ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದ ನೀರುದೀವಿಗೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯವರ ಜಾತ್ರಾ ಮಹೋತ್ಸವವು ಏಪ್ರಿಲ್ 13 ರಿಂದ 16 ರವರೆಗೆ ನಡೆಯಲಿದೆ.
13 ರ ಶನಿವಾರದಂದು ಧ್ವಜಾರೋಹಣ ನಡೆಯಲಿದೆ. 14ರಂದು ಬೆಳಗ್ಗೆ 11ಕ್ಕೆ ಧೂಪಸೇವೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಹಾಗೂ ರಾತ್ರಿ 8ಕ್ಕೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. 15ರ ಸೋಮವಾರದಂದು ಮಹಾರಥೋತ್ಸವ ನಡೆಯಲಿದ್ದು, ಹೊನ್ನೆಬಾಗಿ ಯುವಕರ ಬಳಗ ಹಾಗೂ ಗ್ರಾಮಸ್ಥರಿಂದ ರಾತ್ರಿ 9ಕ್ಕೆ ವೀರಗಾಸೆ ನಡೆಯಲಿದೆ.
16 ರ ಮಂಗಳವಾರ ಬೆಳಗ್ಗೆ 11ಕ್ಕೆ ಕರಿಯಮ್ಮದೇವಿಯವರು ಬನ್ನಿಮರ ಹತ್ತುವುದು, ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ 8ಕ್ಕೆ ಕಳಸೋತ್ಸವ ಮತ್ತು ಪುರಪ್ರವೇಶ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಹೊನ್ನೇಬಾಗಿ ಕರಿಯಮ್ಮದೇವಿ, ದಬ್ಬೆಘಟ್ಟ ಗ್ರಾಮದೇವತೆ ಕೆಂಪಮ್ಮದೇವಿ ದೇವರ ಉತ್ಸವ ನಡೆಯುತ್ತವೆ. ಏಪ್ರಿಲ್ 30ರಂದು ಕರಿಯಮ್ಮದೇವಿಯವರ ಬಾನ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
