ಟಿವಿಯಲ್ಲಿ ಬಿಜೆಪಿ ಸಿನಿಮಾ ಬರ್ತಿದಿ ನೋಡಿ ಡಿಕೆಶಿ ವ್ಯಂಗ್ಯ

ಮಧುಗಿರಿ : 

     ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ 150 ಸೀಟು ಪಡೀತೀವಿ ಅಂತಾ ಯಡಿಯೂರಪ್ಪ ಹೇಳುತ್ತಿದ್ದಾರೆ ದಿನಾ ನೀವು ಟಿವಿಯಲ್ಲಿ ಸಿನಿಮಾ ನೋಡುತ್ತಿದ್ದೀರಾ ಬಿಜೆಪಿ ಸಿನಿಮಾ ಬರುತ್ತಿದೆ 150 ಸೀಟು ಬಿಜೆಪಿ ಪಕ್ಷದ ಗುರಿಯಲ್ಲಾ ಅದು ಕಾಂಗ್ರೆಸ್ ಪಕ್ಷದ ಗುರಿ ಎಂದು ಕೆಪಿಸಿಸಿ ಕೆಪಿಸಿಸಿ ಅಧಕ್ಷ ಶಾಸಕ ಡಿ.ಕೆ.ಶಿವಕುಮಾರ್ ತಿಳಿಸಿದರು.

     ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ವತಿಯಿಂದ ನೂತನ ಗ್ರಾ.ಪಂ ಅಧ್ಯಕ್ಷ, ಉಪಾದ್ಯಕ್ಷರ ಸನ್ಮಾನ ಹಾಗೂ ಜನಧ್ವನಿ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಾಮಮಾರ್ಗದಲ್ಲಿ ಬಂದ ಸರ್ಕಾರಕ್ಕೆ ಭವಿಷ್ಯ ಇಲ್ಲ. ಮೊದಲು ಶಾಸಕರು ಅಂದ್ರೇ ಕಾಲಿಗೆ ಬಿದ್ದು ಆರ್ಶಿವಾದ ತೆಗೆದುಕೊಳ್ಳುವಂತೆ ಇತ್ತು. ಈಗ ಶಾಸಕರು ಅಂದಾಕ್ಷಣ ಛೀ ಥೂ, ಕಳ್ಳ ಅನ್ನೋ ಈ ಪರಿಸ್ಥಿತಿಯನ್ನ ಬಿಜೆಪಿ ಶಾಸಕರು ತಂದುಕೊಟ್ಟಿದ್ದಾರೆ. ನಿಮ್ಮ ಭಾವನೆಗೆ ಕಷ್ಟಕ್ಕೆ ಅಭಿನಂದನೆಸಲ್ಲಿಸೋ ಕಾರ್ಯಕ್ರಮ ಇದಾಗಿದೆ. ಯಾವ ಪಕ್ಷದಿಂದ ನೀವು ಅಯ್ಕೆಯಾಗಿದ್ದೀರಾ ಆ ಪಕ್ಷಕ್ಕೆ ಸಮಾಜಕ್ಕೆ ಗೌರವ ತರುವಂತಾ ಕೆಲಸ ಮಾಡಬೇಕು. ಕೆಲವರು ಖುರ್ಚಿಗಾಗಿ ಗೌರವ ಕಳೆದುಕೊಳ್ತಾರೆ ಕೆಲವರು ತರುತ್ತಾರೆ. ನನ್ನ ಕನಕಪುರ ಕ್ಷೇತ್ರದಲ್ಲಿ ಒಂದು ಪಂಚಾಯ್ತಿಗೆ 4 ರಿಂದ 5 ಕೋಟಿ ಖರ್ಚು ಮಾಡಿಸಿದ್ದೇನೆಂದರು.

ಎಲ್ಲರೂ ಸೇರಿ ಕಾಂಗ್ರೆಸ್ ದೇವಸ್ಥಾನ ಕಟ್ಟಿ :

      ಎಲ್ಲಾ ಅಭಿವೃದ್ದಿ ಕೆಲಸ ಗಮನಿಸಿ ಕನಕಪುರ ಮಾದರಿ ಕ್ಷೇತ್ರ ಅಂತಾ ಬಿಜೆಪಿ ಸರ್ಕಾರವೇ ಪ್ರಶಸ್ತಿ ಕೊಟ್ಟಿದೆ ಕನಕಪುರದ ನೂರಾರು ಚೆಕ್ ಡ್ಯಾಂ ಇಂಗು ಗುಂಡಿ ಎಲ್ಲಾ ಅಭಿವೃದ್ದಿಯನ್ನ ನೀವು ಒಮ್ಮೆ ನನ್ನ ಕ್ಷೇತ್ರಕ್ಕೆ ಬಂದು ನೋಡಿ. ಶಿವಕುಮಾರ್ ಮಾಡಬಾರದ್ದು ಮಾಡಿದ್ದಾರೆ ಅಂತಾ ಕೇಂದ್ರ ಸರ್ಕಾರ ದೊಡ್ಡ ತನಿಖೆ ಮಾಡಿಸ್ತು. ಅದಕ್ಕಾಗಿ ನನಗೆ ಜನ್ರು 80 ಸಾವಿರ ಲೀಡ್ ಕೊಟ್ಟು ಗೆಲ್ಲಿಸಿದ್ದಾರೆ. ರಾಜಣ್ಣ ಅವ್ರು 20 ಗುಂಟೆ ಜಮೀನು ತೆಗೆದುಕೊಂಡಿದ್ದಾರೆ ಎಲ್ಲರೂ ಸೇರಿ ಕೈಲಾದಷ್ಟು ಹಣ ಹಾಕಿ ಕಾಂಗ್ರೆಸ್ ದೇವಸ್ಥಾನ ಕಟ್ಟಬೇಕು. ಮುಂದೆ ಆ ಕಾಂಗ್ರೆಸ್ ಕಚೇರಿಯ ಉದ್ಘಾಟನೆಗಾಗಿ ಕ್ಷೇತ್ರಕ್ಕೆ ಮತ್ತೆ ಬರುತ್ತೆನೆ.

       ಪ್ರಧಾನಿಗೆ ರೈತರ ಸಂಕಷ್ಟ ಕೇಳಲು ಶಕ್ತಿ, ಸೌಜನ್ಯ ಏನು ಇಲ್ಲವಾಗಿದೆ. ದೇಶದಲ್ಲಿ ಕ್ರಾಂತಿಕಾರಿ ಬೆಳವಣಿಗೆ ನಡೆಯುತ್ತಿದೆ. ರೈತರು ಸಾಯುತ್ತಿದ್ದಾರೆ ರೈತರಿಗೆ ಜಿಗುಪ್ಸೆ ಉಂಟಾಗಿದೆ. ನಿಮ್ಮೆಲ್ಲರ ಬದುಕು ನರೇಗಾ ಮೂಲಕ ಹಸನು ಮಾಡುಕೊಳ್ಳಬೇಕು ಅಂತ ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಮ್ಮ ಯಾವುದೇ ಯೋಜನೆಗಳನ್ನು ಬದಲಾವಣೆ ಮಾಡಲು ಆಗಿಲ್ಲಾ. ಪೆಟ್ರೋಲ್ ಡಿಸೇಲ್ ಗ್ಯಾಸ್ ಜಾಸ್ತಿ ಆಗಿದೆ. ಬಟ್ಟೆ ಬದುಕು ಜೀವನ ಎಲ್ಲಕ್ಕೂ ತೊಂದರೆಯಾಗ್ತಿದೆ. ಇದಕ್ಕೆಲ್ಲಾ ಉತ್ತರ ನೀಡಬೇಕೆಂದರೆ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯಬೇಕು ಎಂದರು.

ಬಿಎಸ್‍ವೈ ಹಿಂಬಾಗಿಲಿನ ಮುಖ್ಯಮಂತ್ರಿ: ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಪಕ್ಷ ನಾಯಕರಾದ ಸಿದ್ದರಾಮಯ್ಯ ಮಾತನಾಡಿ ಯಡಿಯೂರಪ್ಪ ಹಿಂಬಾಗಲಿನಿಂದ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಜನರ ದುಡ್ಡು ಲೂಟಿ ಮಾಡುತ್ತಿದ್ದಾರೆ ಶೋಷಣೆ ಮಾಡುತ್ತಿದ್ದಾರೆ. ಕೋಟಿಗಟ್ಟಲೇ ಹಣ ಕೊಟ್ಟು ಎಂಎಲ್‍ಎ ಗಳನ್ನ ಕೊಂಡುಕೊಂಡಿದ್ದಾರೆ. ಈ ಥರ ಲಜ್ಜಗೆಟ್ಟ ಮುಖ್ಯಮಂತ್ರಿಗೆ ಮಾನಮರ್ಯಾದೆ ಇರೋಕೆ ಸಾಧ್ಯನಾ ಎಂದು ಪ್ರಶ್ನಿಸಿದರು.

 ಕೆಎನ್‍ಆರ್ ಸೋಲಿಸಿ ತಪ್ಪು ಮಾಡಿದಿರಿ:

     ಇಂತಹವರಿಂದ ಬಡವರ ಅಭಿವೃದ್ದಿ ಮಾಡೋಕೆ ಸಾಧ್ಯವಿದೆಯೇ. ರಾಜಣ್ಣನವರನ್ನು ಸೋಲಿಸಿ ನೀವು ತಪ್ಪು ಮಾಡಿದ್ದೀರ. ಮಧುಗಿರಿಯಲ್ಲಿ ಕೆಲಸ ನೆಡೆಯುತ್ತೀವೆಯೇ.? ಅವನ್ಯಾರೋ ಜೆಡಿಎಸ್ ಅವನನ್ನ ಗೆಲ್ಲಿಸಿಬಿಟ್ಟಿದ್ದೀರಾ. ಒಂದು ದಿನವಾದರೂ ಅಸೆಂಬ್ಲಿಯಲ್ಲಿ ಮಾತಾಡಲ್ಲಾ ಪುಣ್ಯಾತ್ಮ. ಬರೀ ದುಡ್ಡು ಕೆರೆದುಕೊಳ್ಳೋದ್ರಲ್ಲಿಯೇ ಇದ್ದಾರೆ. ಯಡಿಯೂರಪ್ಪ ನವರಂತ ಭ್ರಷ್ಟ ಲಜ್ಜಗೆಟ್ಟ ಮಾನಗೆಟ್ಟ ಜನವಿರೋಧಿ ಸರ್ಕಾರ ರಾಜ್ಯದಲ್ಲಿ ಯಾವತ್ತೂ ಬಂದಿರಲಿಲ್ಲಾ. ನೀವು ಸಿಎಂ ಆಗಿ ಎರಡನೇ ಸರಿ ಸರ್ಕಾರ ಆಫ್ ಆಗಿಬಿಟ್ಟಿದೆ. ನಿಂತೋಗಿರೋ ಡಕೋಟ ಬಸ್ ಮೇಲೆ ಕುಳಿತು ಸ್ಟೇರಿಂಗ್ ಹಿಡುದುಕೊಂಡು ಅಲ್ಲಾಡಿಸುತ್ತಿದ್ದಾರೆ ಅಷ್ಟೇ.

      ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜಿಡಿಪಿ ಮತ್ತು ನಿರೋದ್ಯೋಗದ ಬಗ್ಗೆ ಚರ್ಚೆನೇ ಮಾಡುತ್ತಿಲ್ಲಾ. ಸಿಎಂ ಅಂದ್ರೇ ಮಾನ ಮರ್ಯಾದೆ ಘನತೆ ಗೌರವ ಇರಬೇಕು, ಇಲ್ಲಾ ಅಂದ್ರೆ ಸಿ ಎಂ ಆಗಬಾರದು. ಇಂತಹವರು ಒಂದು ಕ್ಷಣ ಇರಬಾರದು ಇವರು ಅಧಿಕಾರದಲ್ಲಿ ಕೊರೋನಾಗೆ 4400 ಕೋಟಿ ಖರ್ಚು ಮಾಡಿದ್ದಾರೆ ಅದರಲ್ಲಿ ಅರ್ಧ ಹೊಡೆದು 2500 ಕೋಟಿ ನುಂಗಿಬಿಟ್ಟಿದ್ದಾರೆ.
ನೇಕಾರರು, ಕ್ಷೌರಿಕರಿಗೆ, ಚಾಲಕರು ಸೇರಿ ಯಾರಿಗೂ ಇದೂವರೆವಿಗೂ ಪರಿಹಾರ ಕೊಟ್ಟಿಲ್ಲಾ. 4 ಲಕ್ಷ ಕೋಟಿ ಬೆಲೆಬಾಳೋ ವೆಂಟಿಲೇಟರನ್ನ 18 ಲಕ್ಷ ಕೋಟಿ ಕೊಟ್ಟು ಖರೀದಿಸಿದ್ದಾರೆ.

      ಹೋಟೆಲ್‍ಗಳಲ್ಲಿ ತಿಂಡಿ ತಿನಿಸುಗಳಿಗೆ ಇಷ್ಟೆಂದೂ ದರ ಪಟ್ಟಿ ಹಾಕಿರುತ್ತಾರೆ ಅದೇ ರೀತಿ ಇಷ್ಟು ಅಂತಾ ಹಾಕ್ತಾರಲ್ಲಾ.ಅದೇ ರೀತಿ ವಿಜಯೇಂದ್ರನ ಆಫೀಸ್ ಮುಂದೆ ಚೀಫ್ ಇಂಜಿನಿಯರ್‍ಗೆ ಇಷ್ಟು, ಎಸ್ಪಿಗೆ ಇಷ್ಟು, ಡಿಸಿಗೆ ಇಷ್ಟು ಅಂತಾ ಬೋರ್ಡ್ ಹಾಕಿದ್ದಾರೆ ಲಕ್ಷ ಲಕ್ಷ ಲಂಚ ಪಡೆದುಕೊಂಡು ಅಧಿಕಾರಿಗಳನ್ನ ವರ್ಗಾವಣೆ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗ ವರ್ಗಾವಣೆಗಳಿಗೆ ಹಣ ತೆಗೆದುಕೊಂಡಿದ್ದಾರೆ ಅಂತಾ ಯಾರಾದರೂ ಸಾಬೀತುಪಡಿಸಲಿ ನಾನು ಇಂದೇ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೀನಿ.

      ಬಿಜೆಪಿಯ ಸಚಿವ ರಮೇಶ್ ಜಾರಕಿಹೊಳಿ ಯಾವ ಕಾರಣಕ್ಕೆ ರಾಜಿನಾಮೆ ಕೊಟ್ರು ?

      6 ಜನ ಸಚಿವರು ಸಿಡಿಗಳು ಇದ್ದಾವೆ ಅದನ್ನ ಮಾಧ್ಯಮದವರು ತೋರಿಸಬಾರದು ಎಂದು ಕೋರ್ಟ್‍ಗೆ ಹೋಗಿ ಇಂಜೆಕ್ಷನ್ ತಂದಿದ್ದಾರೆ. ಏನು ಇಲ್ಲದೇ ಇದ್ದ ಮೇಲೆ ಯಾಕೆ ಇಂಜಕ್ಷನ್ ತಗೊಂಡ್ರು.? ನಾವು ಬರಗಾಲದ ಬಗ್ಗೆ ನಾವು ಸದನದಲ್ಲಿ ಚರ್ಚೆ ಮಾಡುತ್ತಿರುವಾಗ ಈ ಹಿಂದೆ ಮೂರು ಸಚಿವರು ಸದಸನದಲ್ಲಿ ಬ್ಲೂಫಿಲಂ ನೋಡ್ತಾ ಇದ್ರು. ನಾವು ರಾಮನ ಭಕ್ತರು ಸುಸಂಸ್ಕøತರು ಅಂತಾರೆ. ನಮ್ಮೂರಲ್ಲೂ ರಾಮನ ದೇವಸ್ಥಾನ ಇದೆ, ನನ್ನ ಹೆಸರಲ್ಲೇ ರಾಮ ಇದಾನೆ. ನಾವೆಲ್ಲಾ ಹಿಂದೂಗಳಲ್ಲಾ ಇವರು ಮಾತ್ರ ಹಿಂದೂಗಳಂತೆ.! ಸಮಾಜವನ್ನ ಹೊಡೆದು ಜಾತಿಗಳ ಮದ್ಯೆ ಬೆಂಕಿ ಹಚ್ಚುತ್ತಾ ದುಡ್ಡು ಕೊಡಿ ರಾಮಮಂದಿರ ಕಟ್ಟುತ್ತಿದ್ದೇವೆ ಅಂತಾ ನನ್ನ ಬಳಿ ಬಂದಿದ್ರು.ನಾನು ಅಯೋಧ್ಯೆ ರಾಮನಿಗೆ ಕೊಡಲ್ಲಾ. ನಮ್ಮೂರು ರಾಮನಿಗೆ ಕೊಡ್ತೀನಿ ಅಂತಾ ಹೇಳಿ ಕಳಿಸಿದೆ ಎಂದರು.

     ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ದಿಂದ ದೇಶದಲ್ಲಿ ಒಳ್ಳೆಯ ಆಡಳಿತ ವ್ಯವಸ್ಥೆ ಜಾರಿಗೆ ಕಾಂಗ್ರೆಸ್ ಪಕ್ಷ ಕಾರಣ. ಕೇಂದ್ರದಲ್ಲಿ ಏಳು ವರ್ಷದಿಂದ ವ್ಯವಸ್ಥೆ ಏನಾಗ್ತಿದೆ ನೀವೆ ಗಮನಿಸಿದ್ದೀರಾ. ಜನರಿಂದ ಮನ್ನಣೆಗಳಿಸಿದ ಸರ್ಕಾರ ಎಂದು ಮೋದಿ ಆಡಳಿತಕ್ಕೆ ಬಂದಿದ್ದು ಕಾಂಗ್ರೆಸ್ ಪಕ್ಷಕ್ಕಿಂತ ವಿಭಿನ್ನವಾಗಿ ಆಡಳಿತ, ಉದ್ಯೋಗ ಕೊಡುತ್ತಿದ್ದಾರೆ. ದುರ್ದೈವ ಎಂದರೆ ದೇಶದ ಆರ್ಥಿಕ ವ್ಯವಸ್ಥೆಗೆ ಬೆಂಕಿಬಿದ್ದು ಹೋಗಿದೆ. ಕಾರ್ಪೋರೇಟ್ ಕಂಪನಿಗಳು ಹಣ ಗಳಿಸುವಂತಾಗಿದೆ. ಡಿಮಾನಿಟೈಸ್ ಮಾಡಿ ಸಾರ್ವಜನಿಕರ ಹಣವಿಲ್ಲದಂತಾಗಿದೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗ್ತಿದೆ.

     ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದ ಶೇ.69ರಷ್ಟು ಟ್ಯಾಕ್ಸ್‍ನ್ನು ಪೆಟ್ರೋಲ್ ಮೇಲೆ ಹಾಕಲಾಗುತ್ತಿದೆ. ಇಷ್ಟು ಟ್ಯಾಕ್ಸ್ ಹಾಕುವ ಅಗತ್ಯ ಇತ್ತಾ ಯಾಕೆ ಇಂತಹ ತೀರ್ಮಾನ ಮಾಡ್ತೀರಿ. ಒಂದು ಕಡೆ ಚೀನಾದವರು, ಇನ್ನೊಂದು ಕಡೆ ಪಾಕಿಸ್ತಾನ ದಾಳಿ ನಡೆಸುತ್ತಿದ್ದಾರೆ. ಭಾರತೀಯರಿಗೆ ಅತ್ಯಂತ ಕೆಟ್ಟ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರ. ರೈತರ ಹೆಸರಲ್ಲಿ ಪ್ರಮಾಣವಚನ ಮಾಡಿ ರೈತರನ್ನು ಕಡೆಗಣಿಸಿರುವ ಯಡಿಯೂರಪ್ಪ ಸಿಎಂ ಆಗಿ ಕುಳಿತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಸಿಎಂ ಆಗಿ ಇನ್ನೂ ಕೂತಿದ್ದಾರೋ ಗೊತ್ತಿಲ್ಲ ಎಂದರು.
ಶಾಸಕ ವೆಂಕಟರವಣಪ್ಪ, ಮಾಜಿ ಸಚಿವ ಟಿಬಿ ಜಯಚಂದ್ರ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಶಾಸಕರಾದ ಎನ್.ಚೆಲುವರಾಯಸ್ವಾಮಿ, ಕೆ.ಷಡಕ್ಷರಿ, ಶಫೀ ಅಹಮದ್, ಎಂ.ಸಿ.ವೇಣುಗೋಪಾಲ್ ಮಾತನಾಡಿದರು.

      ರಾಜ್ಯ ಯುವ ಕಾಂಗ್ರೇಸ್ ಉಪಾಧ್ಯಕ್ಷ ಆರ್. ರಾಜೇಂದ್ರ, ಜಿ.ಪಂ.ಸದಸ್ಯರಾದ ಶಾಂತಲಾ ರಾಜಣ್ಣ, ಜಿ.ಜೆ.ರಾಜಣ್ಣ, ಮಂಜುಳಾ, ಚೌಡಪ್ಪ, ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ, ತಾ. ಪಂ ಅಧ್ಯಕ್ಷೆ ಇಂದಿರಾದೇನಾನಾಯ್ಕ್, ಪುರಸಭೆ ಅಧ್ಯಕ್ಷ ತಿಮ್ಮರಾಜು, ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಆರ್ ರಾಜಗೋಪಾಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್ ಮಲ್ಲಿಕಾರ್ಜುನಯ್ಯ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಶಶಿಹುಲಿಕುಂಟೆಮಠ್, ಎಸ್.ಡಿ.ಕೆ.ವೆಂಕಟೇಶ್ ಮುಖಂಡರಾದ ಎಂ.ಕೆ. ನಂಜುಡಯ್ಯ, ಎಚ್.ಸಿ.ಬೈರಪ್ಪ ತಾಪಂ ಸದಸ್ಯರು, ಗ್ರಾಪಂ ಸದಸ್ಯರು ಮುಂತಾದವರು ಇದ್ದರು.

ಬಿಎಸ್‍ವೈ ಅಧಿಕಾರದಲ್ಲಿ ರಾಜ್ಯಕ್ಕೆ ದಾರಿದ್ರ್ಯ :

      ಬಿಜೆಪಿ ಸರ್ಕಾರವು ಅನ್ನಭಾಗ್ಯ ,ವಿದ್ಯಾಸಿರಿ ಪಶು ಭಾಗ್ಯ ಎಲ್ಲಾ ಭಾಗ್ಯಗಳನ್ನೂ ನಿಲಿಸ್ತಿದ್ದಾರೆ. ಏನೇ ಕೇಳಿದ್ರೂ ಕೊರೋನಾ ಕೊರೋನಾ ಅಂತಾರೇ ಕೊರೋನಾ ನೆಪ ಹೇಳಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಯಾಕೆ ನೀವು ತೊಲಗಿ ನಾವ್ ಬರ್ತೀವಿ ನಾವ್ ಸರಿಮಾಡ್ತೀವಿ ಅಂದ್ರೆ ತೊಲಗೋದು ಇಲ್ಲಾ ಇಂತಹವರನ್ನಾ ತೊಲಗಿಸೋ ಶಕ್ತಿ ನಿಮ್ಮ ಕೈಯಲ್ಲಿದೆ. ನಾನು ಐದು ವರ್ಷ ಸಿಎಂ ಆಗಿದ್ದಾಗ ಒಂದೇ ಒಂದು ಚೆಕ್ ಕೂಡ ಬೌನ್ಸ್ ಆಗಿರಲಿಲ್ಲಾ. ದುಡ್ಡೇ ಇಲ್ಲಾ ಇವ್ರ ಹತ್ರ. ನಮ್ಮ ಅವಧಿಯಲ್ಲಿನ ಖಜಾನೆಯಲ್ಲಿ ಹಣ ತುಂಬಿ ತುಳುಕುತ್ತಿತ್ತು. ಈ ದರಿದ್ರ ಯಡಿಯೂರಪ್ಪ ಬಂದು ರಾಜ್ಯಕ್ಕೆ ದಾರಿದ್ಯ್ರಾ ಆವರಿಸಿ ಕೊಂಡುಬಿಟ್ಟಿದೆ.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ಸಿದ್ದರಾಮಯ್ಯರ ಅನ್ನಭಾಗ್ಯ ಮರೆತರೆ ತಿನ್ನ ಅನ್ನಕ್ಕೆ ಹುಳ ಬೀಳುತ್ತದೆ. ಕೋವಿಡ್ ಸಂದರ್ಭದಲ್ಲಿ ಅನ್ಯಭಾಗ್ಯದ ಮಹತ್ವದ ಬಗ್ಗೆ ಜನರಿಗೆ ಈಗಾಗಲೇ ಅರಿವು ವಾಗಿದೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೆ ಜನರ ಪೆನ್ಷನ್ ಹಣ ಕೂಡ ಬರ್ತಿಲ್ಲಾ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಅವರೆಲ್ಲಾ ದೊಡ್ಡ ಸಾಹೆಬ್ರು. ಈಗ ಯಡಿಯೂರಪ್ಪನವರು ಬಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಒಟ್ಟಿಗೆ ಇಡಲು ನೆಹರೂ ಕುಟುಂಬದಿಂದ ಮಾತ್ರ ಸಾಧ್ಯ. ಕ್ಷೇತ್ರದಲ್ಲಿ ನೆನÉಗುದಿಗೆ ಬಿದ್ದಿರುವ ರೋಪ್ ವೇ, ರೈಲ್ವೆ ಹಾಗೂ ಎತ್ತಿನ ಹೊಳೆ ಯೋಜನೆಗಳನ್ನು ಜಾರಿ ಗೊಳಿಸಲು ಕಾಂಗ್ರೇಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap