ಪುಣೆ;
ರಸ್ತೆ ಇದ್ದಕ್ಕಿದ್ದಂತೆ ಕುಸಿದು ದೊಡ್ಡ ಗುಂಡಿ ಬಿದ್ದಿದೆ.. ಅದೇ ಸಮಯಕ್ಕೆ ಬಂದ ಲಾರಿಯೊಂದು ಆ ಗುಂಡಿಗೆ ಬಿದ್ದಿದೆ.ಪುಣೆಯ ಬುದ್ವಾರ್ ಪೇತ್ ಪ್ರದೇಶದಲ್ಲಿರುವ ನಗರ ಅಂಚೆ ಕಚೇರಿ ಬಳಿ ಈ ಘಟನೆ ನಡೆದಿದೆ.. ಲಾರಿ ತಲೆಕೆಳಗಾಗಿ ಬಿದ್ದಿದ್ದು, ಸಂಪೂರ್ಣ ಗುಂಡಿಯಲ್ಲಿ ಮುಚ್ಚಿದೆ.ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ.
ಲಾರಿ ಗುಂಡಿಗೆ ಬೀಳುತ್ತಿದ್ದಂತೆ ಚಾಲಕ ವಾಹನದಿಂದ ಪಕ್ಕಕ್ಕೆ ಜಿಗಿದಿದ್ದಾನೆ.. ಇದರಿಂದಾಗಿ ಆತನ ಪ್ರಾಣ ಉಳಿದಿದೆ.. ಲಾರಿಪುಣೆ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ್ದಾಗಿದೆ. ಒಳಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ಅಲ್ಲಿಗೆ ಹೋಗಿತ್ತು.ಲಾರಿಯನ್ನು ಜೆಸಿಬಿ ಯಂತ್ರಗಳು ಮತ್ತು ಕ್ರೇನ್ ಗಳ ಮೂಲಕ ಹೊರತೆಗೆಯಲಾಗಿದೆ.