ಚಳ್ಳಕೆರೆ
ಮಹರ್ಷಿ ಶ್ರೀವಾಲ್ಮೀಕಿಯವರು ಸಮಸ್ತ ಎಲ್ಲಾ ಜನಾಂಗಗಳ ಮೌಲ್ಯಯುತ ಬದುಕಿಗೆ ಶ್ರೀಕಾರ ಹಾಡಿದಂತಹ ಮಹಾನೀಯರು. ಅವರು ರಚಿಸಿದ ರಾಮಾಯಣ ಗ್ರಂಥ ವಿಶ್ವಮಟ್ಟದಲ್ಲಿ ಖ್ಯಾತಿಯಾಗಿದೆ. ಇಂತಹ ಮಹಾನ್ ಧೀಮಂತ ಮಹರ್ಷಿಯ ತತ್ವಾದರ್ಶಗಳ ಪಾಲನೆಯಿಂದ ಮಾತ್ರ ಎಲ್ಲರ ಬದುಕು ಸಾರ್ಥಕತೆ ಕಾಣುವುದು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಬುಧವಾರ ಇಲ್ಲಿನ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಯಕ ಜನಾಂಗ ರಾಜಕೀಯ ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವ ನಿಟ್ಟಿನಲ್ಲಿ ಕಾಯೋನ್ಮುಖವಾಗಬೇಕಿದೆ.
ವಿಶೇಷವಾಗಿ ಈ ಕ್ಷೇತ್ರದ ಅಭಿವೃದ್ಧಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಲು ನನಗೆ ಶಕ್ತಿ ನೀಡುವಂತೆ ಶ್ರೀವಾಲ್ಮೀಕಿಯವರನ್ನು ಪ್ರಾರ್ಥಿಸುವೆ. ಶಿಕ್ಷಣದಲ್ಲಿ ಯಾವ ಜನಾಂಗ ಉತ್ತಮ ಸಾಧನೆ ಮಾಡುತ್ತದೆಯೋ ಅ ಜನಾಂಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾಯಕ ಸಮುದಾಯ ಶೈಕ್ಷಣಿಕ ಕ್ರಾಂತಿಗೆ ನಾಂದಿಯಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಟಿ.ಸಿ.ಕಾಂತರಾಜು, ವಾಲ್ಮೀಕಿಯವರು ಮಾಡಿದ ಅನೇಕ ಸಾಧನೆಗಳನ್ನು ಸತ್ಕಾರ್ಯಗಳನ್ನು ಗುರುತಿಸುವ ಸಲುವಾಗಿ ರಾಜ್ಯ ಸರ್ಕಾರ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವ್ಯಾಪ್ತಿಯಲ್ಲಿ ಗುರುತಿಸಿದ್ದು, ನಿರಂತರವಾಗಿ ಈ ಕಾರ್ಯಕ್ರಮವನ್ನು ಮುನ್ನಡೆಸಬೇಕಿದೆ. ಮಹರ್ಷಿ ಶ್ರೀವಾಲ್ಮೀಕಿಯವರು ಸಮಸ್ತ ಸಮುದಾಯದ ಆರಾಧ್ಯ ದೈವವೆಂದರು.
ಉಪನ್ಯಾಸ ನೀಡಿದ ಸಹಾಯಕ ನಿರ್ದೇಶಕ ಆರ್.ಹನುಮಂತರಾಯ, ಚಳ್ಳಕೆರೆ ಕ್ಷೇತ್ರವೂ ಸೇರಿದಂತೆ ರಾಜ್ಯದ ಹಲವೆಡೆ ನಾಯಕ ಸಮುದಾಯ ಅತಿ ಹೆಚ್ಚಿನ ಸಂಖ್ಯೆಯಲಿದ್ದು, ಮೌಲ್ಯಯುತ ಬದುಕನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. 77 ಪಾಳೇಗಾರರ ಸಂತತಿಯನ್ನು ಬೆಳಕಿಗೆ ತಂದ ಮಹಾನ್ ದಾರ್ಶನಿಕ ಶ್ರೀವಾಲ್ಮೀಕಿಯವರು ವಿಶ್ವವೇ ಕಂಡ ಅಪರೂಪದ ಜ್ಞಾನ ಸಂಪತ್ತು. ವಾಲ್ಮೀಕಿಯವರ ಆದರ್ಶಗಳನ್ನು ಪರಿಪಾಲಿಸುವ ಮಹತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಷ, ರಂಗಣ್ಣ, ಬಿ.ನಾಗರಾಜ, ಲಕ್ಷ್ಮಣ್ ಪಾಳೇಗಾರ, ಕೆ.ಆರ್.ಅಭಿಷೇಕ್ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿಯನ್ನು ಹೆಚ್ಚು ಅಂಕ ಪಡೆದ 23 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲೇ ಕಳೆದ ವರ್ಷ ವಾಲ್ಮೀಕಿ ಪ್ರಶಸ್ತಿ ಪಡೆದ ಈ ಕ್ಷೇತ್ರದ ಧೀಮಂತ ಹಿರಿಯ ರಾಜಕಾರಣ, ಮಾಜಿ ಸಚಿವ ತಿಪ್ಪೇಸ್ವಾಮಿಯವರಿಗೆ ಸಭೆ ಮೌನಾಚರಣೆ ಮೂಲಕ ಗೌರವವನ್ನು ಸಮರ್ಪಿಸಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕವಿತಾರಾಮಣ್ಣ, ಸದಸ್ಯರಾದ ಸಣ್ಣ ಸೂರಯ್ಯ, ಪಿ.ತಿಮ್ಮಾರೆಡ್ಡಿ, ತಿಪ್ಪೇಸ್ವಾಮಿ, ಜಿ.ವೀರೇಶ್, ನಗರಸಭಾ ಸದಸ್ಯರಾದ ಆರ್.ರುದ್ರನಾಯಕ, ಎಸ್.ಜಯಣ್ಣ, ಬಿ.ಮಲ್ಲಿಕಾರ್ಜುನ, ಸಿ.ಕವಿತಾ, ಓ.ಸುಜಾತ, ಜೈತುಂಬಿ, ಜಿ.ಗೋವಿಂದ, ಸಿ.ಬಿ.ಜಯಲಕ್ಷ್ಮಿ, ಎಚ್.ಸಿ.ವಿರೂಪಾಕ್ಷ, ಆರ್.ಮಂಜುಳಾ, ಸಿ.ಶ್ರೀನಿವಾಸ್, ಚಳ್ಳಕೆರೆಯಪ್ಪ, ಕೆ.ವೀರಭದ್ರಯ್ಯ, ನಾಯಕ ಸಂಘದ ಅಧ್ಯಕ್ಷ ಎಚ್.ಎಂ.ಮಲ್ಲಪ್ಪನಾಯಕ, ಬಂಗೆಪ್ಪ ಮಾಸ್ಟರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಟಿ.ಸೂರನಾಯಕ, ಸಿ.ಟಿ.ವೀರೇಶ್, ಜಿ.ಟಿ.ವೀರಭದ್ರಸ್ವಾಮಿ,ಡಾ.ನಾಗೇಂದ್ರನಾಯಕ, ಡಾ.ಲೋಕೇಶ್, ಡಾ.ಜಿ.ತಿಪ್ಪೇಸ್ವಾಮಿ, ಕೆ.ಟಿ.ತಿಪ್ಪೇಸ್ವಾಮಿ, ಟಿ.ಜೆ.ತಿಪ್ಪೇಸ್ವಾಮಿ, ಟಿ.ಜೆ.ಸ್ವಪ್ನ, ಎಚ್.ಎಂ.ಸೂರ್ಯಪ್ರಭಾ, ಕೆ.ಟಿ.ಸ್ವಾಮಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ