ಮಧುಗಿರಿ :
ವಿದ್ಯಾರ್ಥಿಗಳಿಗೆ ಶಿಕ್ಷಕರುಗಳೆ ಎಂದಿಗೂ ರೋಲ್‍ಮಾಡೆಲ್ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಅವರು ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 134ನೇ ಜಯಂತಿ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರುಗಳಿಗೆ ವಿಶೇಷ ಸ್ಥಾನ-ಮಾನಗಳಿದ್ದು, ಅವರುಗಳ ಮಾತುಗಳನ್ನು ಜನರ ಜತೆಗೆ ವಿದ್ಯಾರ್ಥಿಗಳು ಕೇಳುತ್ತಾರೆ. ಆದ್ದರಿಂದ ಅವರು ರೋಲ್ ಮಾಡೆಲ್‍ಗಳಾಗಿ ಸುಭದ್ರ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಕರೋನಾ ವೈರಾಣುವಿನಿಂದಾಗಿ ಜನತೆ ಹೈರಾಣಾಗಿದ್ದು, ಮಧುಗಿರಿ ಉಪ ವಿಭಾಗದ ತಾಲ್ಲೂಕುಗಳಲ್ಲಿ ಯಾವುದೇ ಕೈಗಾರಿಕೆ, ಗಣಿಗಾರಿಕೆ, ನೀರಾವರಿ ಸೌಲಭ್ಯವಿಲ್ಲದೆ ಶಿಕ್ಷಣವನ್ನೆ ನಂಬಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಆನ್‍ಲೈನ್ ಶಿಕ್ಷಣ ಸಮಾಧಾನ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವಾತಾವರಣದಲ್ಲಿ ತಂತ್ರಜ್ಞಾನ ಮುಂದುವರೆದಿದೆ. ಬೋಧನಾ ವಿಧಾನ, ಪಠ್ಯಪುಸ್ತಕಗಳ ಬದಲಾವಣೆಯಿಂದಾಗಿ ಶಿಕ್ಷಕರು ಕೌಶಲ್ಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಾಗಿದೆ ಎಂದರು.
ಪ್ರಶಸ್ತಿ ಪಡೆದ ಶಿಕ್ಷಕ/ಶಿಕ್ಷಕಿಯರ ವಿವರ :
ಕಿರಿಯ ಪ್ರಾಥಮಿಕ ಶಾಲಾ ವಿಭಾಗ:
ಕೊರಟಗೆರೆ ತಾಲ್ಲೂಕಿನ ಸಿ.ಎಸ್.ಪಾಳ್ಯ ಗ್ರಾಮದ ಗೀತಾ.ಟಿ, ಮಧುಗಿರಿ ದಾದಗೊಂಡನಹಳ್ಳಿ ಎಸ್.ನಾರಾಯಣಪ್ಪ, ಪಾವಗಡ ಮದ್ದಿಬಂಡೆಯ ಸುಧಾಮಣಿ. ಡಿ.ಬಿ, ಸಿರಾ ಹಕ್ಕಿಪಿಕ್ಕಿ ಕಾಲನಿಯ ಶಿಕ್ಷಕಿ ನಾಗಲಕ್ಷ್ಮಿ ಎನ್.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ :
ಕೊರಟಗೆರೆ ತಾಲ್ಲೂಕಿನ ಥರಟಿ ಗ್ರಾಮದ ಶಿಕ್ಷಕ ಲಿಂಗಪ್ಪ ಕೆ., ಮಧುಗಿರಿ ಕೊಡಿಗೇನಹಳ್ಳಿಯ ಎನ್.ಯಶೋಧಮ್ಮ, ಪಾವಗಡ ಬಿ. ದೊಡ್ಡಹಟ್ಟಿಯ ಗೋಪಾಲ ಕೆ.ಎಂ, ಸಿರಾ ಬಡಮಾರನಹಳ್ಳಿಯ ಶಿಕ್ಷಕ ಕೃಷ್ಣಪ್ಪ.ಎನ್.
ಪ್ರೌಢಶಾಲಾ ವಿಭಾಗ :
ಕೊರಟಗೆರೆ ತಾಲ್ಲೂಕಿನ ಯಲಚಿಗೆರೆಯ ಶಿಕ್ಷಕ ಎಚ್.ಆರ್ ಹನುಮಂತರಾಯಪ್ಪ, ಮಧುಗಿರಿ ಕೊಟಗಾರಲಹಳ್ಳಿಯ ರಾಮಚಂದ್ರಯ್ಯ ಕೆ.ಆರ್, ಪಾವಗಡ ಟೌನ್ ಶಿವರಾಮಯ್ಯ, ಸಿರಾ ಗೊಲ್ಲಹಳ್ಳಿಯ ಗ್ರೇಡ್ -1 ದೆಹಿಕ ಶಿಕ್ಷಕ ಕೆ.ಬಿ ಸುರೇಶ್ ಇವರುಗಳಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಣ ಪ್ರಶಸ್ತಿಗಳನ್ನು ನೀಡಿ, ಸನ್ಮಾನಿಸಿ, ಗೌರವಿಸಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ತಿಮ್ಮರಾಜು, ಸದಸ್ಯ ಎಂ.ಎಲ್. ಗಂಗರಾಜು, ಸರ್ಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎಚ್.ವೆಂಕಟೇಶಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ವೆಂಕಟರಂಗಾರೆಡ್ಡಿ, ತಾಲ್ಲೂಕು ಪಂಚಾಯಿತಿ ಇಒ ದೊಡ್ಡಸಿದ್ದಯ್ಯ, ಬಿಇಒ. ನಂಜುಂಡಯ್ಯ, ಡಯಟ್ ಪ್ರಾಂಶುಪಾಲ ವ್ಯೆ.ಎನ್.ರಾಮಕೃಷ್ಣಯ್ಯ, ಬಿಆರ್‍ಸಿಗಳಾದ ಮಂಜುನಾಥ್ ಸ್ವಾಮಿ, ಇಸಿಒ ಪ್ರಾಣೇಶ್, ಚಿತ್ತಯ್ಯ, ಆನಂದ್ ಕುಮಾರ್, ಸಿದ್ದೇಶ್ವರ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎನ್.ನಟರಾಜು, ಪರಿಶಿಷ್ಟ ಜಾತಿ ಮತ್ತು ಪಂಗಡ ಶಿಕ್ಷಕರ ಸಂಘದ ಫಣೀಂದ್ರನಾಥ್, ಶಿಕ್ಷಕರಾದ ಚೆನ್ನಬಸಪ್ಪ, ರಂಗಧಾಮಯ್ಯ ಹಾಗೂ ಮತ್ತಿತರರು ಇದ್ದರು.
ಮಧುಗಿರಿಯಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರವರ 134ನೇ ಜಯಂತಿ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶಾಸಕ ಎಂ.ವಿ.ವೀರಭದ್ರಯ್ಯ ಉದ್ಘಾಟಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
