ಮಧುಗಿರಿ :
ಬೈಪಾಸ್ ರಸ್ತೆ ಅವೈಜ್ಞಾನಿಕವಾಗಿದ್ದು, ದಿನೆ ದಿನೆ ರಸ್ತೆ ಅಪಘಾತಗಳು ಹೆಚ್ಚಾಗಿ ಸಾವು ನೋವುಗಳು ಉಂಟಾಗುತ್ತಿದ್ದು, ಕೆಶಿಪ್‍ನವರು ಈ ಕೂಡಲೆ ರಸ್ತೆ ಉಬ್ಬುಗಳನ್ನು ಹಾಕಿ ಅಪಘಾತ ತಪ್ಪಿಸಬೇಕೆಂದು ಬುಧವಾರ ಸಾರ್ವಜನಿಕರು ಪ್ರತಿಭಟಿಸಿದರು.
ಮಧುಗಿರಿಯಿಂದ ಗೌರಿಬಿದನೂರಿನ ಕಡೆ ಸಾಗುವ ರಸ್ತೆಯಲ್ಲಿ ತುಮಕೂರು ಪಾವಗಡ ಕೆಶಿಪ್ ರಸ್ತೆ ಹಾದು ಹೋಗಿದೆ. ಈ ಎರಡು ರಸ್ತೆಗಳಲ್ಲಿ ರಸ್ತೆ ಉಬ್ಬುಗಳಾಗಲಿ, ಸೂಚನಾ ಫಲಕಗಳಾಗಲಿ ಇಲ್ಲದೆ ಇರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಬುಧವಾರ ಬೆಳಗ್ಗೆ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದು, ಅರ್ಧ ಘಂಟೆಯಾದರೂ ಸ್ಥಳಕ್ಕೆ ಕೆಶಿಪ್ ಆ್ಯಂಬ್ಯುಲೆನ್ಸ್ ಬಾರದೆ ಇದ್ದುದಕ್ಕೆ ಸ್ಥಳೀಯರು ತೀವ್ರ ಅಕ್ರೋಶ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ನಾಗಭೂಷಣ, ರಮೇಶ್, ಮಂಜು, ನಾಗರಾಜಪ್ಪ, ಬಸವರಾಜು, ನರಸಿಂಹಮೂರ್ತಿ, ಶಿವಾನಂದ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
