ಮಧುಗಿರಿ : ಮನೆಗೆ ನುಗ್ಗಿ 4 ಲಕ್ಷ ಮೌಲ್ಯದ ಹಣ, ಒಡವೆ ಕಳವು

ಮಧುಗಿರಿ :

      ತಾಲ್ಲೂಕಿನ ಮಿಡಿಗೇಶಿ ಹೋಬಳಿ ಬೇಡತ್ತೂರು ಬಳಿಯ ಎಸ್.ಅಪ್ಪೇನಹಳ್ಳಿ ಗ್ರಾಮದ ವೆಂಕಟರಮಣಪ್ಪ ಹಾಗೂ ವೆಂಕಟರಾಮಯ್ಯ ಅವರ ಮನೆಗಳ ಚಿಲಕ ಮುರಿದು ನುಗ್ಗಿದ ಕಳ್ಳರು ಹಣ, ಒಡವೆ ಕಳವು ಮಾಡಿ ಪರಾರಿಯಾಗಿರುವ ಪ್ರಕರಣ ನಡೆದಿದೆ.

     ಮಂಗಳವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಧ್ಯಾಹ್ನ 12ರಿಂದ 2.30ರ ಒಳಗೆ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ. ವೆಂಕಟರಾಮಯ್ಯರ ಮನೆಯ ಬೀರುವಿನಲ್ಲಿದ್ದ ಮೂರು ಜೊತೆ ಓಲೆಗಳು, 30 ಗ್ರಾಂ ತೂಕದ ಒಂದು ನೆಕ್ಲೆಸ್, ಮೂರು ಉಂಗುರಗಳು ಸೇರಿದಂತೆ ಒಟ್ಟು 750 ಗ್ರಾಂ ತೂಕದ ಒಡವೆ ಹಾಗೂ 25 ಸಾವಿರ ರೂ. ನಗದು ಸೇರಿ ಸುಮಾರು 4ಲಕ್ಷ ರೂ. ಮೌಲ್ಯದ ಕಳವಾಗಿದೆ.

     ಈ ಸಂಬಂಧ ವೆಂಕಟರಾಮಯ್ಯ ಮಿಡಿಗೇಶಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಪಿಐ ಸರ್ದಾರ್ ಎಂ.ಎಸ್, ಎಎಸ್‍ಐ ತಾರಾ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link