ಹರಿಹರ;
ಥಾಯ್ಲೆಂಡ್ ದೇಶದ ಪೋಸ್ಟರ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಯೂತ್ ಇಂಡಿಯಾ ಯೋಗ ಫೆಡರೇಷನ್ ವತಿಯಿಂದ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ಪ್ರಥಮ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್-2018 ನಲ್ಲಿ ಭಾಗವಹಿಸಿ 41-50 ವಯೋಮಾನದ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ವಿಜೇತೆಯಾದ ಕೆ. ಸಾವಿತ್ರಮ್ಮ ಕೆಂಚಪ್ಪ ಇವರನ್ನು ಶಾಸಕ ಎಸ್.ರಾಮಪ್ಪನವರು ತಮ್ಮ ನಿವಾಸದಲ್ಲಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ನಗರಸಭೆ ಸದಸ್ಯ ಕೆ.ಮರಿದೇವ,ಒಂದನೇ ವಾರ್ಡ್ ಅಧ್ಯಕ್ಷ ಎಂ.ಎಸ್. ಆನಂದ್ ಕುಮಾರ್ ವಾರ್ಡ್ನ ಪದಾಧಿಕಾರಿಗಳಾದ ಪುರುಷೋತ್ತಮ ದುಗ್ಗತ್ತಿ,ಸಂತೋಷ್ ದೊಡ್ಡಮನಿ,ವಾರ್ಡಿನ ಕಾಂಗ್ರೆಸ್ ಮುಖಂಡರುಗಳಾದ ಎಚ್.ಶಿವಪ್ಪ,ಬಿ.ಕೃಷ್ಣಪ್ಪ,ಎಂ.ಕೆಂಚಪ್ಪ,ಎಂ.ಎಸ್.ಶ್ರೀನಿವಾಸ್,ಎಂ.ಎಚ್.ತಿಪ್ಪೇಸ್ವಾಮಿ, ,ಬಾಲರಾಜ್, ಸಮಾಜ ಸೇವಕ ಸನಾವುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
