ಲಖನೌ:
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಬಹುದೊಡ್ಡ ಮತಾರಂತರ ಜಾಲವನ್ನು ಪತ್ತೆ ಮಾಡಲಾಗಿತ್ತು. ಇದೀಗ ಮತ್ತೊಂದು ಅಂತಹುದೇ ಜಾಲ ಪತ್ತೆಯಾಗಿದ್ದು, ಇವರ ಕತೆ ಕೇಳಿದ್ರೆ ಶಾಕ್ ಆಗುತ್ತೆ. ಅಂತರರಾಜ್ಯ ಧಾರ್ಮಿಕ ಮತಾಂತರ ಗ್ಯಾಂಗ್‌ನ ಪ್ರಮುಖ ಗುರಿಯಾಗಿದ್ದು ಹುಡುಗಿಯರಲ್ಲ, ಬದಲಾಗಿ ಯುವಕರು. ತನಿಖಾಧಿಕಾರಿಗಳು ಇದನ್ನು “ಲವ್ ಜಿಹಾದ್ 2.0” ಎಂದು ಹೇಳಿದ್ದಾರೆ. ಈ ಗ್ಯಾಂಗ್ ಹಿಂದೂ ಪುರುಷರನ್ನು ಟಾರ್ಗೆಟ್ ಮಾಡಿ ಮದುವೆಯ ಆಮಿಷವೊಡ್ಡಿ ಮಾದಕ ವ್ಯಸನದ ಮೂಲಕ ಇಸ್ಲಾಂಗೆ ಬಲೆಗೆ ಬೀಳಿಸಿದೆ ಎಂದು ಆರೋಪಿಸಲಾಗಿದೆ. ಪೊಲೀಸರು ಈ ಗ್ಯಾಂಗ್‌ನ ನಾಲ್ವರನ್ನು ಬಂಧಿಸಿದ್ದಾರೆ.
ಈ ಗ್ಯಾಂಗ್ ಸದಸ್ಯರು ತಮ್ಮ ಜಾಲವನ್ನು 14 ರಾಜ್ಯಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದ ಹಿಂದಿನ ಪ್ರಕರಣಗಳಿಗಿಂತ ಭಿನ್ನವಾಗಿ, ಲವ್ ಜಿಹಾದ್ 2.0 ಹೊಸ ತಿರುವು ನೀಡುತ್ತದೆ – ಯುವ ಹಿಂದೂ ಪುರುಷರನ್ನು ಇವರು ಆಮಿಷಕ್ಕೊಡ್ಡುತ್ತಿದ್ದರು. ಅಬ್ದುಲ್ ಮಜೀದ್‌ನ ಗ್ಯಾಂಗ್ ದುರ್ಬಲ ಹಿಂದೂ ಪುರುಷರನ್ನು – ವಿದ್ಯಾರ್ಥಿಗಳು, ಶಿಕ್ಷಕರು, ನಿರುದ್ಯೋಗಿ ಯುವಕರನ್ನು – ಮದುವೆ, ಸ್ವೀಕಾರ ಅಥವಾ ಹಣದ ಭರವಸೆಗಳೊಂದಿಗೆ ಬಲೆಗೆ ಬೀಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ಯುವಕರನ್ನು ವ್ಯವಸ್ಥಿತವಾಗಿ ಮಾದಕ ದ್ರವ್ಯ ಸೇವಿಸಿ, ಬ್ರೈನ್ ವಾಶ್ ಮಾಡಿ ಮತ್ತು ಮತಾಂತರಗೊಳಿಸಲಾಗಿದೆ” ಎಂದು ತನಿಖೆಯ ನೇತೃತ್ವ ವಹಿಸಿರುವ ಬರೇಲಿ ಎಸ್‌ಪಿ (ದಕ್ಷಿಣ) ಅಂಶಿಕಾ ವರ್ಮಾ ಹೇಳಿದರು. ಲವ್ ಜಿಹಾದ್ 2.0 ರ ಬರೇಲಿ ಮಾಡ್ಯೂಲ್ ಕಾಣೆಯಾದ ಅಥವಾ ಹಠಾತ್ತನೆ ಮತಾಂತರಗೊಂಡ ಯುವಕರ ಬಗ್ಗೆ ಕುಟುಂಬಗಳು ದೂರು ನೀಡಿದ ನಂತರ ಬೆಳಕಿಗೆ ಬಂದಿತು.
ಈ ಹಿಂದೆ ಧಾರ್ಮಿಕ ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಇಷ್ಟೇ ಅಲ್ಲದೇ ಆತನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮತ್ತು ಬುಲ್ಡೋಜರ್‌ನಿಂದ ಧ್ವಂಸಗೊಳಿಸಲಾಗಿದೆ. ಚಂಗೂರ್ ಬಾಬಾ ಬಳಿ ಒಟ್ಟು 40 ಬ್ಯಾಂಕ್ ಅಕೌಂಟ್‌ಗಳಿದ್ದು, ಬಹುತೇಕ ಹಣವು ಮಧ್ಯಪ್ರಾಚ್ಯದಿಂದ ಬರುತ್ತಿದೆ ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ. ಚಂಗೂರ್ ಬಾಬಾ ಮತ್ತು ಆತನ ಸಹಚರರು ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗದವರು ಮತ್ತು ವಿಧವೆಯ ಮಹಿಳೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ವಿವಾಹದ ಭರವಸೆ ಅಥವಾ ಬಲವಂತದ ಬೆದರಿಕೆಯ ಮೂಲಕ ಆಮಿಷವೊಡ್ಡಿದ್ದಾರೆ.
ಇದು ಧಾರ್ಮಿಕ ಮತಾಂತರಕ್ಕೆ ಸ್ಥಾಪಿತ ಕಾರ್ಯವಿಧಾನಗಳನ್ನು ಉಲ್ಲಂಘಿಸಿದೆ” ಎಂದು ಉತ್ತರ ಪ್ರದೇಶ ಪೊಲೀಸರ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.








