ಪಾವಗಡ
ಪಾವಗಡ ಪಟ್ಟಣದ ಚಳ್ಕಕೆರೆ ಕ್ರಾಸ್ ಬಳಿ ಇರುವ ಬೋವಿ ಜನಾಂಗದ ವಸತಿನಿಲಯವನ್ನು ಅಭಿವೃದ್ದಿ ಪಡಿಸಬೇಕು ಎಂದು ಬೋವಿ ಸಮಾಜದ ಮುಖಂಡ ಹನುಮಂತನಹಳ್ಳಿಯ ಸಣ್ಣವೆಂಕಟರವಣಪ್ಪ ಮನವಿ ಮಾಡಿದ್ದಾರೆ.
ಮಂಗಳವಾರ ಪಾವಗಡ ಪಟ್ಟಣದ ತಹಸೀಲ್ದಾರ್ ಕಚೆರಿಯಲ್ಲಿ ತಾಲ್ಲೂಕು ಅಡಳಿತದಿಂದ ಹಮ್ಮಿಕೊಂಡಿದ್ದ ಸಿದ್ದರಾಮೇಶ್ವರರ 846 ನೇ ಜಯಂತಿ ಅಂಗವಾಗಿ ಸಿದ್ದರಾಮೇಶ್ವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು, ಬೋವಿ ಸಮಾಜದಿಂದ ವಸತಿನಿಲಯ ಕಟ್ಟಡ ನಿರ್ಮಾಣ ಮಾಡಿ ಹಲವು ವರ್ಷಗಳು ಕಳೆದಿವೆ, ಆದರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಈಗಲಾದರೂ ಸರ್ಕಾರ ಮತ್ತು ಜನಾಂಗದ ಮುಖಂಡರು ಅಭಿವೃದ್ದಿಗೆ ಬದ್ದರಾಗಬೇಕೆಂದು ತಿಳಿಸಿದರು.
ಮುಖಂಡ ತಾಳೆಮರದಹಳ್ಳಿ ಮಂಜುನಾಥ್ ಮಾತನಾಡಿ, ಸಿದ್ದರಾಮೇಶ್ವರರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದರು.ಬೋವಿ ಜನಾಂಗದ ಮುಖಂಡರಾದ ಸುಬ್ಬರಾಯಪ್ಪ, ಗ್ರಾಮಲೆಕ್ಕಿಗ ರಾಜಗೋಪಾಲ್, ಶಿವಮೂರ್ತಿ, ಬೊಟ್ಟುವೆಂಕಟೇಶ್, ಹನುಮಂತರಾಯ, ನಾನಿ, ಮುತ್ಯಾಲಪ್ಪ, ಸತೀಶ್ ಬಾಬು, ಆರ್.ಎಲ್. ರಾಜೇಶ್, ಗೌರೀಶ್, ವಡ್ಡೆಶ್ರೀನಿವಾಸ್, ಆಂಜನೇಯಲು, ಗೋವಿಂದಪ್ಪ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
