ಬೆಂಗಳೂರು
ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ ತೀರ್ಪು ಕೋಟ್ಯಾಂತರ ಭಕ್ತರ ಭಾವನೆಗೆ ಧಕ್ಕೆಯಾಗಿದ್ದು ಕೂಡಲೇ ತೀರ್ಪುನ್ನು ಪುನರ್ ಪರಿಶೀಲಿಸಬೇಕೆಂದು ಸುಪ್ರೀಂ ಕೋಟ್9ನ್ನು ಆಗ್ರಹಿಸಿ ನೂರಾರು ಆಯ್ಯಪ್ಪ ಭಕ್ತರು ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಪುರಭವನದ ಬಳಿ ಶಬರಿಮಲೆ ಪರಂಪರೆ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮಣಿಕಂಠ ಭಕ್ತ ಮಂಡಳಿ, ಕೋದಂಡ ರಾಮ ಮಂದಿರ ಸಂಘಟನೆ ಸೇರಿ ಹಲವು ಸಂಘಟನೆಗಳ ಕಾರ್ಯಕರ್ತರು ಭಕ್ತರು ಫ್ರೀಡಂ ಪಾಕ್9ವರೆಗೆ ಮೆರವಣಿಗೆ ನೆಡೆಸಿ ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ ತೀರ್ಪುನ್ನು ಪುನರ್ ಪರಿಶೀಲಿಸದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಮೆರವಣಿಗೆಯ ನೇತೃತ್ವವಹಿಸಿದ್ದ ಡಾ. ಸಂತೋಷ ಭಾರತಿ ಶ್ರೀಪಾದ ಅವರು ಮಾತನಾಡಿ ಯಾವುದೇ ಜಾತಿ,ಧರ್ಮ ಭೇದ ಭಾವ ಇಲ್ಲದೆ ಪಾವಿತ್ರತೆಯನ್ನು ಉಳಿಸಿಕೊಂಡಿರುವ ಶಬರಿಮಲೆ ದೇವಾಲಯವನ್ನು ರಕ್ಷಿಸಲು ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ಕೋಟ್ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸುಪ್ರೀಂ ಕೋರ್ಟ್ ತೀರ್ಪಿನಿಂದ ಆಯ್ಯಪ್ಪನ 30ಕೋಟಿ ಭಕ್ತರಿಗೆ ಉಂಟಾಗಿರುವ ಆಘಾತ ಉಂಟಾಗಿದೆ ಭಕ್ತರ ಭಾವನೆಗಳಿಗೆ ಬೆಲೆಕೊಟ್ಟು ಸುಪ್ರೀಂ ಕೋಟ್9 ತೀರ್ಮಾನ ಕೈಗೊಳ್ಳಬೇಕು ಭಕ್ತರ ಆತಂಕ ಹೋಗಲಾಡಿಸಬೇಕು ಎಂದರು.
ಜಲ್ಲಿಕಟ್ಟು ರೀತಿಯಲ್ಲಿಯೇ ಪುನರ್ ಶೀಲನೆ ತೀರ್ಪನ್ನು ಪ್ರಕಟಿಸಬೇಕು, ಶಬರಿಮಲೆ ಸಂಪ್ರದಾಯ ಉಳಿವಿಗಾಗಿ ಅಯ್ಯಪ್ಪನ ಭಕ್ತರು ಪ್ರಾಣಕೊಡಲು ಸಿದ್ಧರಿರುವುದು ಕೇರಳ ಸರ್ಕಾರಕ್ಕೆ ನೀಡಿರುವ ಎಚ್ಚರಿಕೆಯಾಗಿದೆ ಶಬರಿಮಲೆ ಸಂಪ್ರದಾಯ ಉಳಿವಿಗಾಗಿ ಶಾಂತಿಯ ಯಾತ್ರೆ ಆರಂಭಿಸಿರುವ ನಾವು ರಾಜ್ಯಪಾಲರಿಗೆ, ಹೈಕೋರ್ಟ್ ಮಖ್ಯ ನ್ಯಾಧೀಶರಿಗೆ, ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಹಿಂದೂ ಜಾಗರಣ ವೇದಿಕೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ ಮಾತನಾಡಿ ನಾಸ್ತಿಕ ಕೇರಳ ಸರ್ಕಾರ ಭಕ್ತ ವೃಂದದ ಮೇಲೆ ಹಲ್ಲೆ ಮಾಡಿ ದೇವಾಲಯದ ಆವರಣದಲ್ಲಿ ರಕ್ತ ಹರಿಸಿದೆ.ಅಯ್ಯಪ್ಪನ ದೇವಾಲಯದ ವಿಷಯದಲ್ಲಿ ಕೇರಳ ಸರ್ಕಾರ ಉದ್ಧಟತವನ್ನು ತೋರಿಸುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಮಾಡಿ ಕೇರಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಹಾಗೂ ದೇವಾಲಯದ ಹಿಂದಿನ ಸಂಪ್ರದಾಯವನ್ನು ಯತಾಸ್ಥಿತಿ ಉಳಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ನಟ ಶಿವರಾಮ್ ಮಾತನಾಡಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಪರಿಶೀಲಿಸಿ ದೌವಶಕ್ತಿ ಹಾಗೂ ಭಕ್ತರ ಭಾವನೆಯನ್ನು ಗೌರವಿಸಬೇಕು ಇದು ಭಗವಂತ ಹಾಗೂ ಭಕ್ತರ ಸಂಬಂಧ, ಸಂಪ್ರದಾಯ ಅಳಿಸಲು ಹಿಂದೂಗಳಿಗೆ ಹಿಂದೂಗಳೇ ವಿರೋಧಿಗಳಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದರು.
ಗುರು ಸ್ವಾಮಿಗಳ ಪ್ರತಿನಿಧಿಗಳು ಇಲ್ಲಿಗೆ ಬಂದಿವೆ. ಸುಪ್ರೀಂ ತೀರ್ಪು ಮರು ಪರಿಶೀಲಿಸುವಂತೆ ಒತ್ತಾಯ ಮಾಡಿದ್ದೇವೆ ಮೆರವಣಿಗೆ ನಡೆಸಿ ಹಿಂದೂಗಳ ಭಾವನೆಗೆ ಧಕ್ಕೆ ಆಗಿರುವ ನೋವನ್ನು ತಿಳಿಸಿದ್ದೇವೆ ಶತಮಾನಗಳಿಂದ ಬಂದಿರುವ ಭಾವನೆಗೆ ಧಕ್ಕೆ ಉಂಟಾಗಿದೆ. ದೇವಾಲಯ ಪ್ರವೇಶಕ್ಕೆ ಹೊರಟದ್ದ ಮಹಿಳೆಯರು ಸಂಪ್ರದಾಯ ಪಾಲಿಸಿದ್ದರೇ ಅವರು ಭಕ್ತರಾ ಬಿಗಿ ಪೆÇಲೀಸ್ ಭದ್ರತೆಯಲ್ಲಿ ಹೈಲ್ಮೈಟ್ ಹಾಕಿಕೊಂಡು ಹೋಗುವ ಅವಶ್ಯಕತೆ ಇತ್ತಾ ಇದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಈ ಕೂಡಲೇ ತೀರ್ಪುನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದರು.ಶಾಂತಿ ಮೆರವಣಿಗೆಯಲ್ಲಿ ನೂರಾರು ಅಯ್ಯಪ್ಪ ಭಕ್ತಾದಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








