ಎಷ್ಟೇ ನಿದ್ದೆ ಮಾಡಿದ್ರು ನಿದ್ದೆ ಸಾಕಾಗುತ್ತಿಲ್ಲವೆ : ನಿಮಗೂ ಇರಬಹುದು ಈ ಸಮಸ್ಯೆ…!

ತುಮಕೂರು : 

    ಕಂಪ್ಯೂಟರ್ ಪರದೆಯನ್ನು ದಿಟ್ಟಿಸುತ್ತಿರುವಾಗ ಕಣ್ಣುರೆಪ್ಪೆಗಳು ಮುಚ್ಚುವುದು, ಕೆಲಸದ ಮಧ್ಯದಲ್ಲಿ ನಿದ್ರೆ ಮಾಡಬೇಕೆನ್ನಿಸುವುದು, ಈ ರೀತಿ ಅನುಭವ ಹೀಗೆಲ್ಲಾ ಆಗ್ತಿದ್ಯಾ?ಹಾಗಿದ್ರೆ ನಿಮಗೆ ಈ ಸಮಸ್ಯೆ ಇರಬಹುದು.

    ರಾತ್ರಿ ಹೊತ್ತು ಪೂರ್ತಿಯಾಗಿ ನಿದ್ರೆ ಮಾಡಿದ ನಂತರವೂ ದಣಿವು. ನಿರಂತರವಾಡ ಅರೆನಿದ್ರಾವಸ್ಥೆ , ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗದ ಲಕ್ಷಣಗಳಿದ್ದರೆ ಅದನ್ನು ಹೈಪರ್‌ಸೋಮ್ನಿಯಾ ಎಂದು ಕರೆಯಲಾಗುತ್ತೆ. 

    “ನಿದ್ರಾಹೀನತೆ ಎಂದರೆ ರಾತ್ರಿಯಲ್ಲಿ ನಿದ್ರಿಸಲು ಸಾಧ್ಯವಾಗದಿದ್ದಾಗ ಹಗಲಿನಲ್ಲಿ ನಿದ್ರೆ ಮತ್ತು ಆಲಸ್ಯವನ್ನು ಅನುಭವಿಸುವ ಲಕ್ಷಣಗಳು ಕಂಡುಬಂದರೆ ಅನ್ನು ಇನ್‌ಸೋಮ್ನಿಯಾ ಎಂದು ಕರೆಯಲಾಗುತ್ತೆ.

    ಇನ್ನು ಹೈಪರ್‌ಸೋಮ್ನಿಯಾ ಎಂದರೆ ಏಳರಿಂದ ಎಂಟು ಗಂಟೆಗಳ ನಿದ್ರೆಯ ನಂತರವೂ ನಿಮ್ಮ ದೇಹ ದಣಿದಂತೆಯೇ ಇರುತ್ತದೆ. ಈ ಸಮಸ್ಯೆ ಇದ್ದವರು ನಿಧಾನವಾಗಿ ಎಚ್ಚರಗೊಳ್ಳುತ್ತಾರೆ. ಸಾಮಾನ್ಯ ಮಂದಿ ಒಂದು ಕಪ್ ಚಹಾ ಅಥವಾ ಕಾಫಿ ಅಥವಾ ಸ್ನಾನದಿಂದ ರಿಫ್ರೆಶ್ ಆಗುತ್ತಾರೆ ಆದರೆ ಅತಿನಿದ್ರೆ ಸಮಸ್ಯೆ ಇದ್ದವರು ಸ್ನಾನದ ನಂತರವೂ ನಿದ್ರೆಯ ಮಂಪರಿನಲ್ಲೇ ಇರುತ್ತಾರೆ

   ಹೈಪರ್‌ಸೋಮ್ನಿಯಾಗೆ ಸ್ವನಿಯಂತ್ರಿತ ನರಮಂಡಲದ ಸಮಸ್ಯೆ, ಅತಿಯಾದ ಮದ್ಯಪಾನ ಅಥವಾ ಮಾದಕವಸ್ತು ಬಳಕೆ, ಅಥವಾ ಕೆಲವು ಔಷಧಗಳು ಕಾರಣಗಳು ಎನ್ನಲಾಗುತ್ತೆ

    ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ಸಮಸ್ಯೆ ಇದ್ದ ವ್ಯಕ್ತಿ ತಾನು ಇಂತಹ ತೊಂದರೆಯಿಂದ ಬಳಲುತ್ತಿದ್ದೇನೆ ಎಂಬುದರ ಅರಿವಿಲ್ಲದೆಯೇ ಬದುಕುತ್ತಿರುತ್ತಾನೆ.ಹೀಗಾಗಿ ಈ ರೋಗಿಗಳು ವೈದ್ಯರ ಬಳಿ ಬಂದಾಗ ಇದಕ್ಕೆ ಸಂಬಂಧಿತ ಇತರ ಸಮಸ್ಯೆ ಹೇಳಿಕೊಂಡು ಬರುತ್ತಾರೆಯೇ ವಿನಃ ದಿನವಿಡೀ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳುವುದಿಲ್ಲ. 

   ಹೈಪರ್‌ಸೋಮ್ನಿಯಾಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಇದರ ಪರಿಣಾಮಗಳನ್ನು ನಿರ್ವಹಿಸಲು ಹಲವಾರು ಮಾರ್ಗಗಳಿವೆ. ಇದಕ್ಕೆ ಮೂಲ ಕಾರಣವನ್ನು ಗುರುತಿಸಿದ ನಂತರ, ಚಿಕಿತ್ಸೆಯನ್ನು ಪ್ರಾರಂಭಿಸಬಹುದು. ಪ್ರಮುಖವಾಗಿ ಜೀವನಶೈಲಿಯ ಬದಲಾವಣೆಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಇವುಗಳಲ್ಲಿ ನಿದ್ರೆಗಾಗಿ ಸಮರ್ಪಕ ವಾತವಾರಣ, ಮಲಗುವ ಮೊದಲು ಉತ್ತೇಜಕ ಮಾತ್ರೆಗಳನ್ನು ತಪ್ಪಿಸುವುದು, ನಿಗದಿತ ಮಲಗುವ ಸಮಯದ ಪರಿಪಾಲನೆ ಮತ್ತು ತೂಕವನ್ನು ಕಳೆದುಕೊಳ್ಳುವುದು ಇವುಗಳಲ್ಲಿ ಸೇರಿವೆ.

   ನಿಮಗೂ ಹೀಹಾಗುತ್ತಿದ್ದರೆ ಕಡೆಗಣಿಸಬೇಡಿ. ಕಡಿಮೆ ನಿದ್ದೆ ಆರೋಗ್ಯಕ್ಕೆ ಎಷ್ಟು ಹಾನಿಕರವೋ ಅತಿ ನಿದ್ರೆ ಮಾಡುವುದೂ ಅಷ್ಟೇ ಅನಾರೋಗ್ಯಕರ.. ನಿಮ್ಮ ನಿದ್ರಾಚಟುವಟಿಕೆ ಮೇಲೆ ಗಮನ ಹರಿಸಿ.. ಸಮಸ್ಯೆ ಪತ್ತೆ ಮಾಡಿ.. ಚಿಕಿತ್ಸೆ ಪಡೆಯಿರಿ. ಆರೋಗ್ಯವಂತರಾಗಿರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap