ಮಧುಗಿರಿ :
ಅನೇಕ ಮಹನೀಯರ ಬಲಿದಾನದಿಂದ ನಮಗೆ ಸ್ವ್ವಾತಂತ್ರ್ಯ ಸಿಕ್ಕಿದೆ, ಸ್ವಾಮಿ ವಿವೇಕಾನಂದರ ನಂತರ ಭಾರತ ದೇಶ ಏನು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಮೊದಲು ದೇಶ ನಂತರ ಪಕ್ಷ ಎಂಬ ತತ್ವ ಸಿದ್ದಾಂತ ಮತ್ತು ಧ್ಯೇಯವನ್ನು ಹೊಂದಿದ್ದು, ಇಂತಹ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿರುವುದು ಹೆಮ್ಮೆಯ ವಿಷಯ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಹೆಣ್ಣು ಮಕ್ಕಳಿಗೆ ಅಣ್ಣನಾಗಿ, ವಯಸ್ಸಾಗಿರುವಂತಹ ತಂದೆ ತಾಯಿಗಳಿಗೆ ಮಗನಾಗಿ, ಇಡೀ ರಾಜ್ಯದ ಜನರಿಗೆ ಒಂದಲ್ಲಾ ಒಂದು ಯೋಜನೆಯ ಮೂಲಕ ಪ್ರತಿಯೊಂದು ಮನೆಗಳಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿದ್ದಾರೆ.
ಈ 21ನೆ ಶತಮಾನದಲ್ಲಿ ನಮ್ಮ ದೇಶದ ಧರ್ಮವನ್ನು, ಸಂಸ್ಕøತಿ ಮತ್ತು ಸಂಸ್ಕಾರವನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ನಮ್ಮ ಪ್ರಧಾನಿ ಮೋದಿಜಿ. ಸಾಮಾನ್ಯ ಕಾರ್ಯಕರ್ತನೂ ಕೂಡ ಈ ದೇಶದ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಾಗುವುದು ನಮ್ಮ ಪಕ್ಷದಲ್ಲಿ ಮಾತ್ರ. ಕಾರ್ಯಕರ್ತರ ಬಲದಿಂದ ನಮ್ಮ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು, ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಸನ್ನದ್ದರಾಗಬೇಕು. ನನ್ನ ಇಲಾಖೆ ವತಿಯಿಂದ ನೀಡುವ ಯೋಜನೆ ಮತ್ತು ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಗುವುದು ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಪಿ.ಎಲ್.ನರಸಿಂಹಮೂರ್ತಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ನಮ್ಮ ಕಾರ್ಯಾಲಯಕ್ಕೆ ಆಗಮಿಸಿ ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಹಾಯದಿಂದ ತಾಲ್ಲೂಕಿನಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸಲಾಗುವುದು ಎಂದರು.
ತಾಲ್ಲೂಕು ಬಿಜೆಪಿ ಉಪಾಧ್ಯಕ್ಷ ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಖಜಾಂಚಿ ತಿಮ್ಮಣ್ಣ, ಯುವ ಮೋರ್ಚಾದ ಕಾರ್ತಿಕ್ ಆರಾಧ್ಯ, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ವಿಜಯ ಕುಮಾರ್, ಮಹಿಳಾ ಮೋರ್ಚಾದ ತಾಲ್ಲೂಕು ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಲಕ್ಷ್ಮೀಪ್ರಕಾಶ್, ಮುಖಂಡರಾದ ನಾಗರಾಜಪ್ಪ, ಮಲ್ಲಿಕಾರ್ಜುನಯ್ಯ, ಆದಿ ಶೇಷಗುಪ್ತ, ಮಂಜುನಾಥ್, ಸೀತಾರಾಂ, ಟೈಲರ್ ನಾಗರಾಜು, ಇಂತಿಯಾಜ್, ಹಸೀನಾ ಬೇಗಂ, ನುಸ್ರತ್ ಉನ್ನೀಸಾ, ಬಸವರಾಜು, ಪಿ.ಎಸ್.ಭಾಗ್ಯಪ್ರಸಾದ್, ಡಿ.ವಿ.ಸಿದ್ದಗಂಗಯ್ಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ