ನ.10-14 ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳ ಹಬ್ಬ: ಜಯಮಾಲ

ಬೆಂಗಳೂರು

       ಮಾಜಿ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆ ಅಂಗವಾಗಿ ನವೆಂಬರ್ 10, 11 ಮತ್ತು 14 ರಂದು ಬೆಂಗಳೂರಿನ ಕಬ್ಬನ್‍ಪಾರ್ಕ್ ಉದ್ಯಾನವನದಲ್ಲಿ ಮಕ್ಕಳ ಹಬ್ಬವನ್ನು ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಡಾ. ಜಯಮಾಲ ಅವರು ತಿಳಿಸಿದರು.

       ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಜಾನಪದ ಅಕಾಡೆಮಿಗಳ ಮೂಲಕ 30 ಜಿಲ್ಲೆಗಳ ಸರ್ಕಾರದ 49 ಬಾಲಮಂದಿರಗಳಲ್ಲಿನ ಸುಮಾರು 650 ಮಕ್ಕಳಿಗೆ ಈಗಾಗಲೇ ತರಬೇತಿ ಕಾರ್ಯಕ್ರಮಗಳನ್ನು ನೀಡಲಾಗಿದ್ದು ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಅಂದು ಬಾಲಭವನದ ಮಕ್ಕಳಿಗೆ ಏರ್ಪಡಿಸಲಾಗಿದೆ ಎಂದರು.

      ಕಳೆದ ಮೂರು ವರ್ಷಗಳಿಂದ ಈ ಮಕ್ಕಳ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಈ ವರ್ಷ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದ ಸಚಿವರು ಕಳೆದ ವರ್ಷ ಮೂರು ಲಕ್ಷ ಮಕ್ಕಳು ಹಾಗೂ ಪೋಷಕರು ಈ ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

     ಈ ಬಾರಿ ನಗರದಲ್ಲಿರುವ ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಸಂಬಂಧ ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗುವುದು ಎಂದ ಸಚಿವರು ಗ್ರಾಮೀಣ ಬದುಕಿನ ವೃತ್ತಿ ಹಾಗೂ ಕಲಾಪ್ರಕಾರಗಳ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು ಎಂದರು ತಿಳಿಸಿದರು.

     ಬಾಲ ಭವನದ ಮಕ್ಕಳು ಬರೆದಂತ ಕವಿತೆ, ಕವನಗಳನ್ನು ‘ಸಂಕಲ್ಪ’ ಎಂಬ ಪುಸ್ತಕದ ರೂಪದಲ್ಲಿ ಹೊರತರಲಾಗುವುದು. ಈ ಕಾರ್ಯಕ್ರಮವನ್ನು ನವೆಂಬರ್ 10 ರಂದು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ. ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಎರಡು ಪ್ರಶಸ್ತಿಗಳಾದ ಶೌರ್ಯ ಪ್ರಶಸ್ತಿ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗಳನ್ನು ರಾಜ್ಯಪಾಲ ಶ್ರೀ ವಜುಭಾಯಿ ವಾಲಾ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದ ಸಚಿವರು ಈ ಪ್ರಶಸ್ತಿಗಳ ಆಯ್ಕೆ ಇದೆ ತಿಂಗಳ 5 ರಂದು ನಡೆಯಲಿದೆ ಎಂದರು.
ಮಕ್ಕಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು

      ಈವರೆಗೆ ಬೆಂಗಳೂರಿನಲ್ಲಿ ಮಾತ್ರ ಮಕ್ಕಳ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು ಈ ಬಾರಿಯಿಮದ ರಾಜ್ಯದ 4 ವಿಭಾಗೀಯ ಮಟ್ಟದಲ್ಲೂ ಮಕ್ಕಳ ಹಬ್ಬ ಆಚರಣೆ ಮಾಡಲಾಗುವುದು . ಈ ಸಂದರ್ಭಗಳಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ, ವಿಶ್ವೇಶ್ವರಯ್ಯ ಮೂಸಿಯಂ ವೀಕ್ಷಣೆಗೆ ಮಕ್ಕಳಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap