ಮಧುಗಿರಿ :
ಜಿಪಿವಿಪಿ ತಂತ್ರಾಂಶದ ಮೂಲಕ 1993 ರಿಂದ 2015ರ ವರಗೆ ನಿಗದಿಗೊಳಿಸಿದ್ದ ಮೀಸಲಾತಿಯಂತೆ ಹಾಗೂ ನೂತನವಾಗಿ ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಒಟ್ಟು 39 ಗ್ರಾಮ ಪಂಚಾಯಿತಿಗಳ ಪೈಕಿ 10 ಸ್ಥಾನಗಳು ಸಾಮಾನ್ಯ, 10 ಸ್ಥಾನಗಳು ಸಾಮಾನ್ಯ ಮಹಿಳೆಗೆ, 5 ಸ್ಥಾನಗಳು ಪರಿಶಿಷ್ಟ ಜಾತಿಗೆ, 5 ಸ್ಥಾನಗಳು ಪರಿಶಿಷ್ಟ ಜಾತಿ ಮಹಿಳೆಗೆ, 2 ಸ್ಥಾನಗಳು ಪರಿಶಿಷ್ಟ ಪಂಗಡ, 3 ಸ್ಥಾನಗಳು ಪರಿಶಿಷ್ಟ ಪಂಗಡದ ಮಹಿಳೆಗೆ, 1 ಸ್ಥಾನ ಹಿಂದುಳಿದ ವರ್ಗ ಅ ಗೆ, 2 ಸ್ಥಾನಗಳು ಹಿಂದುಳಿದ ವರ್ಗ ಅ ಮಹಿಳೆಗೆ, 1 ಸ್ಥಾನ ಹಿಂದುಳಿದ ವರ್ಗ ಬ ಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದ್ದು, ಕೆಳಕಂಡಂತೆ ಪಂಚಾಯಿತಿವಾರು ಮೀಸಲಾತಿ ಆಯ್ಕೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
