ಬಾಲಕರ ವಸತಿ ನಿಲಯದ ತನಿಖೆಗೆ ಬಂದ ಕರಡಿಗಳು..!

ಮಿಡಿಗೇಶಿ :

      ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಗ್ರಾಮದ ಹೆದ್ದಾರಿಯಲ್ಲಿರುವ ಬಸ್ ನಿಲ್ದಾಣದ ಬಳಿಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜು.14 ರ ರಾತ್ರಿ 9-30 ಗಂಟೆಯಲ್ಲಿ ಜಿನುಗುವ ಮಳೆಯಲ್ಲಿಯೆ ಎರಡು ಕರಡಿಗಳು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆಯೆ? ಕಾವಲುಗಾರ ಎಚ್ಚರದಿಂದಿದ್ದಾರೆಯೆ ಎಂದು ತನಿಖೆಗೆ ಬಂದಿದ್ದವು..!

      ಒಂದು ಕರಡಿ ವಸತಿ ನಿಲಯದ ಒಳಗೆ ಹೋಗಲು ಗೇಟ್ ಹತ್ತುತ್ತ್ತಿದ್ದರೆ, ಮತ್ತೊಂದು ಕರಡಿ ಒಳ ಹೋಗಲು ತಡಕಾಡುತ್ತಿರುವ ಚಿತ್ರವು ಸಾರ್ವಜನಿಕ ವಲಯದಲ್ಲಿ ವೈರಲ್ ಆಗಿದೆ. ಇದರಿಂದ ಜನ ಸಾಮಾನ್ಯರು ಭಯ ಭೀತರಾಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯವರು ಕರಡಿಗಳನ್ನು ಹಿಡಿದು ಕರಡಿಧಾಮಗಳಿಗೆ ಸಾಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅದೃಷ್ಟವಶಾತ್ ಕೋವಿಡ್-19ರ ಪ್ರಯುಕ್ತ ವಿದ್ಯಾರ್ಥಿಗಳು ಯಾರೂ ಇರಲಿಲ್ಲ. ಇಲ್ಲಿನ ಕಾವಲುಗಾರನೂ ಸಹ ಇರಲಿಲ್ಲವಾದ್ದರಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂಬುದೇ ಸಮಾಧಾನ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap