ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ರೋಟರಿಯಿಂದ ಉಚಿತ ಮಾಸ್ಕ್

 ಮಧುಗಿರಿ : 

      ಶೈಕ್ಷಣಿಕ ಜಿಲ್ಲೆಯಲ್ಲಿ 81 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿರುವ 2248 ಸಿಬ್ಬಂದಿ ಪೈಕಿ, 1905 ಮಂದಿ ಪ್ರಥಮ ಲಸಿಕೆ, 710 ಸಿಬ್ಬಂದಿ ಎರಡನೆ ಲಸಿಕೆಗಳನ್ನು ಪಡೆದಿದ್ದು, ಕೋವಿಡ್ ಸೋಂಕಿತ 5 ಸಿಬ್ಬಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲವೆಂದು ಡಿಡಿಪಿಐ ಎಂ. ರೇವಣಸಿದ್ದಪ್ಪ ತಿಳಿಸಿದರು.

      ಅವರು ಪಟ್ಟಣದ ಚೇತನ ಆಂಗ್ಲ ಶಾಲೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಧುಗಿರಿ ಶೈಕ್ಷಣಿಕ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಉಚಿತ ಮಾಸ್ಕ್ ಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಶೈಕ್ಷಣಿಕ ಜಿಲ್ಲೆ 263 ಪ್ರೌಢಶಾಲೆಗಳಲ್ಲಿ 12,840 ಪರೀಕ್ಷಾರ್ಥಿ ಗಳಿದ್ದಾರೆ. ಪರೀಕ್ಷಾರ್ಥಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಉಚಿತವಾಗಿ ಮಾಸ್ಕ್‍ಗಳನ್ನು ನೀಡಿದ್ದಕ್ಕೆ ರೋಟರಿ ಸಂಸ್ಥೆಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಮಧುಗಿರಿ ರೋಟರಿ ಸಂಸ್ಥೆಯ ಅಧ್ಯಕ್ಷ ಜಿ. ಜಯರಾಮಯ್ಯ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಸಭೆಯಲ್ಲಿ ಶೈಕ್ಷಣಿಕ ಜಿಲ್ಲೆಯ ಸುಮಾರು 9 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್‍ಗಳನ್ನು ರೋಟರಿ ಸಂಸ್ಥೆಯಿಂದ ವಿತರಿಸಲಾಗಿದೆ ಎಂದರು.

ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿದ್ದೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಧುಗಿರಿಯ ನಂಜುಂಡಯ್ಯ, ಪಾವಗಡದ ಅಶ್ವತ್ಥನಾರಾಯಣ, ಕೊರಟಗೆರೆಯ ಸುಧಾಕರ್, ಶಿರಾದ ಶಂಕರಪ್ಪ, ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರೆಸ್ ಕರಿಯಣ್ಣ, ಖಜಾಂಚಿ ಎಂ. ವೆಂಕಟರಾಮು, ರೋಟರಿ ಮಾಜಿ ಅಧ್ಯಕ್ಷ ಶಿವಲಿಂಗಪ್ಪ, ಸಿದ್ದರಬೆಟ್ಟ ರೋಟರಿ ಸಂಸ್ಥೆಯ ಎಚ್.ಎನ್.ಶಿವಕುಮಾರ್, ರಾಮಯ್ಯ, ಸಿದ್ದಬಸಪ್ಪ, ಗಂಗಮ್ಮ, ದೊಡ್ಡೆಗೌಡ, ಶಿಕ್ಷಣ ಸಂಯೋಜಕ ಹೇಮಲತಾ ಹಾಜರಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap