ಯೂಟ್ಯೂಬ್ ನೋಡಿ ಖೋಟಾ ನೋಟು ಪ್ರಿಂಟ್ ; ಆರೋಪಿಗಳ ಸೆರೆ!!

ಮಧುಗಿರಿ : 

      ಯೂ ಟ್ಯೂಬ್ ಚಾನಲ್ ನೋಡಿಕೊಂಡು ಖೋಟಾ ನೋಟು ಪ್ರಿಂಟ್ ಮಾಡಿ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿ 1ಲಕ್ಷ 27 ಸಾವಿರ ರೂ ಗಳ ಖೋಟಾ ನೋಟುಗಳನ್ನು ಹಾಗೂ ಮುದ್ರಣಕ್ಕೆ ಬಳಸುತ್ತಿದ್ದ ಒಂದು ಪ್ರಿಟಿಂಗ್ ಮೆಷಿನ್ ವಶಕ್ಕೆ ಪಡೆದುಕೊಂಡಿದ್ದಾರೆ.

      ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆ ಹೋಬಳಿ ವೈ.ಎನ್ ಹೊಸಕೋಟೆ ಟೌನ್ ನಲ್ಲಿ ಆರೋಪಿ ತನ್ನ ಮನೆಯ ಮೇಲಿರುವ ಕೊಠಡಿಯಲ್ಲಿ ದಸ್ತಾವೇಜು ಮತ್ತು ಉಪಕರಣಗಳಿಂದ ಖೋಟಾ ನೋಟುಗಳನ್ನು ಮುದ್ರಿಸಿ, ಮೋಸದಿಂದ ಸಾರ್ವಜನಿಕರಿಗೆ ಚಲಾವಣೆ ಮಾಡುವ ಸಲುವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಮಾಹಿತಿ ಮೇರೆಗೆ ಸ್ಥಳೀಯ ಪೋಲಿಸರು ದಾಳಿ ನಡೆಸಿದ್ದಾರೆ.

      ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿತರಿಂದ 500 ರೂ ಮುಖ ಬೆಲೆಯ 248,(1 ಲಕ್ಷ 24 ಸಾವಿರ ), 200 ರೂ ಮುಖ ಬೆಲೆಯ 10 , (2000)ಸಾವಿರ ರೂ ಮೊತ್ತದ ನೋಟುಗಳು , 100 ರೂ ಮುಖಬೆಲೆಯ 17 , (1700) ರೂ ಮೊತ್ತದ ಖೋಟಾ ನೋಟುಗಳನ್ನು ಹಾಗೂ ಖೋಟಾ ನೋಟು ಪ್ರಿಂಟ್ ಮಾಡಲು ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

      ಆರೋಪಿಗಳಾದ ಶಿವಕುಮಾರ ಬಿನ್ ನಾಗರಾಜಪ್ಪ (32 )ವರ್ಷ, ಶ್ರೀನಿವಾಸ ಬಿನ್ ಅಂಜಿನಪ್ಪ (50)ವರ್ಷ , ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದು ಆರೋಪಿ ಶ್ರೀನಿವಾಸನನ್ನು ವಿಚಾರಣೆ ಮಾಡಲಾಗಿ ಈತನ ವಿರುದ್ಧ ಹಿಂದೂಪುರ ಪೊಲೀಸ್ ಠಾಣೆ ಎರಡು ಪ್ರಕರಣ ದಾಖಲಾಗಿ ಒಂದು ವರ್ಷ ಜೈಲು ವಾಸ ಅನುಭವಿಸಿದ್ದಾನೆ ಎನ್ನಲಾಗಿದೆ.

      ಈ ಪ್ರಕರಣವನ್ನು ಪತ್ತೆ ಹಚ್ಚಲು ಶ್ರಮಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ, ಟಿ.ಜೆ , ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಂ.ಪ್ರವೀಣ್. ಹಾಗೂ ತಿರುಮಣಿ ವೃತ್ತ ನಿರೀಕ್ಷಕರಾದ ವೆಂಕಟೇಶ್, ವೈ.ಎನ್.ಹೊಸಕೋಟೆ ಠಾಣೆಯ ಪಿ.ಎಸ್.ಐ – ರಾಮಯ್ಯ, ಸಿಬ್ಬಂದಿಗಳಾದ ಶಿವರಾಜು, ಶೌಕತ್ ಲಾಲಸಾ ಕುರಿ, ಸದ್ದಾಂ ಸಾಹೇಬ್, ರಾಮಚಂದ್ರ, ಹನುಮಾನಾಯ್ ಗೋಕರ್ಣ, ಶ್ರೀನಿವಾಸ್, ನಾಗೇಶ್, ಮಾಳಪ್ಪ, ರವರುಗಳ ಪತ್ತೆ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap