ಮದ್ದೂರು ಪೋಲೀಸರ ಕಾರ್ಯಾಚರಣೆ : ಹುಲಿ ಉಗುರುಗಳನ್ನು ಮಾರಾಟ ಮಾಡುತ್ತಿದ್ದ 3 ಆರೋಪಿಗಳ ಬಂಧನ

ಮಂಡ್ಯ :

ಹುಲಿ ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮದ್ದೂರು ಪಟ್ಟಣ ಠಾಣೆ ಪೊಲೀಸರು ಬಂಧಿಸಿ, 15 ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ.

ಎಚ್.ಡಿ. ಕೋಟೆಯ ಭೀಮನಹಳ್ಳಿಯ ಶರತ್ ಕುಮಾರ್ (25), ಬಸವರಾಜು (49), ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಫೈಯಾದ್ (31) ಬಂಧಿತರು ಎನ್ನಲಾಗಿದ್ದು, ಹುಲಿ ಉಗುರು ಮಾರಾಟಕ್ಕೆ ಕೊಟ್ಟಿದ್ದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಸಿಗಲಿದೆ ಗೆಲುವು ? ಆರ್ ಸಿಬಿ – ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

ನಾಗರ ಹೊಳೆ ಅರಣ್ಯ ಪ್ರದೇಶದಿಂದ ಹುಲಿ ಉಗುರುಗಳನ್ನು ತಂದು ರೈಲಿನ ಮೂಲಕ ಮದ್ದೂರು ರೈಲು ನಿಲ್ದಾಣದಲ್ಲಿ ಮೂವರು ಇಳಿದಿದ್ದಾರೆ. ನಂತರ ಆರೋಪಿಗಳು ಪರಿಚಯಸ್ಥ ವರ್ತಕರನ್ನು ಮದ್ದೂರು ಪಟ್ಟಣಕ್ಕೆ ಕರೆಸಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ‌ದ ಮದ್ದೂರು ಪೊಲೀಸರು ರೈಲು ನಿಲ್ದಾಣದ ಬಳಿಯೇ ಮೂವರನ್ನು ಬಂಧಿಸಿ ಅವರ ಬಳಿ ಇದ್ದ 15 ಹುಲಿ ಉಗುರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಂಧಿತರು ಇಂಥ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

 ‘ಮೈ ಮರೆಯದಿರಿ ಹುಷಾರ್’ : ‘ಕೋವಿಡ್’ ಹೆಚ್ಚುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ 

ಇನ್ನು ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರೀತ್ಯಾ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣವನ್ನು ಭೇದಿಸುವಲ್ಲಿ ಶ್ರಮಿಸಿರುವ ಮದ್ದೂರು ಪೋಲೀಸ್ ತಂಡಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್ ಯತೀಶ್ ಶ್ಲಾಘಿಸಿ ಪ್ರಶಂಸಿಸಿದ್ದಾರೆ.

– ವರದಿ : ಗಿರೀಶ್ ರಾಜ್ ಮಂಡ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap