ಬಳ್ಳಾರಿ
ನಗರದಲ್ಲಿ ಕಣ್ಣಾ ಮುಚ್ಚಾಲೆ ಆಡುತ್ತಿರುವ ವಿದ್ಯುತ್. ಕಣ್ಣು ಮುಚ್ಚಿ ಕುಳಿತ ಜೆಸ್ಕಂ ಇಲಾಖೆಯ ಅಧಿಕಾರಿಗಳು ಗ್ರಾಹಕರ ಬಗ್ಗೆ ಯಾವ ಅಧಿಕಾರಿಗಳಿಗೂ ಕಾಳಜಿ ಇಲ್ಲ. Chif, EE, SE, AEE, MD. ಸಾರ್ವಜನಿಕ ರ ಸಂಪರ್ಕಕ್ಕೆ ಸಿಗದಿರುವುದು ನಾಚಿಕೆ ಗೇಡಿತನ ಸಂಗತಿಯಾಗಿದೆ. ಅಧಿಕಾರಿಗಳು ಕೇವಲ ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೇ ಹೊರತು ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಲು ಅಲ್ಲ. ಎಂದು ಸಾರ್ವಜನಿಕರು ಜೆಸ್ಕಾಂ ಇಲಾಖೆಗೆ ಇಡಿ ಶಾಪ ಹಾಕುತ್ತಿದ್ದಾರೆ. ಪದೇ ಪದೇ ವಿದ್ಯುತ್ ಕಡಿತ ಗೋಳಿಸುವುದರಲ್ಲಿ ಗಿನ್ನೀಸ್ ದಾಖಲೆ ನಿರ್ಮಿಸಿದ ಜೆಸ್ಕಾಂ.
“ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ವಿಫಲವಾದ ಬಳ್ಳಾರಿ ಜೆಸ್ಕಾಂ ಪವರ್ ಕಟ್ಟ್ ಇಲ್ಲದಿದ್ದರು ನಗರದಲ್ಲಿ ಪ್ರತಿದಿನ ಪದೆ ಪದೆ ವಿದ್ಯುತ್ ಸಂಪರ್ಕವನ್ನು ತೆಗೆದು ತಮಾಷೆಯ ನೋಡುತ್ತಿರುವ ಇಲಾಖೆಯ ಸಿಬ್ಬಂದಿಗಳು.ನಾವು ಎಷ್ಟು ಬಾರಿ ವಿದ್ಯುತ್ ಕಡಿತ ಗೋಳಿಸಿದರು ಕೇಳುವವರು ಯಾರು ಇಲ್ಲ ಎಂದು ತಿಳಿದ ಜೆಸ್ಕಾಂ ಇಲಾಖೆ.ರಾಜ್ಯದಲ್ಲಿ ಪವರ್ ಕಟ್ಟ್ ಇಲ್ಲದಿದ್ದರು. ಬಳ್ಳಾರಿ ನಗರದಲ್ಲಿ ಮಾತ್ರ ಪದೇ ಪದೇ ಪ್ರತಿ ದಿನ 5 ರಿಂದ 6 ಭಾರಿ ಪವರ್ ಕಟ್ ಮಾಡಿ. ಜನರಿಂದ ಚಿ..ತು. ಎಂದು ಚೀಮಾರಿ ಹಾಕಿಸಿ ಕೊಳ್ಳುತ್ತಿದ್ದರು. ಅಧಿಕಾರಿಗಳು ಮಾತ್ರ ಪವರ್ ಕಟ್ ಸಮಸ್ಯೆಗಳನ್ನು ಮಾತ್ರ ಕಡಿಮೆ ಮಾಡಿಲ್ಲ.
ಬಿಸಿಲಿಗೆ ಹೆಸರು ವಾಸಿಯಾದ ಜಿಲ್ಲೆ ಬಳ್ಳಾರಿ ಈ ಬಿಸಿಲಿನ ತಾಪಕ್ಕೆ ಬೆಗನೆ ಮನೆ ಸೇರಿ ಫ್ಯಾನುಗಳ ಆಶ್ರಯದಲ್ಲಿ ತಣ್ಣಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಇಲಾಖೆಯವರು ಪದೇ ಪದೇ ಕರೆಂಟ್ ತೆಗೆದು ಸಾರ್ವಜನಕ ರಿಂದ ಮಂಗಳಾರತಿ ಮಾಡಿಸಿ ಕೊಳ್ಳುತ್ತಿದ್ದಾರೆ.
ಅಧಿಕಾರಿಗಳ ಮತ್ತು ರಾಜಕೀಯ ಮುಖಂಡರ ನಿರ್ಲಕ್ಷ್ಯ:- ನಗರದಲ್ಲಿ ಇಷ್ಟೇಲ್ಲ ಸಮಸ್ಯೆಗಳು ಇದ್ದರು ತಮ್ಮ ಮನೆಯಲ್ಲಿ ಯುಪಿಎಸ್ ವಿದ್ಯುತ್ ಸಂಪರ್ಕ ಪಡೆದು ಆರಾಮವಾಗಿರುವ ಅಧಿಕಾರಿಗಳಿಗೆ ಮತ್ತು ರಾಜಕೀಯ ಮುಖಂಡರರಿಗೆ ಎಲ್ಲಿ ಅರ್ಥವಾಗುತ್ತದೆ ಬಡವರ ಕಷ್ಟ ಎಂದು ಶಾಪ ಹಾಕುತಿದ್ದಾರೆ.
ಸ್ವಾರ್ಥ ಅಧಿಕಾರಿಗಳು ಮತ್ತು ರಾಜಕಾರಣಿಗಳು :- ಬಡವರಿಗೆ ಕಷ್ಟವಾಗುತ್ತದೆ ಎಂದು ಯಾವ ಅಧಿಕಾರಿಗಳಾಗಲಿ ರಾಜಕೀಯ ಮುಖಂಡರಾಗಲಿ ಆಲೋಚನೆ ಮಾಡಿಲ್ಲ. ಕೇವಲ ಅವರವರ ಸ್ವಾರ್ಥಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಎಂದು ನಗರದ ಜನತೆ ಹೇಳುತ್ತಿದ್ದಾರೆ.ನಗರದಲ್ಲಿ ಎಷ್ಟು ಬಾರಿ ಕರೆಂಟ್ ಕಟ್ ಮಾಡಿದರು ಏನು ಕ್ರಮ ಜರುಗಿಸದ ನಿರ್ಲಕ್ಷ್ಯ ಅಧಿಕಾರಿ ಕಾರಿಗಳು ಮತ್ತು ರಾಜಕೀಯ ಮುಖಂಡರು ಇದಕ್ಕೆ ಪ್ರಮುಖ ಕಾರಣ ಎಂದು ನೊಂದು ಬೆಂದ ಜನರ ಕೂಗು