ಬಡವರು ವಾಸಿಸುವ ವಾರ್ಡ್‍ಗಳಲ್ಲಿ ಸೌಲಭ್ಯ ಕಲ್ಪಿಸಿ – ಪುರಸಭಾಧ್ಯಕ್ಷ

ಮಧುಗಿರಿ : 

      ಹೆಚ್ಚಾಗಿ ಬಡವರು ವಾಸಿಸುವಂತಹ ವಾರ್ಡ್‍ಗಳಲ್ಲಿ ಪುರಸಭೆಯ ವತಿಯಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಪುರಸಭಾಧ್ಯಕ್ಷ ತಿಮ್ಮರಾಜು ಅಧಿಕಾರಿಗಳಿಗೆ ಸೂಚಿಸಿದರು.

      ಪಟ್ಟಣದ 6ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆಲ ವಾರ್ಡ್‍ಗಳಲ್ಲಿ ಸ್ವಚ್ಛತಾ ಅಭಿಯಾನ ಆರಂಭವಾದಾಗಿನಿಂದ ಇಲ್ಲಿಯೇ ಹೆಚ್ಚು ಸಮಸ್ಯೆಗಳು ಕಂಡು ಬರುತ್ತಿವೆ. ನಮ್ಮ ವ್ಯಾಪ್ತಿಯಲ್ಲಿ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಮುಂದಾಗಬೇಕಿದೆ. ಅನ್ಯ ಕಾರಣಗಳನ್ನು ಹೇಳದೆ ಮೊದಲು ನಾಗರೀಕರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದರು.

      ಆದಷ್ಟು ಬೇಗ ಬೀದಿ ದೀಪ, ಮೋರಿಗಳ ಸ್ವಚ್ಛತೆ ಬಗ್ಗೆ ಮತ್ತು ರಸ್ತೆಗಳನ್ನು ಸರಿಪಡಿಸಿ. ಬೇಸಿಗೆ ಆರಂಭವಾಗಿದೆ. ಮನೆಗಳಿಗೆ ನಲ್ಲಿ ನೀರು ಹರಿಯದ ಕಡೆ ಪ್ರತ್ಯೇಕವಾಗಿ ಪೈಪ್‍ಲೇನ್ ಆಳವಡಿಸಿಕೊಡಬೇಕು. ವಾರ್ಡ್ ನಾಗರೀಕರು ನೀರಿನ ಕೊರತೆ ಇದೆ ಎಂದು ಮತ್ತೆ ನನಗೆ ಸಮಸ್ಯೆ ಹೇಳಬಾರದು ಎಂದರು.

      ನಾಗರೀಕ ಕಂಬಣ್ಣ ಮಾತನಾಡಿ ನಮ್ಮ ಸ್ಲಂ ಬೋರ್ಡಿನಲ್ಲಿ ಸರಿಯಾಗಿ ನಲ್ಲಿ ನೀರು ಬರುತ್ತಿಲ್ಲ, ವಾಟರ್ ಮ್ಯಾನ್ ಕೆಲಸ ಮಾಡುತ್ತಿಲ್ಲ. ಕೊಳಚೆ ಅಭಿವೃದ್ಧಿ ಮಂಡಲಿ ವತಿಯಿಂದ ನಿರ್ಮಿಸಿರುವ ಮನೆಗಳ ಮೇಲ್ಚಾವಣಿಗಳು ಮಳೆ ಬಂದಾಗ ಸೊರುತ್ತಿವೆ. ಮಹಿಳಾ ಹಾಸ್ಟಲ್ ಬಳಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೃಷ್ಣ ಬಡಾವಣೆ, ಚಿಕ್ಕಣ್ಣ ಪಾಳ್ಯ, ಗುರುಮ್ಮನಕಟ್ಟೆಯಲ್ಲಿನ ಕೆಲವು ಮನೆಗಳು ಈಗಲೂ ಪಂಚಾಯತಿ ವ್ಯಾಪ್ತಿಯಲ್ಲಿವೆ. ಇಲ್ಲಿ ನಿರ್ಗತಿಕರು ಹೆಚ್ಚಾಗಿದ್ದಾರೆ. ಅರ್ಹರನ್ನು ಗುರುತಿಸಿ ನಿವೇಶನಗಳನ್ನು ಕೊಡಿ, ನಮಗೆ ಪುರಸಭೆಯ ವತಿಯಿಂದ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ.್ಲ ಇಲ್ಲಿ ಹೊಸ ಮನೆಗಳ ನಿರ್ಮಾಣ ಕಷ್ಟಕರವಾಗಿದೆ ಎಂದು ಅಧ್ಯಕ್ಷರ ಬಳಿ ದೂರಿದರು.

      ವಾರ್ಡಿನಲ್ಲಿ ಈ ಹಿಂದೆ ಅಂಗನವಾಡಿ ಕೇಂದ್ರಕ್ಕಾಗಿ ನಿವೇಶನ ಮತ್ತು ಖಾತೆ ಮಾಡಿಕೊಟ್ಟಿದ್ದರೂ ಸಹ ಪುರಸಭೆಯವರು ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇರುವ ಕಟ್ಟಡದಲ್ಲಿನ ಕಡತಗಳನ್ನು ಇಲಿಗಳು ಕಚ್ಚುತ್ತಾ ಹಾಳುಮಾಡುತ್ತಿವೆ ನಮಗೆ ಹೊಸ ಕಟ್ಟಡ ಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪುರಸಭಾಧ್ಯಕ್ಷ ನಿಮ್ಮ ಇಲಾಖೆಯ ವತಿಯಿಂದಲೇ ನಿರ್ಮಾಣ ಕಾಮಗಾರಿ ಆರಂಭಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪುರಸಭೆಯ ವತಿಯಿಂದ ದೊರೆಯ ಬಹುದಾದ ಅಗತ್ಯ ಸೌಲಭ್ಯಗಳನ್ನು ಅದಷ್ಟೂ ಬೇಗ ಕಲ್ಪಿಸಲಾಗುವುದು ಎಂದರು.

      ಪುರಸಭಾ ಸದಸ್ಯರಾದ ನಟರಾಜು, ನರಸಿಂಹಮೂರ್ತಿ, ಮುಖ್ಯಾಧಿಕಾರಿ ಅಮರನಾರಾಯಣ, ಆರ್.ಓ. ಸಂತೋಷ್, ಆರ್.ಐ ಶಿವಣ್ಣ, ಬಿಲ್ ಕಲೆಕ್ಟರ್‍ಗಳಾದ ಕೃಷ್ಣ, ಬಾಲಾಜಿ, ಸಿದ್ದರಾಜು, ಮಂಜುನಾಥ್, ಗಿರಿವಾಸು, ತಾಂತ್ರಿಕ ಶಾಖೆಯ ಸಂಜೀವಮೂರ್ತಿ ಹಾಗೂ ವಾರ್ಡಿನ ನಾಗರೀಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link