ಗೂಳೂರು ನಾಡ ಕಚೇರಿಯ ಅವ್ಯವಸ್ಥೆ ಸರಿಪಡಿಸಲು ಮನವಿ

ತುಮಕೂರು:

        ತಾಲ್ಲೂಕಿನ ಗೂಳೂರು ನಾಡಕಚೇರಿಯಲ್ಲಿ ಯಾವುದೇ ಕೆಲಸ ಸುಗಮವಾಗಿ ಆಗುತ್ತಿಲ್ಲ. ಇಲ್ಲಿಗೆ ಪ್ರತಿದಿನ ವಿವಿಧ ಕಾರ್ಯಗಳ ನಿಮಿತ್ತ ಬಂದು ಜನ ಕೆಲಸವಾಗದೆ ವಾಪಸ್ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಕಿ.ಮೀ.ಗಳಿಂದ ಬರುವ ಜನರಿಗೆ ಈ ನಾಡಕಚೇರಿ ಬಳಿ ನೆರಳಿಲ್ಲದೆ ಇರುವುದರಿಂದ ಬಿಸಿಲಿನಲ್ಲೇ ಗಂಟೆಗಟ್ಟಲೆ ನಿಂತು ಪಹಣಿ ಪಡೆಯಬೇಕಾದಂತಹ ದುಃಸ್ಥಿತಿ ಬಂದೊದಗಿದೆ. ಇಲ್ಲಿನ ಕಚೆರಿಯಲ್ಲಿ ಕುಡಿಯಲಿಕ್ಕೂ ಸಹ ನೀರಿರುವುದಿಲ್ಲ.

        ಪಹಣಿ, ವೃದ್ಧಾಪ್ಯ ವೇತನ, ತಿದ್ದುಪಡಿ, ಜಾತಿ ಪ್ರಮಾಣ ಪತ್ರ ಪಡೆಯಲು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಇವು ಸಿಗದೆ ವಾಪಸ್ಸಾಗಬೇಕಾದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಇಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಸರ್ವರ್ ಬ್ಯುಸಿ ಎಂದೇಳುತ್ತಾರೆ. ಆದರೆ ತಮಗೆ ಬೇಕಾದವರಿಗೆ ಮಾತ್ರ ಸರ್ವರ್ ಸಿಗುತ್ತದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

          ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಮೇಲ್ಕಂಡ ಕಚೆರಿಯಲ್ಲಿ ಸಾರ್ವಜನಿಕರಿಗಾಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ. ಇದೇ ರೀತಿ ಇಲ್ಲಿನ ಸಿಬ್ಬಂದಿ ಸಬೂಬು ಹೇಳುತ್ತಿದ್ದರೆ ಕಚೆರಿ ಮುಂದೆ ಪ್ರತಿಭಟನೆ ನಡೆಸಬೇಕಾಗುವುದೆಂದು ಸಾರ್ವಜನಿಕರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link