ಮಧುಗಿರಿ :
ಕ್ಷೇತ್ರದಲ್ಲಿ ಅಂತರ್ಜಲ ವೃದ್ದಿಗೆ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಅವರು ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದ ಬಳಿ ಸುವರ್ಣಮುಖಿ ನದಿಯ ಸಂಪರ್ಕ ಹಳ್ಳಗಳಿಗೆ ಒಟ್ಟು 2 ಕೋಟಿ 90 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂಗಳ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆಪನಹಳ್ಳಿ ಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಾಣದಿಂದ ಅಂತರ್ಜಲ ವೃದ್ದಿಯಾಗಿ ಕೊಳವೆ ಬಾವಿಗಳಲ್ಲಿ ನೀರು ಸಮೃದ್ಧಿಯಾಗಿ ದೊರೆಯುತ್ತಿದೆ. ಇವು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳಾಗಿ ದ್ದು, ಮುಂದಿನ ದಿನಗಳಲ್ಲಿ ಪರ್ತಿಹಳ್ಳಿ ಬಳಿ 1 ಕೋಟಿ ರೂ. ವೆಚ್ಚದ ಹಾಗೂ ತೆರೆಯೂರು ಬಳಿ 2 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂಗಳು ನಿರ್ಮಾಣ ವಾಗಲಿದೆ ಎಂದ ಅವರು, ಇದಕ್ಕೆ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿರವರ ಸಹಕಾರ ಕೂಡ ಇದೆ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ರಂಗನಾಥ್, ಎಇಇ ಮಂಜು ಕಿರಣ್ ಯಾದವ್, ಪಿಡಿಓ ಅಲ್ಮಾಸ್, ಗುತ್ತಿಗೆದಾರ ರಾಮಚಂದ್ರರೆಡ್ಡಿ, ಎಪಿಎಂಸಿ ನಿರ್ದೇಶಕರಾದ ಕುಮಾರ್, ಬಸವರಾಜು, ಮುಖಂಡರಾದ ಸಿಡದರಗಲ್ಲು ಶ್ರೀನಿವಾಸ್, ರಂಗನಾಥ, ವಿಶ್ವನಾಥ್, ದಿವಾಕರ ರೆಡ್ಡಿ, ಬೋರ್‍ವೆಲ್ ಕುಮಾರ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
