ಸ್ಥಳೀಯರಿಗೆ ಉದ್ಯೋಗ ನೀಡಬೇಕು : ಪರಮೇಶ್ವರ್‌ ಒತ್ತಾಯ

ತುಮಕೂರು

 ತುಮಕೂರಿನ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ನಲ್ಲಿ ನೂತನವಾಗಿ ಹೆಚ್‌ಎಎಲ್
ಘಟಕ ಆರಂಭವಾಗಲಿದ್ದು ನೂತನ ಘಟಕದಲ್ಲಿ ತುಮಕೂರು ಜಿಲ್ಲೆಯ ಸ್ಥಳೀಯರಿಗೆ ಉದ್ಯೋಗ
ನೀಡಬೇಕು ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ರವರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ
ಒತ್ತಾಯಿಸಿದ್ದಾರೆ.

  ಇನ್ನು ಹೆಚ್.ಎ.ಎಲ್ ಘಟಕ ಶಂಕು ಸ್ಥಾಪನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರವರು
ಮುಂದಿನ ಎರಡು ವರ್ಷದಲ್ಲಿ ಹೆಲಿಕ್ಯಾಪ್ಟರ್ ಹಾರಾಟ ಶುರುವಾಗಲಿದೆ ಎಂದಿದ್ದರು ಆದರೆ ಕೊನೆಗೂ ಏಳು
ವರ್ಷದ ನಂತರ ಹೆಚ್.ಎ. ಎಲ್ ಘಟಕ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇನ್ನು ಇದೇ ತಿಂಗಳ 6 ರಂದು ಪ್ರಧಾನಿ ನರೇಂದ್ರ ಮೋದಿ ರವರಿಂದ ನೂತನ ಹೆಚ್.ಎ.ಎಲ್ ಘಟಕ ಉದ್ಘಾಟನೆಯಾಗುತ್ತಿದ್ದು ನಾವು ಸಹ ಹೆಚ್.ಎ.ಎಲ್ ಘಟಕದ ಉದ್ಘಾಟನೆಯನ್ನು ಸ್ವಾಗತಿಸಲಿದ್ದು ನೂತನ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಸ್ಥಳೀಯರ ನೆರವಿಗೆ ಮುಂದಾಗಬೇಕು ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link