ಧಾರವಾಡ:
ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮಲಪ್ರಭಾ ಪ್ರಾಜೆಕ್ಟ್ ಎಂಜಿನಿಯರ್ ಅಶೋಕ ವಾಸನದ ಅವರಿಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ.
ಧಾರವಾಡದ ಲೋಕಾಯುಕ್ತ ಕಚೇರಿ ಬಳಿಯೇ ಕರ್ನಾಟಕ ನೀರಾವರಿ ನಿಗಮದ ಕಚೇರಿ ಇದ್ದು, ಬೆಳ್ಳಂಬೆಳಿಗ್ಗೆಯೇ ಲೋಕಾಯುಕ್ತ ಪೊಲೀಸರು ಕಚೇರಿಗೆ ಬಂದು ಕಾಯುತ್ತಿದ್ದಾರೆ. ಅಶೋಕ ವಾಸನದ ಅವರು ಬೆಳಗಾವಿಯಲ್ಲಿ ಮೂಲ ಮನೆ ಹೊಂದಿದ್ದಾರೆ. ಅದರ ಜೊತೆಗೆ ಬಾಗಲಕೋಟೆ ಜಿಲ್ಲೆಯ ಕಜ್ಜಿದೋಣಿ ಸೇರಿ, ಜಮಖಂಡಿ ಹಾಗೂ ಜಕನೂರಿನಲ್ಲೂ ಮನೆ ಹೊಂದಿದ್ದಾರೆ. ಅಲ್ಲಿಯೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.
