ಚಳ್ಳಕೆರೆ
ನಗರದ ತುಂಬೆಲ್ಲಾ ಈಗ ಮಹರ್ಷಿ ಶ್ರೀವಾಲ್ಮೀಕಿಯವರ ಜಯಂತ್ಯೋತ್ಸವ ಕಾರ್ಯಕ್ರಮದ ಸಿದ್ದತೆಗಳು ಬರದಿಂದ ನಡೆದಿದ್ದು, ಚಿತ್ರದುರ್ಗ ರಸ್ತೆ, ವಾಲ್ಮೀಕಿ ವೃತ್ತ, ನೆಹರೂ ವೃತ್ತ, ಬೆಂಗಳೂರು ರಸ್ತೆ ಮುಂತಾದ ಕಡೆಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯ ಕೋರುವ ಬಾರಿ ಗಾತ್ರದ ಕಟೌಟ್‍ಗಳು ಎಲ್ಲೆಡೆ ರಾರಾಜಿಸುತ್ತಿವೆ.
ವಾಲ್ಮೀಕಿ ಜಯಂತಿ ಯಶಸ್ಸಿ ಹಿನ್ನೆಲೆಯಲ್ಲಿ ನಗರದ ವಾಲ್ಮೀಕಿ ಯುವಕ ಸಂಘ ಶನಿವಾರ ಆಕರ್ಷಕ ಮೋಟಾರ್ ಬೈಕ್ ಮತ್ತು ಆಟೋರಿಕ್ಷಾ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡ, ನಾಯಕರ ಸಂಘದ ಅಧ್ಯಕ್ಷ ಎಚ್.ಎಂ.ಮಲ್ಲಪ್ಪನಾಯಕ ಮೋಟಾರ್ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹರ್ಷಿ ಶ್ರೀವಾಲ್ಮೀಕಿ ಜಯಂತಿ ಆಚರಣೆ ನಮ್ಮ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿ ಪರ ಚಿಂತನೆಗಳಿಗೆ ವೇದಿಕೆಯಾಗಿದೆ.
ವಾಲ್ಮೀಕಿ ಮಹರ್ಷಿಗಳ ಕೊಡುಗೆ ಅಪಾರವಾಗಿದ್ದು, ಅವರ ದಿವ್ಯ ಜ್ಞಾನದ ಫಲವಾಗಿ ನಾವೆಲ್ಲರೂ ಇಂದು ಈ ಮಹಾನ್ ಚೇತನವನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ. ಯಾವುದೇ ಸಮುದಾಯ ತನ್ನ ಸುಧೀರ್ಘ ಸಂಘಟನೆಗೆ ಯುವಕರನ್ನು ಪ್ರೇರೇಪಿಸಬೇಕಿದೆ. ಯುವಕರು ಮಾತ್ರ ಈ ಸಂಘಟನೆಯನ್ನು ಮತ್ತಷ್ಟು ರಚನಾತ್ಮಕವಾಗಿ ಕಟ್ಟಿ ಈ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತರಾಗಬೇಕಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಮಸ್ತ ವಾಲ್ಮೀಕಿ ಸಮುದಾಯದ ಹಿರಿಯರು, ಮಹಿಳೆಯರು ಮತ್ತು ಯುವಕರು ಸಮುದಾಯದ ಕ್ರಿಯಾಶೀಲ ಚಟುವಟಿಕೆಗಳಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಮ್ಮ ಸಮುದಾಯ ಈ ಸಮಾಜದಲ್ಲಿ ಇನ್ನೂ ಹೆಚ್ಚು ಗೌರವಿಯುತವಾಗಿ ಬದುಕನ್ನು ನಡೆಸಲು ಯುವ ಜನತೆ ಕಾರಣ ಕರ್ತರಾಗಬೇಕು ಎಂದರು.
ಮೋಟಾರ್ ಬೈಕ್ ರ್ಯಾಲಿ ಉದ್ಘಾಟನಾ ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಸಿ.ಶ್ರೀನಿವಾಸ್, ವಿರೂಪಾಕ್ಷಪ್ಪ, ಸುಮಾಭರಮಣ್ಣ, ಸಿ.ಕವಿತಾ, ಕರವೆ ಅಧ್ಯಕ್ಷ ಸ್ವಪ್ನವೆಂಕಟೇಶ್, ನಾಟಕ ಅಕಾಡೆಮೆ ಮಾಜಿ ಸದಸ್ಯ ತಿಪ್ಪೇಸ್ವಾಮಿ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಟಿ.ಸೂರನಾಯಕ, ಕಾರ್ಯದರ್ಶಿ ಸಿ.ಗುರುಸ್ವಾಮಿ, ಸಿ.ಟಿ.ವೀರೇಶ್, ಸಿ.ಟಿ.ಶ್ರೀನಿವಾಸ್, ಡಾ.ಲೋಕೇಶ್, ಪ್ರಶಾಂತ್‍ನಾಯಕ, ಬಿ.ತಿಪ್ಪೇಸ್ವಾಮಿ, ಟಿ.ಜೆ.ತಿಪ್ಪೇಸ್ವಾಮಿ, ಬಡಗಿಪಾಪಣ್ಣ, ದಳವಾಯಿಮೂರ್ತಿ, ಗೋವಿಂದರಾಜು, ವಿ.ಬೆಟ್ಟಪ್ಪ, ಪಿ.ಜ್ಯೋತಿಗುರುಸ್ವಾಮಿ, ಟಿ.ಜೆ.ಸ್ವಪ್ನ, ಎಂ.ಚೇತನ್‍ಕುಮಾರ್, ಆರ್.ಪ್ರಸನ್ನಕುಮಾರ್, ಪಿ.ಪಾಲಯ್ಯ, ಮೋಹನ್, ಆರ್.ನಾಗೇಶ್, ಸುರೇಶ್, ಪಾಲಯ್ಯ, ಮಾರುತೇಶ್, ಲಕ್ಷ್ಮಣ್‍ಪಾಳೇಗಾರ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ