ಮಧುಗಿರಿ :
ಪರಿಚಿತ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮಗನಿಗೆ ಹೆಣ್ಣು ತೋರಿಸುವುದಾಗಿ ತನ್ನ ಮನೆಯೊಳಗೆ ಕರೆದು ಕೊಂಡು ಹೋಗಿ ಆಕೆಯ ಬಳಿಯಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ಬುಧುವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಮಾರುತಿ ನಗರದ ವಾಸಿ ನಾಗಮ್ಮ (62) ಎನ್ನುವವರಿಗೆ ಪರಿಚಿತ ಹಾಗೂ ಸ್ಥಳೀಯ ವಾಸಿ ನಂಜಪ್ಪ ( 70) ಎನ್ನುವವನು ನಾಗಮ್ಮನ ಮನೆಯೊಳಗೆ ಕರೆದು ಕೊಂಡು ಹೋಗಿ ನಮ್ಮ ಮನೆಯ ವಾಸ್ತುವನ್ನು ಒಮ್ಮೆ ಪರೀಶೀಲಿಸಿ ಎಂದು ಹೇಳಿ ಮಹಿಳೆಯು ಸ್ನಾನ ಗೃಹದ ಬಳಿ ಹೋದಾಗ ಹಿಂಬದಿಯಿಂದ ಆಕೆಯ ಬಳಿಯಿದ್ದ ಸುಮಾರು 60 ಗ್ರಾಂ ನ ಚಿನ್ನದ ಸರವನ್ನು ಕುತ್ತಿಗೆ ಯಿಂದ ಕಸಿದು ನಂತರ ಆಕೆಗೆ ನೇಣು ಬಿಗಿಯಲು ಯತ್ನಿಸುವಾಗ .
ಈಕೆಯ ಚಿರಾಟವನ್ನು ಕೇಳಿಸಿ ಕೊಂಡು ನಂಜಪ್ಪನ ಮನೆಯ ಅಕ್ಕ – ಪಕ್ಕಾದವರು ನಾಗಮ್ಮನ ಕುತ್ತಿಗೆ ಬಿಗಿಯಲು ಹಾಕಿದ್ದ ಹಗ್ಗವನ್ನು ತೆಗೆದು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಹಿಳೆಯನ್ನು ಚಿಕಿತ್ಸೆ ಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಮಹಿಳೆಯು ಪ್ರಾಣಾಪಯದಿಂದ ಪರಾರಾಗಿದ್ದಾಳೆ. ಆರೋಪಿ ನಂಜಪ್ಪ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.
