ಬೆಂಗಳೂರು:
ನಾಳೆಯಿಂದ ರಾಜ್ಯಾದ್ಯಂತ ರಿಕ್ಷಾ, ಬಸ್, ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಿನ್ನೆ ತಾನೆ ಲಾಕ್‌ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ತಮ್ಮ ಕ್ಯಾಬಿನೇಟ್ ಸಚಿವರೊಂದಿಗೆ ಚರ್ಚೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಮುಂದಿನ ಹಂತದ ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದಾರೆ.
ಸಿಎಂ ತೆಗೆದುಕೊಂಡು ನಿರ್ಧಾರಗಳು ಹೀಗಿವೆ:
-
ಮೇ 31 ವರೆಗೆ ಲಾಕ್‌ಡೌನ್ ಮುಂದುವರಿಕೆ
- ಜನರ ಓಡಾಟಕ್ಕಾಗಿ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲ ಬಸ್ಗಳ ಓಡಾಟಕ್ಕೆ ಅನುಮತಿ
ಒಂದು ಬಸ್ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ. ಮಾಸ್ಕ್ ಕಡ್ಡಾಯ.
ಮಾಸ್ಕ್ ಹಾಕದೇ ಇದ್ದರೆ ದಂಡ ವಿಧಿಸಲು ನಿರ್ಧಾರ. - ಕಂಟೈನ್ಮೆಂಟ್ ಝೋನ್ನಲ್ಲಿ ಬಿಗಿ ಭದ್ರತೆ. ಕಾನೂನು ಮೀರಿದರೆ ಕ್ರಿಮಿನಲ್ ಮೊಕದ್ದಮೆ
- ಬಸ್ ಚಾರ್ಜ್ ಅನ್ನು ಸದ್ಯಕ್ಕೆ ಹೆಚ್ಚಿಸೋದಿಲ್ಲ.. ಈಗ ಆಗಿರುವ ನಷ್ಟವನ್ನ ಸರ್ಕಾರವೇ ತುಂಬಿಕೊಡುತ್ತೆ
- ಹೊರ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಮಾಡುವ ತೀರ್ಮಾನ ಮುಂದುವರಿಕೆ
ಬೇರೆ ರಾಜ್ಯದಿಂದ ಅನಾವಶ್ಯಕವಾಗಿ ಬರಲು ಅವಕಾಶವಿಲ್ಲ - ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ, ಅವರಿಗೂ ಮಾಸ್ಕ್ ಕಡ್ಡಾಯ
- ನಾಳೆಯಿಂದ ಮಾಲ್, ಸಿನಿಮಾ ಥಿಯೇಟರ್, ಹೋಟೆಲ್ ಬಿಟ್ಟು ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ
- ನಮ್ಮ ರಾಜ್ಯದಲ್ಲಿ ಓಡಾಡಲು ಟ್ರೇನ್ಗಳಿಗೆ ಅವಕಾಶ .ಹೊರಗಡೆಯಿಂದ ಬರುವ ಟ್ರೇನ್ಗಳಿಗೆ ಅವಕಾಶ ನೀಡಲ್ಲ
- ಸಲೂನ್ ಶಾಪ್ ತೆರೆಯಲು ಅನುಮತಿ
- ಭಾನುವಾರ ಮಾತ್ರ ಕಂಪ್ಲೀಟ್ ಲಾಕ್‌ಡೌನ್ ಇರುತ್ತೆ, ಜನರ ಓಡಾಟಕ್ಕೂ ಅವಕಾಶ ಇರಲ್ಲ
- ಪಾರ್ಕ್ಗಳಲ್ಲಿ ಬೆಳಗ್ಗೆ 7 ರಿಂದ 9 ಹಾಗೂ ಸಾಯಂಕಾರ 5 ರಿಂದ 7ಗಂಟೆ ವರೆಗೆ ಎಲ್ಲ ಪಾರ್ಕ್ಗಳಲ್ಲಿ ಓಡಾಟ ಮಾಡಲು ಅವಕಾಶ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ