ಧರ್ಮ ವಿವಾದ ಮುಗಿದ ಅಧ್ಯಾಯ : ಶ್ಯಾಮನೂರು ಶಿವಶಂಕರಪ್ಪ

ಬೆಂಗಳೂರು

       ವೀರಶೈವ, ಲಿಂಗಾಯತ ಧರ್ಮ ವಿವಾದ ಮುಗಿದ ಅಧ್ಯಾಯವಾಗಿದ್ದು ವಿವಾದ ತಣ್ಣಗಾಗಿದ್ದರೂ ಪ್ರಚಾರ ಹಾಗೂ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಧರ್ಮದ ಅಪ್ರಚಾರ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದರು.

          ಬೆಂಗಳೂರು ಉತ್ತರ ತಾಲ್ಲೂಕಿನ ತರಹುಣೇಸೆಯಲ್ಲಿ ಗುರುವಾರ ಬೆಳಿಗ್ಗೆ ವಸತಿ ನಿಲಯಗಳ ಶಂಕು ಸ್ಥಾಪನಾ ಸಮಾರಂಭದಲ್ಲಿ ಬಾಲಕರ ವಸತಿನಿಲಯ ಶಂಕು ಸ್ಥಾಪನೆ ನೇರವೇರಿಸಿ, ಮಾತನಾಡಿದ ಅವರು ಪ್ರತ್ಯೇಕ ಧರ್ಮದ ಹೆಸರಿಲ್ಲಿ ಲಾಭ ಪಡೆಯಲು ಯತ್ನಿಸುತ್ತಿರುವವರನ್ನು ನಿರ್ಲಕ್ಷಿಸಬೇಕು ಎಂದರು.

         ರಾಜ್ಯದಲ್ಲಿ ಚುನಾವಣಾ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೀರಶೈವ ಲಿಂಗಾಯಿತ ಧರ್ಮ ವಿಭಜನೆಗೆ ಮುಂದಾಗಿದ್ದರು ಎಂಬುದು ಸತ್ಯಕ್ಕೆ ದೂರವಾದುದು. ಈ ಬಗ್ಗೆ ವಿರೋಧ ಪಕ್ಷದವರು ಹಾಗೂ ಮತ್ತಿತರರು ಅಪ್ರಚಾರ ನಡೆಸಿದರು. ಎರಡು ಧರ್ಮಗಳು ಒಂದೇ ವೇದಿಕೆಯಲ್ಲಿ ಕೆಲಸ ಮಾಡುತ್ತೀವೆ. ವೀರಶೈವ, ಲಿಂಗಾಯಿತ ಜನಾಂಗದ ಅಭಿವೃದ್ಧಿಗಾಗಿ ಒಟ್ಟಿಗೆ ಕೆಲಸ ನಿರ್ವಹಿಸುತ್ತೀವೆ ಎಂದು ತಿಳಿಸಿದರು.

          ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗದಗ ತೋಂಟದಾರ್ಯ ಸ್ವಾಮೀಜಿಯವರ ಪುಣ್ಯಸ್ಮರಣೆ ಸಮಾರಂಭದಲ್ಲಿ ಧರ್ಮ ರಾಜಕಾರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಆ ವಿಚಾರದ ಬಗ್ಗೆ ಮಾತನಾಡುವುದು ಅಪ್ರಸುತ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

          ತರಹುಣೇಸೆ ಗ್ರಾಮದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಬಾಲಕ, ಬಾಲಕಿಯರ ಹಾಗೂ ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ. ಈ ವಸತಿನಿಲಯದಲ್ಲಿ ವೀರಶೈವ ಲಿಂಗಾಯಿತ ಬಡ ಹಾಗೂ ನಿರ್ಗತಿಕ ಮಕ್ಕಳಿಗೆ ಉಚಿತವಾಗಿ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.

        ಸಮಾರಂಭದಲ್ಲಿ ವೀರಶೈವ ಮಹಾಸಭೆ ನಿಕಟಪೂರ್ವ ಮಾಜಿ ಅಧ್ಯಕ್ಷ ಡಾ. ಭೀಮಣ್ಣಖಂಡ್ರೆ, ಹಿರಿಯ ಮಹಾಸಭೆಯ ಉಪಾಧ್ಯಕ್ಷ ಎಂ. ತಿಪ್ಪಣ್ಣ, ಬಿ.ಎಸ್. ಸಚ್ಚಿದಾನಂದಮೂರ್ತಿ, ರೇಣುಕಾ ಪ್ರಸನ್ನ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap