ಹಾಸನ :
ಬಿಜೆಪಿ ಸೇರ್ಪಡೆಯಾದಾಗಿನಿಂದ ಯಾವುದೇ ಪ್ರಚಾರ ಸಭೆಯಲ್ಲಿ ಕಾಣಿಸಿಕೊಳ್ಳದ ಎಸ್.ಎಂ. ಕೃಷ್ಣ ಇದೇ ಮೊದಲ ಬಾರಿ ಹಾಸನದಲ್ಲಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ನಡೆಸಲು ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಮುಂದಾಗಿದ್ದಾರೆ.

ಒಕ್ಕಲಿಗ ಸಮುದಾಯದ ಪ್ರಬಲ ಮುಖಂಡರಾಗಿರುವ ಕೃಷ್ಣ ಆಗಮನದಿಂದ ಕ್ಷೇತ್ರದಲ್ಲಿ ಗೌಡ ಮತಗಳ ಮೇಲೆ ಪ್ರಭಾವ ಬೀರಲಿದೆ. ಈ ಮೂಲಕ ಒಕ್ಕಲಿಗ ಸಮುದಾಯದ ಜೆಡಿಎಸ್ ಮತ ಸೆಳೆಯಲು ಸಾಧ್ಯ ಎಂಬ ಲೆಕ್ಕಾಚಾರವನ್ನು ಬಿಜೆಪಿ ನಡೆಸಿದೆ. ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ.
ಎಸ್ ಎಂ ಕೃಷ್ಣ ಜೊತೆಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್ ಕೂಡ ಇಂದು ಪ್ರಚಾರ ನಡೆಸಲಿದ್ದಾರೆ. ಹಾಸನಕ್ಕೆ ಬಂದಿಳಿದ ಅವರ ಈ ಬಾರಿ ದೇವೇಗೌಡರ ಕ್ಷೇತ್ರ ಅಚ್ಚರಿ ಫಲಿತಾಂಶಕ್ಕೆ ಹಾಗೂ ಮೋದಿ ಮತ್ತೆ ಪ್ರಧಾನಿ ಆಗುವ ವಾತಾವರಣವಿದೆ. ಇದೇ ಉತ್ಸಾಹ ಬಿಜೆಪಿ ಕಾರ್ಯಕರ್ತರಲ್ಲಿ ಕಂಡುಬರುತ್ತಿದೆ ಎಂದರು.








