9 ಮಂದಿ ಹಾಲಿ ಜೆಡಿಎಸ್ ಶಾಸಕರಿಗೆ ನಿಗಮ ಮಂಡಳಿ ಹಂಚಿಕೆ..!!!

ಬೆಂಗಳೂರು

      ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ನೀಡುವುದಿಲ್ಲ ಎಂಬ ಅಪವಾದವನ್ನು ತೊಡೆದುಹಾಕಿರುವ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ನವ ಮಾಸದ ಈ ಸರ್ಕಾರದಲ್ಲಿ 9 ಮಂದಿಗೆ ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡಿದ್ದಾರೆ.

      ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕರಿಗೆ ಅಧಿಕಾರ ನೀಡುವುದಾಗಿ ಘೋಷಿಸಿದ್ದ ಕುಮಾರಸ್ವಾಮಿ ತಮ್ಮ ನಿಲುವು ಬದಲಿಸಿದ್ದಾರೆ. 8 ಮಂದಿ ಹಾಲಿ ಶಾಸಕರಿಗೆ ಅಧಿಕಾರ ನೀಡಿ ಮಾಜಿ ಶಾಸಕರಿಗೆ ನಿರಾಸೆ ಉಂಟುಮಾಡಿದ್ದಾರೆ.

     ಆದೇಶನಾಗನಗೌಡ ಕಂದಕೂರು- ಅಧ್ಯಕ್ಷರು – ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ರಾಜಾವೆಂಕಟಪ್ಪ ನಾಯಕ್- ಅಧ್ಯಕ್ಷರು- ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮ. ಡಿ.ಸಿ.ಗೌರಿ ಶಂಕರ್ -ಅಧ್ಯಕ್ಷರು-ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್( ಎಂಎಎಸ್‍ಐಎಲ್) ಬಿ.ಸತ್ಯನಾರಾಯಣ -ಅಧ್ಯಕ್ಷರು- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಸರ್ಗ ನಾರಾಯಣ ಸ್ವಾಮಿ -ಅಧ್ಯಕ್ಷರು-ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರ. ಡಾ.ಕೆ.ಅನ್ನದಾನಿ-ಅಧ್ಯಕ್ಷರು-ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ. ಕೆ.ಎಂ.ಶಿವಲಿಂಗೇಗೌಡ-ಅಧ್ಯಕ್ಷರು- ಕರ್ನಾಟಕ ಗೃಹ ಮಂಡಳಿ  ಕೆ.ಮಹದೇವ್- ಅಧ್ಯಕ್ಷರು- ಕರ್ನಾಟಕ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ದಿ ನಿಗಮ ಹಾಗೂ ಪಕ್ಷದ ಹಿರಿಯ ಮುಖಂಡ  ಮಹಮ್ಮದ್ ಜಫ್ರುಲ್ಲಾ ಖಾನ್ ಅವರನ್ನು ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap