ನಾಗರಿಕ ಹಕ್ಕು ನಿರ್ದೇಶನಾಲಯ ಸಭೆಗೆ ತಹಸೀಲ್ದಾರ್ ಗೈರು

 ಮಧುಗಿರಿ :

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಹೊಸಹಳ್ಳಿ ಗ್ರಾಮ ಹಾಗೂ ಶ್ರಾವಂಡನಹಳ್ಳಿ ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಜನಾಂಗದವರಿಗೆ ಎಂಆರ್ ಖಾತೆ, ಪಹಣಿ ಮಾಡಿ ಕೊಡಲು ಈ ಹಿಂದಿನ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಹಂದ್ರಾಳು ನಾಗಭೂಷಣ್ ಆರೋಪಿಸಿ, ಇವರುಗಳ ವಿರುದ್ಧ ಬೆಂಗಳೂರಿನ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದರು.

      ಈ ಹಿನ್ನೆಲೆಯಲ್ಲಿ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ತಿಳಿವಳಿಕೆ ಪತ್ರವನ್ನು ಜಾರಿ ಮಾಡಲಾಗಿತ್ತು. 1999 ರಲ್ಲಿ ಶ್ರಾವಂಡನಹಳ್ಳಿ ಗ್ರಾಮದ ಸರ್ವೆನಂ. 129, 130, ಹೊಸಹಳ್ಳಿ ಗ್ರಾಮದ ಸ.ನಂ.7 ಕ್ಕೆ ಸಂಬಂಧಿಸಿದಂತೆ 1991-92 ರಲ್ಲಿ ಸಾಗುವಳಿ ಪತ್ರಗಳನ್ನು ನೀಡಲಾಗಿದ್ದು, ಇದೂವರೆವಿಗೂ ಅರ್ಜಿದಾರರು ಹಲವಾರು ಬಾರಿ ಖಾತೆ-ಪಹಣಿ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಅರ್ಜಿ ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.

      ಆದರೆ ಹೊಸಹಳ್ಳಿ ಗ್ರಾಮದ ಸ.ನಂ.7 ರಲ್ಲಿ ಸುಮಾರು 8 ರಿಂದ 10 ಕುಟುಂಬಗಳಿಗೆ ಮಾತ್ರ ಖಾತೆ- ಪಹಣಿ ಮಾಡಿಕೊಟ್ಟಿದ್ದು, ಈ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಡಾ.ಕೆ.ನಂದಿನಿದೇವಿ ಹಾಗೂ ತಹಸೀಲ್ದಾರ್ ಡಾ.ಜಿ.ವಿಶ್ವನಾಥ್‍ರವರುಗಳು ತಳ ಸಮುದಾಯದವರ ಸಮಸ್ಯೆ ಹಾಗೂ ಮನವಿ ಪತ್ರಗಳಿಗೆ ಸ್ಪಂದಿಸದೆ ಖಾತೆ ಪಹಣಿ ಮಾಡಿಕೊಟ್ಟಿಲ.್ಲ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

      ಮಂಗಳವಾರ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಅರ್ಜಿದಾರರು ಮತ್ತು ದೂರುದಾರರು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರೂ ಸಹ ಅರ್ಜಿದಾರರು ಹಾಜರಾದರೆ ತಹಸೀಲ್ದಾರ್ ಗೈರು ಹಾಜರಾಗಿದ್ದು ಕಂಡು ಬಂತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link