಬರು ಮಹಿಳೆಯರ ಬಂಧನಕ್ಕೆ ಉಪ್ಪಾರಪೇಟೆ ಪೊಲೀಸರು ಶೋಧ ನಡೆಸಿದ್ದಾರೆ.
ಟರ್ಮಿನಲ್ 2 ಬಳಿ ಶನಿವಾರ ರಾತ್ರಿ 12.15ರ ವೇಳೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಮಣಿಕಂಠ ಎಂಬುವರ ಬಳಿಗೆ ಬಂದ ಇಬ್ಬರು ಮಹಿಳೆಯರು 500 ರೂಗಳನ್ನು ತಾವೇ ಕೊಟ್ಟು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡಿದ್ದಾರೆ
ಆಟೋ ಸ್ವಲ್ಪ ದೂರ ಹೋದ ನಂತರ ಮಣಿಕಂಠನ ಪರ್ಸ್,ಹಣವನ್ನ ದೋಚಲು ಯತ್ನಿಸಿದಾಗ ಮಣಿಕಂಠ ವಿರೋಧಿಸಿ ರಕ್ಷಣೆಗಾಗಿ ಕೂಗಿಕೊಂಡಾಗ ಅತ್ಯಾಚಾರ ಮಾಡಲು ಬಂದಿರುವೆ ಎಂದು ಹೇಳುತ್ತೇವೆ ಎಂದು ಮಹಿಳೆಯರು ಬೆದರಿಸಿ ಮಣಿಕಂಠನ ಬಳಿಯಿದ್ದ ಹಣವನ್ನ ದೋಚಿ ಇಬ್ಬರು ಮಹಿಳೆಯರು ಹೋಗಿದ್ದಾರೆ.
ಹಣ ಕಳೆದುಕೊಂಡಿರುವ ಮಣಿಕಂಠ ಅವರು ಉಪ್ಪಾರಪೇಟೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪರಾರಿಯಾಗಿರುವ ಮಹಿಳೆಯರಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








