ಹರಪನಹಳ್ಳಿ
ಹಿಂದೆ ನೀರು ಮುಗಿಯದ ಸಂಪೂನ್ಮೂಲವಾಗಿತ್ತು ಅದರೆ ಇಂದು ಕುಡಿಯುವ ನೀರು ಮುಗಿದು ಹೋಗುವ ಸಂಪೂನ್ಮೂಲವಾಗಿದ್ದು ಪ್ರತಿ ಹನಿಯನ್ನು ವ್ಯರ್ಥಮಾಡದೆ ಮಿತವಾಗಿ ಬಳಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ನ್ಯಾಯಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ.ವಕೀಲರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು.ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವಜಲ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಇಡಿ ಭೋಮಿಯ ಶೇ 75ರಷ್ಟು ಜಲದಿಂದ ಅವೃತವಾಗಿದ್ದು ಅದರೆ ಎಲ್ಲಾ ಜಲವನ್ನು ದಿನ ನಿತ್ಯ ಬಳಿಕೆ ಬರವುದಿಲ್ಲ.
ಸಮುದ್ರದ ನೀರು ನಮ್ಮ ಸುತ್ತಮುತ್ತ ಇದ್ದು ಅನೀರು ಉಪ್ಪಾಗಿದ್ದರಿಂದ ಜನಸಂಖ್ಯೆ ಹೆಚ್ಚಳದಿಂದ ದಿನ ನಿತ್ಯದ ಬಳಿಕೆಗೆ ನೀರು ಸಿಗದೆ ಪರದಾಡುತ್ತಿದ್ದಾರೆ ಹರಪನಹಳ್ಳಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿಗಾಗಿ ಜನರು ಗಂಟೆ ಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.ಅಸ್ತಿ.ಹಣ.ಊಟಇಲ್ಲದಿದ್ದರೆ ಬದುಕಬಹುದು ಅದರೆ ನೀರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಪರಿಸರ ನಾಶ ದಿಂದ ಅಂತರ್ಜಲ ಕಡಿಮೆಯಾಗಿದ್ದು ಪರಿಸರ ಬೆಳಸಿದರೆ ಮಳೆಬರುತ್ತದೆ ಅದ್ದರಿಂದ ಪ್ರತಿಯೋಬ್ಬರು ಗಿಡಮರ ಬೆಳಸಿದರೆ ಮಳೆ ಬರುತ್ತದೆ ಎಂದರು.
ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ ಮಾತನಾಡಿ ನೀರಿನ ಪರ್ಯಾಯವಸ್ತು ಬೇರೆ ಇಲ್ಲ ಮಳೆ ಬಂದರೆ ನೀರು ಅದ್ದರಿಂದ ಮಳೆ ನೀರನ್ನು ಭೂಮಿಯ ಒಳಗಡೆ ಇಂಗುವಂತೆ ಮಾಡಬೇಕು ಓಡಿ ಹೋಗುವ ನೀರನ್ನು ನಡೆದು ಹೋಗುವಂತೆ ನೆಡೆದುಹೋಗುವ ನೀರನ್ನು ನಿಲ್ಲವಂತೆ ಮಾಡಬೇಕು ನಿಂತ ನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕು ಇಲ್ಲದೆ ಹೋದರೆ ಇನ್ನು ಕೆಲ ವರ್ಷಗಳಲ್ಲಿ ನೀರಿಗಾಗಿ ರಕ್ತಪಾತವಾಗುವ ಕಾಲ ದೂರವಿಲ್ಲ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಹುಚ್ಚರಾಯಪ್ಪ ಮಾತನಾಡಿ ಜಲ.ಅಗ್ನಿ ವಾಯು. ಅಕಾಶ ಇವುಗಳಿಂದ ಪ್ರಪಂಚದ ಚರಚರ ವಸ್ತುಗಳ ನಿರ್ಮಾಣವಾಗಿದ್ದು ಶೇ 71ರಷ್ಟು ನೀರು ತುಂಬಿಕೋಂಡಿದ್ದರೂ ಕೂಡ ಶೇ 96ರಷ್ಟು ಉಪ್ಪು ನೀರು ಇದ್ದು ಇನ್ನು ಶೇ 4ರಷ್ಟು ನೀರಿನಲ್ಲಿ ಗಡುಸು ನಿರು ಸಿಹಿ ನೀರು ಎಂದು ವಿಂಗಡಿಸಲಾಗಿದ್ದು ಅದರಲ್ಲಿ ಶೇ2.5ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು. ಸರ್ಕಾರ ಪ್ರತಿ ಮನೆ ಕಟ್ಟಿಸುವಾಗ ಮನೆಯಲ್ಲಿ ಗಿಡ ಮರ ಹಾಗೂ ಕಡ್ಡಾಯವಾಗಿ ಶೌಚಲಯ ವಿದ್ದರೆ ಮನೆ ಕಟ್ಟಲು ಪರವಾನಿಗೆ ನೀಡಬೇಕು ಹಾಗೂ ನದಿಗಳಿಂದ ಹೆಚ್ಚಾದ ನೀರು ಸಮುದ್ರಕ್ಕೆ ಸೇರದಂತೆ ನೋಡಿಕೋಂಡು ಅನೀರನ್ನು ಬಳಸುವ ರೀತಿಯಲ್ಲಿ ಸರ್ಕಾರ ಕಾಯ್ದೆ ಜಾರಿಗೆ ತರಬೇಕು ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಕೆ.ಬಸವರಾಜ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಸುರೇಖಾ.ಬಿ. ವಕೀಲರುಗಳಾದ ಬಿ.ಗೋಣಿಬಸಪ್ಪ, ಕರಿಯಪ್ಪ.ಡಿ.ಹನುಮಂತ, ಬಾಗಳಿ ಮಂಜುನಾಥ, ಎ.ಎಲ್.ರೇವಣ ಸಿದ್ದಪ್ಪ, ಬಿ.ಶ್ರೀನಿಧಿ ಸೇರಿದಂತೆ ಇತರರು ಇದ್ದರು.