ಬೆಂಗಳೂರು
“ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಕಣ್ಣುಗಳಿದ್ದಂತೆ. ಆದರೆ ದೃಷ್ಟಿ ಒಂದೇ,” ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ, ಯಾರು ಜೈಲಿಗೆ ಹೋಗುತ್ತಾರೆ ಎನ್ನುವುದು ನವೆಂಬರ್ 6 ರಂದು ಗೊತ್ತಾಗಲಿದೆ ಎಂದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ನಾಯಕ ಬಿ. ಶ್ರೀರಾಮುಲು ನವೆಂಬರ್ 6 ರಂದು ಜೆ. ಶಾಂತಾ ಗೆದ್ದು ದೆಹಲಿಗೆ ಹೋಗುತ್ತಾರೆ. ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ನಮ್ಮ ಲಕ್ಷ್ಯ ಗೆಲ್ಲುವುದರತ್ತ ಮಾತ್ರ ಇದೆ. ಬಳ್ಳಾರಿಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮುಂದಿನ ತಿಂಗಳು ಗೊತ್ತಾಗಲಿದೆ ಎಂದರು.
ಶ್ರೀ ರಾಮುಲು ಅವರಿಗೆ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. ಅವರು ನನ್ನ ಸ್ನೇಹಿತರು ಎಂದಿದ್ದಾರೆ. ಅವರನ್ನು ಬಳ್ಳಾರಿಯಲ್ಲೇ ಭೇಟಿ ಮಾಡಯುತ್ತೇನೆ. ಅವರು ಎಲ್ಲಿಗೆ ಕಳುಹಿಸುತ್ತಾರೋ ಕಳುಹಿಸಲಿ ಎಂದರು.
ಎಲ್ಲಾ ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷಗಳಿಂದ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಐದೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ನಡುವೆ ಉತ್ತಮ ಹೊಂದಾಣಿಕೆಯಿದೆ ಎಂದರು. “ಶಿವಮೊಗ್ಗದಲ್ಲಿ ಜೆಡಿಎಸ್ ಗೆದ್ದರೆ ನಾವು ಗೆದ್ದಷ್ಟೇ ಸಂತೋಷವಾಗತ್ತೆ. ರಾಜಕಾರಣದಲ್ಲಿ ಒಂದು ಗೆಲ್ಲಬೇಕು ಅಂದರೆ ಇನ್ನೊಂದರಲ್ಲಿ ಸೋಲಬೇಕು,” ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
