ಶಿಕ್ಷಕರಿಗೆ ಅಗ್ನಿ ಅವಘಡದ ಬಗ್ಗೆ ತರಬೇತಿ

 ಮಧುಗಿರಿ :

      ಅಗ್ನಿಶಾಮಕ ದಳದ ವತಿಯಿಂದ ತಾಲ್ಲೂಕಿನ ದೈಹಿಕ ಮತ್ತು ವೃತ್ತಿಪರ ಶಿಕ್ಷಕರಿಗೆ ಅಗ್ನಿ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅಣಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

     ಅಗ್ನಿಶಾಮಕ ದಳದ ಎಫ್‍ಟಿಓ ಅಣ್ಣಪ್ಪ ಗದಗಿ ಮಾತನಾಡಿ, ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ನಂದಿಸುವ ಅಣಕು ಪ್ರದರ್ಶನ ಮಾಡಲಾಗುತ್ತಿದ್ದು, ಈ ಅಣಕು ಪ್ರದರ್ಶನ ಮನರಂಜನೆಗಾಗಿ ಮಾಡುತ್ತಿಲ್ಲ. ಬದಲಾಗಿ ಬೆಂಕಿ ಅವಘಡಗಳು ಸಂಭವಿಸಿದಾಗ ಯಾರೂ ಸಹ ಧೃತಿಗೆಡದೆ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಬೇಕು. ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಸದುದ್ದೇಶದಿಂದ ಈ ಕಾರ್ಯ ಹಮ್ಮಿಕೊಂಡಿದ್ದು, ತುರ್ತು ಸಂದರ್ಭಗಳು ಎದುರಾದಲ್ಲಿ ನಮ್ಮ ಅಗ್ನಿಶಾಮಕ ಠಾಣೆಗೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದರು.

      ಈ ಸಿಬ್ಬಂದಿ ಮಂಜುನಾಥ, ಎಂ.ವಿ.ರಾಘವೇಂದ್ರ, ಎಚ್.ಪೃಥ್ವಿರಾಜ್, ಸತೀಶ್ ಕುಮಾರ್, ಆರ್.ವಿ.ಶಿವರಾಜ್ ಪಾಂಡೆ, ಅನಿಲ್ ದೊಡ್ಡಮನಿ, ಪಿ.ಮಂಜಣ್ಣ ಹಾಗೂ ಶಿಕ್ಷಕರುಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap