ಮಧುಗಿರಿ :
ತಾಲ್ಲೂಕಿನಲ್ಲಿ ಒಟ್ಟು 11 ಗ್ರಾಪಂಗಳಿಂದ 15 ಅಭ್ಯರ್ಥಿಗಳಲ್ಲಿ 10 ಮಹಿಳಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ ಈಗಾಗಲೇ ಗ್ರಾಪಂಗಳಲ್ಲಿ ಭರ್ಜರಿ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ. ಇವರು ಕಾಂಗ್ರೆಸ್ ಪಕ್ಷ ಬೆಂಬಲಿತರಾಗಿದ್ದು, ಉಳಿದ 600 ಕ್ಷೇತ್ರಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆ ಅವಧಿಯು ಪೂರ್ಣಗೊಂಡಿದ್ದು, ತಾಲ್ಲೂಕಿನ 6 ಹೋಬಳಿಗಳು ಸೇರಿದಂತೆ 39 ಗ್ರಾಪಂಗಳಿಂದ ಒಟ್ಟು 600 ಕ್ಷೇತ್ರಗಳಲ್ಲಿನ 324 ಮತಗಟ್ಟೆಗಳ ಮೂಲಕ ಮತದಾನವು ಡಿ.27ರಂದು ನಡೆಯಲಿದೆ. ಮತದಾನದ ಕಣದಲ್ಲಿ 1,794 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆಯಾಗಿ ತಮ್ಮ ಅದೃಷ್ಟ ಪರೀಕ್ಷೆಗಿಳಿದರೆ, 437 ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ಸು ಪಡೆದುಕೊಂಡು ಚುನಾವಣಾ ಕಣದಿಂದ ದೂರ ಸರಿದಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು:
ಕಸಬಾ:
ಮರುವೇಕೆರೆ ಗ್ರಾಪಂ ವ್ಯಾಪ್ತಿಯ ಸೋಂಪುರ ಕ್ಷೇತ್ರದ ಸಾಮಾನ್ಯ ಕ್ಷೇತ್ರದಲ್ಲಿ ಭವ್ಯ ಎಸ್.ಸಿ, ಬಿಜಾವರ ಗ್ರಾಪಂನ ಗೋಪಾಲ್ ನಾಯಕ್ (ಪರಿಶಿಷ್ಟ ಜಾತಿ) ವೀರಣ್ಣನಹಳ್ಳಿ, ಮಂಜಮ್ಮ (ಸಾಮಾನ್ಯ ಮಹಿಳೆ) ವೀರಣ್ಣನಹಳ್ಳಿ ತಾಂಡ, ಡಿ.ವಿ.ಹಳ್ಳಿ ಗ್ರಾಪಂನ ರಾಧಮ್ಮ (ಹಿಂದುಳಿದ ವರ್ಗ ಅ ಮಹಿಳೆ) ರಂಗನಾಯಕನ ರೊಪ್ಪ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಿಡಿಗೇಶಿ ಹೋಬಳಿ: ಚಿನ್ನೇನಹಳ್ಳಿ ಗ್ರಾಪಂನ ನೀರಕಲ್ಲು ಕ್ಷೇತ್ರದಿಂದ ಸಿದ್ದಗಂಗಮ್ಮ (ಪರಿಶಿಷ್ಟ ಪಂಗಡ ಮಹಿಳೆ).
ಐಡಿಹಳ್ಳಿ ಹೋಬಳಿ:
ಬ್ರಹ್ಮ ಸಮುದ್ರ ಗ್ರಾಪಂನ ಯರಗುಂಟೆ-5 ಲಕ್ಷ್ಮನಾಯಕ್ (ಅನುಸೂಚಿತ ಜಾತಿ), ನಾಗಮ್ಮ (ಸಾಮಾನ್ಯ ಮಹಿಳೆ), ದೊಡ್ಡಯಲ್ಕೂರು ಗ್ರಾಪಂನ ತಿಪ್ಪಾಪುರ ಕ್ಷೇತ್ರದಿಂದ ಸಾಕಮ್ಮ (ಪರಿಶಿಷ್ಟ ಪಂಗಡ ಮಹಿಳೆ).
ಕೊಡಿಗೇನಹಳ್ಳಿ ಹೋಬಳಿ:
ಸಿಂಗನಹಳ್ಳಿ ಗ್ರಾಪಂನ ಮುತ್ತುರಾಯನಹಳ್ಳಿ ಕ್ಷೇತ್ರದಿಂದ ಸಂಜೀವಮ್ಮ(ಸಾಮಾನ್ಯ ಮಹಿಳೆ), ಅಣ್ಣೇನಹಳ್ಳಿ ಕ್ಷೇತ್ರದಿಂದ ಸತ್ಯನಾರಾಯಣ (ಸಾಮಾನ್ಯ).
ಪುರವರ ಹೋಬಳಿ:
ಬ್ಯಾಲ್ಯ ಗ್ರಾಪಂನ ಮುಳಬಾಗಿಲುಪಾಳ್ಯ ಕ್ಷೇತ್ರದಿಂದ ರಾಧಮ್ಮ (ಪರಿಶಿಷ್ಟ ಜಾತಿ ಮಹಿಳೆ), ಗೊಂದಿನಹಳ್ಳಿ ಗ್ರಾಪಂನ ಗೊಂದಿಹಳ್ಳಿ-3 ಕ್ಷೇತ್ರದಿಂದ ನಾಗಮ್ಮ (ಅನುಸೂಚಿತ ಜಾತಿ ಮಹಿಳೆ).
ದೊಡ್ಡೇರಿ ಹೋಬಳಿ:
ಬಡವನಹಳ್ಳಿ ಗ್ರಾಪಂನ ತಿಪ್ಪನಹಳ್ಳಿ ಕ್ಷೇತ್ರದಿಂದ ಟಿ.ಎಲ್.ಕಾಂತ
(ಹಿಂದುಳಿದ ವರ್ಗ ಆ), ಸಜ್ಜೇ ಹೊಸಹಳ್ಳಿ ಗ್ರಾಪಂನ ಬಸ್ಮಂಗಿ ಕಾವಲ್ ಕ್ಷೇತ್ರದಿಂದ ನಾಗಮಣಿ (ಸಾಮಾನ್ಯ ಮಹಿಳೆ), ಜಿ.ತಿಮ್ಮಾನಾಯಕ್ (ಅನುಸೂಚಿತ ಪಂಗಡ) ಶಿವನಗೆರೆ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅನುಸೂಚಿತ ಜಾತಿಯ ಸಾಮಾನ್ಯ 222 ಸಾಮಾನ್ಯ ಮಹಿಳೆಯ 262 ಅಭ್ಯರ್ಥಿಗಳಿಂದ ಒಟ್ಟು 484, ಅನೂಸೂಚಿತ ಪಂಗಡದ ಸಾಮಾನ್ಯ 64, ಸಾಮಾನ್ಯ ಮಹಿಳೆ 119 ಅಭ್ಯರ್ಥಿಗಳು ಒಟ್ಟು 183, ಹಿಂದುಳಿದ ವರ್ಗಗಳ ಸಾಮಾನ್ಯ 48 ಸಾಮಾನ್ಯ ಮಹಿಳೆ 105 ಅಭ್ಯರ್ಥಿಗಳು 153, ಹಿಂದುಳಿದ ಬಿ ವರ್ಗಗಳ ಸಾಮಾನ್ಯ 23 ಸಾಮಾನ್ಯ ಮಹಿಳೆ 5 ಅಭ್ಯರ್ಥಿಗಳು ಒಟ್ಟು 28, ಸಾಮಾನ್ಯ ಕ್ಷೇತ್ರದಿಂದ 583, ಸಾಮಾನ್ಯ ಮಹಿಳೆ 363 ಒಟ್ಟು 946 ಅಭ್ಯರ್ಥಿಗಳು ಚುನಾವಣೆ ಎದುರಿಸಲಿದ್ದಾರೆ.
ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳ ಪ್ರಚಾರ ಪತ್ರಗಳನ್ನು ಹಿಡಿದು ಅಭ್ಯರ್ಥಿಗಳು ಭರ್ಜರಿ ಪ್ರಚಾರವನ್ನು ಭಾನುವಾರದಿಂದ ಆರಂಭಿಸಿದ್ದಾರೆ. ಇತ್ತ ತಮ್ಮ ಗ್ರಾಮಗಳ ಅಭಿವೃದ್ಧಿ ಕಣ್ಣ ಮುಂದೆ ಇದ್ದರೆ, ಅಭ್ಯರ್ಥಿಗಳ ಭವಿಷ್ಯ ಮತದಾರರ ಕೈ ಬೆರಳಿನಲ್ಲಿದೆ. ಮತದಾರರು ಮತದಾನಕ್ಕಾಗಿ ಕಾಯುತ್ತಾ ಅಭ್ಯರ್ಥಿಗಳ ಸೋಲು-ಗೆಲುವಿನ ಹಣೆ ಬರಹ ಬರೆಯಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
