ಲಂಡನ್
ಜರ್ಮನಿಯಿಂದ ಹೈದರಾಬಾದ್ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನವು ಮತ್ತೆ ಫ್ರಾಂಕ್ಫರ್ಟ್ಗಗೆ ಹಿಂದಿರುಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನ LH752, ಭಾನುವಾರ ಜರ್ಮನಿಯಿಂದ ಹೊರಟು ಸೋಮವಾರ ಮುಂಜಾನೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು.
ಸೋಮವಾರ ಬೆಳಗ್ಗೆಗೆ ವಿಮಾನ ಹಾರಾಟ ಮರು ನಿಗದಿಪಡಿಸಲಾಗಿರುವುದರಿಂದ ರಾತ್ರಿಯ ವಸತಿ ಒದಗಿಸಲಾಗುತ್ತಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ವಿಮಾನ ಹೊರಟು 2 ಗಂಟೆಗಳ ಕಾಲ ಹಾರಾಟ ನಡೆಸಿ ಮತ್ತೆ ಫ್ರಾಂಕ್‌ಫರ್ಟ್‌ಗೆ ಬಂದಿಳಿದಿತ್ತು.
ವಿಮಾನ ನಿಲ್ದಾಣದಲ್ಲಿ, ನಮಗೆ ರಾತ್ರಿ ವಸತಿ ಒದಗಿಸಿದ್ದಾರೆ ಮತ್ತು ಸೋಮವಾರ ಬೆಳಗ್ಗೆ 10 ಗಂಟೆಗೆ ಅದೇ ವಿಮಾನದಲ್ಲಿ ನಾವು ಹೊರಡುತ್ತೇವೆ ಎಂದು ಹೇಳಿದ್ದಾರೆ. LH752 ಜರ್ಮನಿಯಲ್ಲಿ ಮರಳಿ ಬಂದಿಳಿದಿದೆ ಎಂದು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದ ವಕ್ತಾರರು ದೃಢಪಡಿಸಿದ್ದಾರೆ. ಜರ್ಮನಿಯಿಂದ ಹೊರಟ ಸ್ವಲ್ಪ ಸಮಯದ ನಂತರ ವಿಮಾನವು ಫ್ರಾಂಕ್‌ಫರ್ಟ್‌ಗೆ ಹಿಂತಿರುಗುತ್ತಿದೆ ಎಂಬ ಸಂದೇಶವನ್ನು ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣಕ್ಕೆ ಕಳುಹಿಸಲಾಯಿತು.
flightaware.com ವೆಬ್‌ಸೈಟ್ ಪ್ರಕಾರ, LH752 ವಿಮಾನವು ಫ್ರಾಂಕ್‌ಫರ್ಟ್‌ನಿಂದ ಮಧ್ಯಾಹ್ನ 2.15 ಕ್ಕೆ ಹೊರಟು ಸೋಮವಾರ ಬೆಳಗ್ಗೆ 6 ಗಂಟೆಗೆ ಹೈದರಾಬಾದ್‌ನಲ್ಲಿ ಇಳಿಯುವ ನಿರೀಕ್ಷೆಯಿತ್ತು. ವೆಬ್‌ಸೈಟ್ ಪ್ರಕಾರ, ಈ ವಿಮಾನವು ಬೋಯಿಂಗ್ 787-9 ಡ್ರೀಮ್‌ಲೈನರ್ ಆಗಿದೆ.
ನಾವು ವಿಮಾನಯಾನ ಸಂಸ್ಥೆಯೊಂದಿಗೆ ಪರಿಶೀಲಿಸಿದ್ದೇವೆ ಮತ್ತು ಬಾಂಬ್ ಬೆದರಿಕೆ ಇದೆ ಎಂಬುದು ದೃಢಪಟ್ಟಿದೆ ಮತ್ತು ಅದಕ್ಕಾಗಿಯೇ ಅದನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೈದರಾಬಾದ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ.
ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಜನರು ಸಾವನ್ನಪ್ಪಿದರು, ಒಬ್ಬರೇ ಬದುಕುಳಿದಿದ್ದರು. ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರಾಟ ನಡೆಸುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು.
