ಮಧುಗಿರಿ ಶಾಸಕರಿಂದ ಧನ ಸಹಾಯ : ಸುಳ್ಳು!

 ಮಧುಗಿರಿ : 

      ಶಾಸಕ ಎಂ.ವಿ.ವೀರಭದ್ರಯ್ಯ ನನ್ನನ್ನು ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರೆ ಹೊರತು ಯಾವುದೇ  ರೀತಿಯ ಹಣ ಸಹಾಯ ಮಾಡಿಲ್ಲ. ಅವರಿಂದ ನಾನು ಏನನ್ನೂ ಬಯಸಿಲ್ಲ. ಆದರೆ ತಾಲ್ಲೂಕಿನಲ್ಲಿ ಕೆಲವು ಜೆಡಿಎಸ್ ಮುಖಂಡರುಗಳು ಹಣ ನೀಡಿದ್ದಾರೆಂದು ಅಪಪ್ರಚಾರ ಮಾಡುತ್ತಿರುವುದು ನನಗೆ ನೋವುಂಟಾಗಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಣ್ಣ ತಿಳಿಸಿದ್ದಾರೆ.

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದು, ದೂರವಾಣಿ ಮೂಲಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಎಂ.ವಿ.ವೀರಭದ್ರಯ್ಯ ಐವತ್ತು ಸಾವಿರ ನೀಡಿದ್ದಾರೆ ಎಂದು ಒಬ್ಬರು ಹೇಳಿದರೆ, 5 ಲಕ್ಷ ನೀಡಿದ್ದಾರೆಂದು ಹೇಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಾನಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲ ಜೆಡಿಎಸ್ ಮುಖಂಡರ ಮಾತುಗಳಿಂದ ನನಗೆ ತುಂಬಾ ನೋವಾಗಿದೆ. ಶಸ್ತ್ರ್ರಚಿಕಿತ್ಸೆಗೂ ಮುನ್ನವೆ ಜನರಿಗೆ ಸತ್ಯ ಹೇಳುವ ಸಲುವಾಗಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.

      ಮಾಜಿ ಶಾಸಕ ಕೆ ಎನ್ ರಾಜಣ್ಣನವರು ನಾನು ಆಸ್ಪತ್ರೆಗೆ ದಾಖಲಾದ ಮೊದಲ ದಿನದಿಂದ ಇಲ್ಲಿಯವರೆಗೂ ನಿರಂತರ ಸಂಪರ್ಕದಲ್ಲಿದ್ದು, ನನ್ನ ರೋಗವನ್ನು ಗುಣಪಡಿಸುವ ಸಲುವಾಗಿ ಸಂಬಂಧಪಟ್ಟ ತಜ್ಞ ವೈದ್ಯರ ಸಲಹೆಗಳನ್ನು ಪಡೆದು, ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರೊಂದಿಗೂ ಸಹ ಮಾತನಾಡಿ, ತುಮಕೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಕೆ.ಎನ್.ರಾಜಣ್ಣ ನವರೊಂದಿಗೆ ಅವರ ಪುತ್ರ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಕೆಎನ್‍ಆರ್ ಅಭಿಮಾನಿಗಳು, ಆರ್.ಆರ್. ಅಭಿಮಾನಿಗಳು ನಿತ್ಯವೂ ನನ್ನ ಆರೋಗ್ಯವನ್ನು ವಿಚಾರಿಸುತ್ತಿರುವುದಕ್ಕೆ ಚಿರ ಋಣಿಯಾಗಿದ್ದೇನೆ ಹಾಗೂ ಬೇಡತ್ತೂರಿನ ಪತ್ರಕರ್ತ ಶಿವಣ್ಣರವರಿಗೂ ನನ್ನ ಸ್ನೇಹಿತರು ಅವರ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ ಎಂದರು.

      ಮಾಜಿ ಶಾಸಕ ಕೆ.ಎನ್.ರಾಜಣ್ಣನವರು ಆರ್ಥಿಕ ಸಹಾಯ ಮಾಡುತ್ತಿರುವುದರ ಜೊತೆಗೆ ಮನೋಧೈರ್ಯವನ್ನು ತುಂಬುತ್ತಿದ್ದಾರೆ. ನನಗಿರುವ ರೋಗ ಗುಣಮುಖವಾಗಲು ಇನ್ನೇನು ಬೇಕು? ಆದರೆ ಇಂತಹ ಸಂದರ್ಭದಲ್ಲಿ ಎಂ.ವಿ.ವೀರಭದ್ರಯ್ಯನವರ ಭೇಟಿಯನ್ನು ರಾಜಕೀಯ ಸಂಚಲನ ಮತ್ತು ಮಾನವೀಯತೆ ಮೆರೆದಿದ್ದಾರೆ ಎಂದರೆ, ಅದು ತಪ್ಪು ಸಂದೇಶ ರವಾನೆಯಾದಂತೆ ಆಗುತ್ತದೆ ಎಂದರು.
ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಇಂಥ ಸಂದರ್ಭದಲ್ಲಿ ರಾಜಕೀಯಕ್ಕೂ ಮಾನವೀಯತೆಗೂ ಕೆಲ ಜೆಡಿಎಸ್ ಮುಖಂಡರು ತಳಕು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಪರಿಸ್ಥಿತಿಯಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವುದು ಸರಿ ಕಾಣುತ್ತಿಲ್ಲ ಎಂದು ಮನನೊಂದು ನುಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap