ಮಧುಗಿರಿ :
2021ರ ಆಗಸ್ಟ್ 01 ರಿಂದ 10ರ ಒಳಗಾಗಿ ಪಡಿತರ ಚೀಟಿ ಪಡೆದಿರುವ ಕುಟುಂಬದ ಎಲ್ಲಾ ಸದಸ್ಯರು ಬಯೋ ಮೆಟ್ರಿಕ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಂದು ತಹಶೀಲ್ದಾರ್ ವೈ.ರವಿ ತಿಳಿಸಿದರು.
ಪಟ್ಟಣದಲ್ಲಿರುವ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪಡಿತರಕ್ಕೆ ಬಯೋ ಮೆಟ್ರಿಕ್ ನೀಡುವ ಬಗ್ಗೆ ತಾಲೂಕಿನಾದ್ಯಂತ ಆಟೋ ಮೂಲಕ ಪ್ರಚಾರ ಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂತ್ಯೋದಯ ಮತ್ತು ಆದ್ಯತಾ ಕುಟುಂಬ, (ಬಿಪಿಎಲ್) ಹಾಗೂ ಆದ್ಯೇತರ ಎಪಿಎಲ್ ಪಡಿತರ ಚೀಟಿಯಲ್ಲಿನ ಸದಸ್ಯರು ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ 72,500 ಪಡಿತರ ಚೀಟಿಗಳಿದ್ದು, 6,985 ಅಂತ್ಯೋದಯ, 66,420 ಬಿಪಿಎಲ್ ಕಾರ್ಡುದಾರರಿದ್ದು, ಒಟ್ಟು 2.36 ಲಕ್ಷ ಸದಸ್ಯರಿದ್ದಾರೆ. ಇಲ್ಲಿಯವರೆವಿಗೂ ತಾಲ್ಲೂಕಿನಲ್ಲಿ ಶೇ 65ರಷ್ಟು ಮಾತ್ರ ಪಡಿತರದಾರರು ಬಯೋಮೆಟ್ರಿಕ್ ಮಾಡಿಸಿಕೊಂಡಿದ್ದಾರೆ. ಇನ್ನುಳಿದವರು ಇ-ಕೆವೈಸಿ ಅನೂಕೂಲವಾಗುವಂತೆ ಬಯೋ ಮೆಟ್ರಿಕ್ ನೀಡಬೇಕು. ನೀಡದಿರುವ ಸದಸ್ಯರಿಗೆ ಇದು ಕೊನೆಯ ಅವಕಾಶವಾಗಿದ್ದು ಸರಕಾರದ ನಿರ್ದೇಶನದಂತೆ ಬಯೋ ಮೆಟ್ರಿಕ್ ನೀಡದಿರುವ ಸದಸ್ಯರ ಪಡಿತರವನ್ನು 2021ರ ಸೆಪ್ಟೆಂಬರ್ ಮಾಹೆಯಿಂದ ಸ್ಥಗಿತಗೊಳಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಶಿರಸ್ತೇದಾರ್ ಗಣೇಶ್, ಸಿಡಿಪಿಒ ಅನಿತಾ, ಆಹಾರ ನಿರೀಕ್ಷಕರಾದ ಹರೀಶ್‍ಕುಮಾರ್, ನಸ್ರುದ್ದೀನ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ