ಚಳ್ಳಕೆರೆ
ಸಾರ್ವಜನಿಕರಿಗೆ ನ್ಯಾಯಬೆಲೆ ಅಂಗಡಿ ಮೂಲಕ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಇಲ್ಲಿನ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರದಿಂದ ಲಾರಿಯನ್ನು ತಡೆದು ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ಧಾರೆ.
ಈ ಬಗ್ಗೆ ಮಾಹಿತಿ ನೀಡಿದ ಆಹಾರ ನಿರೀಕ್ಷಕ ರಂಗಸ್ವಾಮಿ, ಬಳ್ಳಾರಿಯಿಂದ ಹಿರಿಯೂರು ಕಡೆಗೆ ಲಾರಿಯೊಂದರಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ಮಾಹಿತಿಯನ್ನು ಅನುಸರಿಸಿ ಜಿಲ್ಲಾ ಆಹಾರ ಮತ್ತು ನಾಗರೀಕರ ಇಲಾಖೆಯ ಉಪನಿರ್ದೇಶಕ ಮಧುಸೂದನ್‍ರವರ ಮಾರ್ಗದರ್ಶನದ ಮೇರೆಗೆ ಡಿ.3ರ ಮಧ್ಯಾಹ್ನ ಬಳ್ಳಾರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ (ಕೆಎ-16-ಡಿ-1751 ಇಚರ್ ಲಾರಿ) ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಬಳ್ಳಾರಿಯಿಂದ ಹಿರಿಯೂರಿಗೆ ಈ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದು ಲಾರಿಯಲ್ಲಿ 260 ಚೀಲ ಪಡಿತರ ಅಕ್ಕಿ ದೊರೆತಿದ್ದು, 178.90 ಕೆ.ಜಿ ಅಕ್ಕಿ ಇದ್ದು, ಇದರ ಮೌಲ್ಯ ಅಂದಾಜು 3.64 ಲಕ್ಷವಾಗಿದ್ದು, ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿರುತ್ತಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಠಾಣಾಧಿಕಾರಿ ಜಿ.ಮಂಜುನಾಥ ಪ್ರಕರಣ ದಾಖಲಿಸಿದ್ಧಾರೆ.
ಪ್ರಸ್ತುತ ವಶಪಡಿಸಿಕೊಂಡ ಪರಿತರ ಚೀಟಿ ಅಕ್ಕಿಯನ್ನು ಇಲ್ಲಿನ ಆಹಾರ ಇಲಾಖೆಯ ದಾಸ್ತಾನು ಕೊಠಡಿಯಲ್ಲಿ ಇಡಲಾಗಿದ್ದು. ಲಾರಿಯ ಚಾಲಕ ಮತ್ತು ಲಾರಿಯ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
