ಬೆಂಗಳೂರು :
ಏಪ್ರಿಲ್ 19ರಿಂದ 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದು ಇಂದು (ಜೂನ್ 4) ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಇಂಡಿಯಾ ಒಕ್ಕೂಟ ನಡುವಿನ ಸೆಣಸಾಟಕ್ಕೆ ಅಂತಿಮ ತೆರೆ ಇಂದು ಸಿಗಲಿದೆ. ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮೋದಿ ಮತ್ತೊಮ್ಮ ಪ್ರಧಾನಿ ಗದ್ದುಗೆ ಏರಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಶನಿವಾರ ಜೂನ್ 01ರಂದು ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆಗಳು ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಿ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ 52 ಸ್ಥಾನಗಳನ್ನು ಪಡೆದಿತ್ತು. ಡಿಎಂಕೆ 24 ಇತರರು 164 ಸ್ಥಾನಗಳನ್ನು ಪಡೆದಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಕಾಂಗ್ರೆಸ್ 44 ಎಐಎಡಿಎಂಕೆ 37 ಇತರರು 180 ಸ್ಥಾನಗಳನ್ನು ಪಡೆದಿದ್ದವು. ಈ ಬಾರಿಯ ಚುನಾವಣಾ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟಕ್ಕೆ 350ಕ್ಕೂ ಹೆಚ್ಚಿನ ಸ್ಥಾನಗಳನ್ನು ಬರಲಿದೆ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಮತ ಎಣಿಕೆಯು ಯಾರ ಕೈಗೈ ದೇಶದ ಅಧಿಕಾರ ಹೋಗುತ್ತದೆ ಎಂದು ತಿಳಿಸುತ್ತದೆ.
‘ಜನಾರ್ಶಿವಾದದಿಂದ ಈ ತಿಂಗಳ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಕೇಂದ್ರ ಸಚಿವ ಹಾಗೂ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ. ‘ವಿಶ್ವದಾದ್ಯಂತ ಜನರು ನಮ್ಮ ಲೋಕಸಭಾ ಚುನಾವಣೆಯನ್ನು ತೀವ್ರ ಕುತೂಹಲದಿಂದ ನೋಡುತ್ತಿದ್ದಾರೆ. ದೇಶದ 140 ಕೋಟಿ ನಾಗರಿಕರ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಎಂದು ನನಗೆ ಸಂಪೂರ್ಣವಾದ ನಂಬಿಕೆಯಿದೆ. ತೆಲಂಗಾಣದಲ್ಲಿ ಎರಡಂಕಿಯನ್ನು ಮುಟ್ಟುತ್ತೇವೆ’ ಎಂದು ಅವರು ತಿಳಿಸಿದ್ದಾರೆ
ಅಂಚೆಮತ ಎಣಿಕೆ ಪ್ರಾರಂಭವಾಗಿದ್ದು, ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಿನ್ನೆಡೆ ಅನುಭವಿಸಿದ್ದಾರೆ.
ಶಿವಮೊಗ್ಗ: ಬಿ.ವೈ ರಾಘವೇಂದ್ರಗೆ ಮುನ್ನಡೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಬಿ.ವೈ ರಾಘವೇಂದ್ರ 2252 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವಕುಮಾರ್ ಹಿನ್ನಡೆ ಕಂಡಿದ್ದಾರೆ.
ಮೈಸೂರಿನಲ್ಲಿ ಯದುವೀರ್ ಮುನ್ನಡೆ
ಲೋಕಸಭಾ ಚುನಾವಣೆ ಫಲಿತಾಂಶ ಮತ ಎಣಿಕೆ ಆರಂಭವಾಗಿದ್ದು, ಮೈಸೂರಿನಲ್ಲಿ ಯದುವೀರ್ ಕೃಷ್ಣದತ್ತ ಓಡೆಯರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ ಸುರೇಶ್ ಮುನ್ನಡೆ
ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಡಾ.ಸಿ.ಎನ್ ಮಂಜುನಾಥ್ ಹಿನ್ನೆಡೆಯನ್ನು ಅನುಭವಿಸಿದ್ದಾರೆ.
‘ಈ ತಿಂಗಳ 2ನೇ ವಾರದಲ್ಲಿ ಪ್ರಧಾನಿ ಮೋದಿ ಪ್ರಮಾಣ ವಚನ ಸ್ವೀಕಾರ’
‘ಜನಾರ್ಶಿವಾದದಿಂದ ಈ ತಿಂಗಳ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ಕೇಂದ್ರ ಸಚಿವ ಹಾಗೂ ತೆಲಂಗಾಣ ಬಿಜೆಪಿ ಘಟಕದ ಅಧ್ಯಕ್ಷ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ. ‘ವಿಶ್ವದಾದ್ಯಂತ ಜನರು ನಮ್ಮ ಲೋಕಸಭಾ ಚುನಾವಣೆಯನ್ನು ತೀವ್ರ ಕುತೂಹಲದಿಂದ ನೋಡುತ್ತಿದ್ದಾರೆ. ದೇಶದ 140 ಕೋಟಿ ನಾಗರಿಕರ ಬೆಂಬಲದೊಂದಿಗೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ ಎಂದು ನನಗೆ ಸಂಪೂರ್ಣವಾದ ನಂಬಿಕೆಯಿದೆ. ತೆಲಂಗಾಣದಲ್ಲಿ ಎರಡಂಕಿಯನ್ನು ಮುಟ್ಟುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಶ್ರೀರಾಮುಲುಗೆ ಹಿನ್ನೆಡೆ
ಅಂಚೆಮತ ಎಣಿಕೆ ಪ್ರಾರಂಭವಾಗಿದ್ದು, ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಿನ್ನೆಡೆ ಅನುಭವಿಸಿದ್ದಾರೆ.
ಮೂವರು ಬಿಜೆಪಿ ಅಭ್ಯರ್ಥಿಗಳು ಮುನ್ನಡೆ
ಲೋಕಸಭಾ ಚುನಾವಣೆ ಫಲಿತಾಂಶ ಮತ ಎಣಿಕೆ ಆರಂಭವಾಗಿದ್ದು, ಬೆಂಗಳೂರು ಕೇಂದ್ರದಲ್ಲಿ ಪಿಸಿ ಮೋಹನ್, ಬೆಂಗಳೂರು ಉತ್ತರದಲ್ಲಿ ಶೋಭಾ ಕರದ್ಲಾಂಜೆ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮಂಡ್ಯದಲ್ಲಿ ಕುಮಾರಸ್ವಾಮಿಗೆ ಮುನ್ನಡೆ
ಅಂಚೆ ಮತಎಣಿಕೆಯಲ್ಲಿ ಜಿಎಡಿಎಸ್ ಅಭ್ಯರ್ಥಿ ಮಾಜಿ ಸಿಎಂ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷದ ಸ್ಟಾರ್ ಚಂದ್ರು ಹಿನ್ನೆಡೆ ಅನುಭವಿಸಿದ್ದಾರೆ.
ಮತ ಎಣಿಕೆ ಕೇಂದ್ರ ಕೀ ಮರೆತು ಬಂದ ಅಧಿಕಾರಿ
ವಿಜಯಪುರದಲ್ಲಿ ಮತ ಎಣಿಕೆ ಕೇಂದ್ರದ ಬೀಗದ ಕೀಯನ್ನು ಅಧಿಕಾರಿ ಮರೆತು ಬಂದಿದ್ದು, ಮತ್ತೆ ಮನೆ ಕಡೆಗೆ ದೌಡಾಯಿಸಿದ್ದಾರೆ.
ಬಿಜೆಪಿ ಅಧ್ಯಕ್ಷರಿಂದ ಟೆಂಪಲ್ ರನ್
ಮತ ಎಣಿಕೆಗೂ ಮುನ್ನ ಮಧ್ಯಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಮತ್ತು ಖಜುರಾಹೊ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಡಿ ಶರ್ಮಾ ಅವರು, ಪನ್ನಾದಲ್ಲಿರುವ ಜುಗಲ್ ಕಿಶೋರ್ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್ ಮುನ್ನಡೆ
ಅಂಚೆ ಮತಎಣಿಕೆ ಆರಂಭವಾಗಿದ್ದು, ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ತುಮಕೂರಿನಲ್ಲಿ ವಿ. ಸೋಮಣ್ಣ ಮುನ್ನಡೆ
ಲೋಕಸಭಾ ಚುನಾವಣೆ ಫಲಿತಾಂಶ ಅಂಚೆ ಮತ ಎಣಿಕೆ ಆರಂಭವಾಗಿದ್ದು, ತುಮಕೂರಿನಲ್ಲಿ ವಿ ಸೋಮಣ್ಣ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಎಕ್ಸಿಟ್ ಪೋಲ್‌ಗಳಲ್ಲಿ ನನಗೆ ನಂಬಿಕೆ ಇಲ್ಲ: ಡಿಕೆಶಿ
ಈ ಎಕ್ಸಿಟ್ ಪೋಲ್‌ಗಳಲ್ಲಿ ನನಗೆ ನಂಬಿಕೆ ಇಲ್ಲ. 30 ರಷ್ಟು ಮತದಾರರನ್ನು ಸಮೀಕ್ಷೆಗೆ ಒಳಪಡಿಸಬೇಕು. ಅವರು ಏನು ಸಮೀಕ್ಷೆ ಮಾಡುತ್ತಾರೆ ಎಂಬುದು ನನಗೆ ತಿಳಿದಿದೆ. ನಾವು ನಿರ್ದಿಷ್ಟ ಪಕ್ಷದಿಂದ ಸಮೀಕ್ಷೆಯನ್ನು ಸಹ ಮಾಡುತ್ತೇವೆ. ಆದರೆ ನಮ್ಮ ಸಮೀಕ್ಷೆಯ ಗಾತ್ರವು ವಿಭಿನ್ನವಾಗಿರುತ್ತದೆ. ನಾವು ಸಮೀಕ್ಷೆ ನಡೆಸಿದಾಗ, ನಾವು ಸಮಾಜದ ಎಲ್ಲಾ ವರ್ಗಗಳನ್ನು ನೋಡುತ್ತೇವೆ” ಎಂದು ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅಂಚೆ ಮತಎಣಿಕೆ ಆರಂಭ
ತುಮಕೂರು, ಕೋಲಾರ ಹಾಗೂ ಬಾಗಲಕೋಟೆಯಲ್ಲಿ ಅಂಚೆ ಮತಎಣಿಕೆ ಆರಂಭಗೊಂಡಿದೆ.
ಅಂಚೆ ಮತಗಳ ಎಣಿಕೆಗೆ ಸಿದ್ಧತೆ
ರಾಜಸ್ಥಾನದ ಜೈಪುರದ ಯೂನಿವರ್ಸಿಟಿ ಕಾಮರ್ಸ್ ಕಾಲೇಜಿನಲ್ಲಿ ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ.
ಮಧ್ಯಪ್ರದೇಶದಲ್ಲಿ ಸ್ಟ್ರಾಂಗ್ ರೂಂ ತೆರೆದ ಅಧಿಕಾರಿಗಳು
ಮತಎಣಿಕೆಗಾಗಿ ಇಂದೋರ್ ಜಿಲ್ಲೆಯಲ್ಲಿ ಅಧಿಕಾರಿಗಳು ಸ್ಟ್ರಾಂಗ್ ರೂಂ ಬಾಗಿಲನ್ನು ತೆಗೆದರು.
ಸ್ಟ್ರಾಂಗ್ ರೂಂ ಓಪನ್
ಲೋಕಸಭಾ ಚುನಾವಣೆ ಮತಎಣಿಕಗೂ ಮುನ್ನ, ಆನಂದ್ ಜಿಲ್ಲೆಯಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು.
ಹನುಮಂತನ ದಿನ: ಜನರ ನಿರ್ಧಾರವನ್ನು ಗೌರವದಿಂದ ಸ್ವೀಕರಿಸಬೇಕು
‘ಇವತ್ತು ಮಂಗಳವಾರ, ಹನುಮಂತನ ದಿನ. ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದನ್ನು ಇವಿಎಂಗಳಲ್ಲಿ ಭದ್ರಪಡಿಸಲಾಗಿದೆ. ಇವಿಎಂ ತೆರೆದಾಗ ಅಭಿಪ್ರಾಯಗಳು ಹೊರಬರುತ್ತವೆ. ಜನರ ತೀರ್ಮಾನ ಏನೇ ಆಗಿರಲಿ, ಎಲ್ಲರೂ ಗೌರವದಿಂದ ಸ್ವೀಕರಿಸಬೇಕು. ಇದು ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯ’ ಎಂದು ಸಂಸದ ಹಾಗೂ ಚಂಡೀಗಢದ ಕಾಂಗ್ರೆಸ್ ಅಭ್ಯರ್ಥಿ ಮನೀಶ್ ತಿವಾರಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಬೊಂಬಾಟ್ ಭೋಜನ ತಯಾರಿಕೆ
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪೂರಿ ಹಾಗೂ ಸಿಹಿತಿಂಡಿಗಳನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ.
‘ದೆಹಲಿಯ ಎಲ್ಲ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ’
‘ನಾವು ದಾಖಲೆಯ ಮತಗಳ ಅಂತರದೊಂದಿಗೆ ದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸುತ್ತವೆ. ಬಿಜೆಪಿಯು ದೆಹಲಿಯ ಎಲ್ಲ 7 ಸ್ಥಾನಗಳನ್ನು ಬಹುಮತದೊಂದಿಗೆ ಗೆಲ್ಲಲಿದೆ’ ಎಂದು ಚಾಂದಿನಿ ಚೌಕ್‌ನ ಬಿಜೆಪಿ ಅಭ್ಯರ್ಥಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.
ಇಂಡಿಯಾ ಒಕ್ಕೂಟ ಮೈತ್ರಿ ಸರ್ಕಾರ ರಚನೆ
ನಮ್ಮ ಅಂದಾಜಿನ ಪ್ರಕಾರ ಇಂಡಿಯಾ ಒಕ್ಕೂಟ ಮೈತ್ರಿ ಸರ್ಕಾರ ರಚನೆ ಮಾಡಲಿದೆ. ನಾವು 295ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುತ್ತೇವೆ. ಎಕ್ಸಿಟ್ ಪೋಲ್‌ಗಳ ಫಲಿತಾಂಶಗಳು ಸುಳ್ಳಾಗುತ್ತವೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ಗೆದ್ರೆ..
ಪ್ರಜ್ವಲ್ ರೇವಣ್ಣ ಗೆದ್ರೆ ಏನು ಮಾಡ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದಕ್ಕೆ ಪ್ರಜ್ವಲ್ ಬಂದಾಗಿದೆ. ಇನ್ನೂ ಎಸ್ಐಟಿ ತನಿಖೆ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಬಿಗಿ ಭದ್ರತೆ
ಕಥುವಾದ ಮತಎಣಿಕೆ ಕೇಂದ್ರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ತಪಾಸಣೆಯನ್ನು ನಡೆಸಿ, ಮತಎಣಿಕೆ ಸಿಬ್ಬಂದಿಯನ್ನು ಒಳಬಿಡಲಾಗುತ್ತಿದೆ.
ಬೆಂಗಳೂರಿನಲ್ಲಿ ಬಿಗಿ ಭದ್ರತೆ
ಲೋಕಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸೇರಿದಂತೆ ಹಲವು ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
201 ಕೆಜಿ ಲಾಡು ಖರೀದಿ
ವಿಜಯೋತ್ಸವ ಆಚರಿಸಲು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು 201 ಕೆಜಿ ಲಾಡು ಖರೀದಿಸಿದ್ದಾರೆ.
ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿರುವ ಬಿಜೆಪಿ ಕಚೇರಿ
ಲೋಕಸಭಾ ಚುನಾವಣಾ ಫಲಿತಾಂಶದ ಹಿನ್ನೆಲೆ, ರಾಜಸ್ಥಾನದ ಜೈಪುರದಲ್ಲಿರುವ ಬಿಜೆಪಿ ಕಚೇರಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಕರ್ನಾಟಕ: 3 ಮಾಜಿ ಸಿಎಂಗಳು ಕಣದಲ್ಲಿ..
ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ.
ವಿಜಯೋತ್ಸವಕ್ಕೆ ಸಿದ್ಧತೆ
ಚುನಾವಣೋತ್ತರ ಸಮೀಕ್ಷೆಗಳು ಮತ್ತೊಮ್ಮೆ ಬಿಜೆಪಿ ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದು, ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಭದ್ರತೆ ಹೇಗಿದೆ?
ಬೆಂಗಳೂರಿನಲ್ಲಿ ಭದ್ರತೆಗಾಗಿ 1 ಮತಎಣಿಕೆ ಕೇಂದ್ರಕ್ಕೆ ಓರ್ವ ಡಿಸಿಪಿ ಹಾಗೂ ಮೂವರು ಎಸಿಪಿ ಸೇರಿದಂತೆ 100ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮತಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.