ಮಧುಗಿರಿ :

ಕಾಲ ಬದಲಾಗಿದ್ದು ಕ್ಯಾಮರಾ ಜಾಗದಲ್ಲಿ ಮೊಬೈಲ್ ಬಂದಿದೆ. ಸ್ಟುಡಿಯೋ ಮಾಲೀಕರು ವ್ಯಾಪಾರ ಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ತಿಳಿಸಿದರು.
ಕಸಬಾ ಸಿದ್ದಾಪುರದ ಶ್ರಿ ಕುಡೂತಿ ವೇಣುಗೋಪಾಲಾ ಸ್ವಾಮಿ ದೇವಾಲಲಯದ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ ವತಿಯಿಂದ ತಾಲೂಕಿನ ಛಾಯಾಗ್ರಾಹಕರಿಗೆ ಉಚಿತ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದಲ್ಲಿ ಸ್ಥಾನಮಾನವಿದ್ದು, ಎಲ್ಲರನ್ನೂ ಗೌರವದಿಂದ ಕಾಣಬೇಕು. ಇಂತಹ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಡಾ. ದೇವಿಪ್ರಸಾದ್ ಶೆಟ್ಟಿ ಸಮಿತಿ ವರದಿಯಂತೆ ಕರೋನಾ 3ನೇ ಅಲೆಯಿಂದಾಗಿ ರಾಜ್ಯದ 4.50 ಲಕ್ಷ ಮಕ್ಕಳು ಅನಾರೋಗಕ್ಕೆ ತುತ್ತಾಗಲಿದ್ದಾರೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿನ ಚಿಕ್ಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸೇವಾಶ್ರಮದ ವತಿಯಿಂದ ಪೌಷ್ಟಿಕಾಂಶದ ಮಿಶ್ರಣವನ್ನು ಮುಂದಿನ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪತ್ರಿಕಾ ರಂಗ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡುತ್ತಿದ್ದು, ಪತ್ರಕರ್ತರ ವೃತ್ತಿ ಪವಿತ್ರವಾದುದು. ಬರವಣಿಗೆ ತೀಕ್ಷ್ಣವಾಗಿರಬೇಕು, ಭಾಷೆ, ಪದಗಳ ಬಳಕೆಯಲ್ಲಿ ಹಿಡಿತವಿರಬೇಕು ಎಂದರು.
ಡಿವೈಎಸ್ ಪಿ ರಾಮಕೃಷ್ಣಯ್ಯ ಮಾತನಾಡಿ, ಕೆಲ ಪತ್ರಕರ್ತರು ತಾಲ್ಲೂಕು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪತ್ರಕರ್ತರು ಅಧಿಕಾರಿಗಳನ್ನು ಒಳ್ಳೆಯ ದಾರಿಗೆ ತರುವ ಮೂಲಕ ಬದಲಾವಣೆಗೆ ಅವಕಾಶ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಇ.ಒ. ಡಿ.ದೊಡ್ಡಸಿದ್ದಪ್ಪ, ಪುರಸಭಾ ಸದಸ್ಯ ಕೆ.ನಾರಾಯಣ್, ತಾಲ್ಲೂಕು ಛಾಯಗ್ರಾಹಕರ ಸಂಘದ ಅಧ್ಯಕ್ಷ ಪಾಂಡುರಂಗಯ್ಯ, ಕಾರ್ಯದರ್ಶಿ ಆನಂದ್, ಕಲೀಂ, ಕಂಠಿಮಂಜು, ಬದ್ರಿ, ನವೀನ್, ಗೋವಿಂದ್, ಪ್ರದೀಪ್, ರಾಜುನಾಯ್ಕ್, ಟಿ.ಪ್ರಸನ್ನಕುಮಾರ್, ಮುದ್ದೇನ ಹಳ್ಳಿಯ ಸತ್ಯಸಾಯಿ ಸೇವಾ ಟ್ರಸ್ಟ್‍ನ ಪಿ.ಎ.ರಮೇಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







