ಗ್ರಾಮೀಣ ರಸ್ತೆಯ ಇಕ್ಕೆಲಗಳಲ್ಲಿನ ಜಾಲಿ ಮರಗಳನ್ನು ಕಡಿಯಿರಿ

ಹುಳಿಯಾರು:

       ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ, ಗೌಡಗೆರೆ ಗ್ರಾಮದಲ್ಲಿನ ಗ್ರಾಮೀಣ ರಸ್ತೆಗಳ ಇಕ್ಕೆಲಗಳಲ್ಲಿ ಬೆಳದಿರುವ ಬಳ್ಳಾರಿ ಜಾಲಿ ಗಿಡಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಮಾಜ ಸೇವಕ ಕೆ.ಎನ್.ಉಮೇಶ್ ಮನವಿ ಮಾಡಿದ್ದಾರೆ.

       ಲಿಂಗಪ್ಪನಪಾಳ್ಯದಿಂದ ಕೆ.ಸಿ.ಪಾಳ್ಯದ ಮಾರ್ಗವಾಗಿ ಕಂಪನಹಳ್ಳಿಗೆ ಹೋಗುವ ಹಾಗೂ ಕೆಂಕೆರೆಯಿಂದ ಗೌಡಗೆರೆ ಮಾರ್ಗದಿಂದ ಕಂಪನಹಳ್ಳಿಗೆ ಹೋಗುವ ಎರಡು ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು ರಸ್ತೆಗೆ ಚಾಚಿಕೊಂಡ್ಡಿದ್ದು ಸುಗಮ ಸಂಚಾರಕ್ಕೆ ಭಾರಿ ತೊಡಕಾಗಿ ಪರಿಣಮಿಸಿದೆ. ಕಾಲಕಾಲಕ್ಕೆ ರಸ್ತೆಯ ಅಕ್ಕಪಕ್ಕದಲ್ಲಿನ ಜಂಗಲ್ ಕ್ಲೀನ್ ಮಾಡದ ಪರಿಣಾಮ ಅನಗತ್ಯ ಮರ, ಗಿಡ, ಬಳ್ಳಿಗಳು ತಲೆ ಎತ್ತಿವೆ. ಬಳ್ಳಾರಿ ಜಾಲಿಯಂತೂ ಹೆಮ್ಮರವಾಗಿ ಬೆಳೆದು ನಿಂತಿವೆ. ಅದರಲ್ಲೂ ರಸ್ತೆಯ ತಿರುವಿನಲ್ಲಿ ರಸ್ತೆ ಕಾಣದಂತೆ ಅಡ್ಡವಾಗಿ ಬೆಳೆದಿದೆ.

        ಹುಲುಸಾಗಿ ಬೆಳೆದಿರುವ ಮುಳ್ಳಿನ ಗಿಡಗಳು ರಸ್ತೆಗೆ ಚಾಚಿಕೊಂಡಿರುವುದರಿಂದ ವಾಹನ ಚಾಲಕರಿಗೆ ಭಾರಿ ತೊಂದರೆಯಾಗಿದೆ. ತಿರುವಿನಲ್ಲಿ ಎದುರಿಗೆ ಬರುವ ವಾಹನಗಳು ಕಾಣದೆ ಅಪಘಾತದ ಭಯದಿಂದ ಸಂಚರಿಸುತ್ತಿದ್ದಾರೆ. ರಸ್ತೆಯಲ್ಲಿ ಭಾರಿ ವಾಹನಗಳು ಬಂದಾಗ ದ್ವಿಚಕ್ರ ವಾಹನ ಚಾಲಕರು ಸೈಡಿಗೆ ಹೋಗಿ ಮುಳ್ಳಿನ ಗಿಡಗಳಿಂದ ಬಡಿಸಿಕೊಂಡು ಗಾಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

        ಬಳ್ಳಾರಿ ಜಾಲಿಯ ಈ ಕಿರಿಕಿರಿಗೆ ರೋಸಿ ಹೋಗಿರುವ ಸ್ಥಳೀಯ ಗ್ರಾಮಗಳ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ತಾವೇ ರಸ್ತೆ ಚಾಚಿಕೊಂಡಿರುವ ಗಿಡಗಳನ್ನು ಕಡೆದಿದ್ದಾರೆ. ಆದರೆ ಇವರು ಕಡಿದ ವಾರಕ್ಕೆ ಮತ್ತೆ ಗಿಡ ಬೆಳೆದು ರಸ್ತೆಗೆ ಚಾಚಿಕೊಳ್ಳುತ್ತಿದೆ. ಹಾಗಾಗಿ ವಾಹನ ಸವಾರರು ಪಿಡ್ಲ್ಯೂಡಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಬಳ್ಳಾರಿ ಜಾಲಿ ಮರಗಳನ್ನು ಬೇರು ಸಹಿತ ಕಿತ್ತೆಸೆಯಲು ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link